ಸಮಗ್ರ ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಚಿಕಿತ್ಸೆ ಶಿಬಿರ ಪೂರ್ವಭಾವಿ ಸಭೆ

ಕಲಬುರಗಿ:ಆ.20: ಕಲಬುರಗಿ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕಣ್ಣಿನ ತೊಂದರೆ ಇರುವವರಿಗೆ ಎಲ್ಲಾ ನಾಗರಿಕರಿಗೆ ಉಚಿತ ಕಣ್ಣಿನ ಪೂರೆ ಶಸ್ತ್ರಚಿಕಿತ್ಸೆ ಕಣ್ಣಿಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳಿಗೆ ವೈದರು ಸಾರ್ವಜನಿಕರಿಗೆ ಪರೀಕ್ಷೆ ಮಾಡಿ ಒಳ್ಳೆಯ ಜೌಷಧಿಗಳನ್ನು ನೀಡಲು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ನಿನ್ನೆ ನಡೆದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ನಡೆಯುವ ಆಶಾಕಿರಣ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಕಾರ್ಯಾಲಯ ಶಾಲಾ ಮಕ್ಕಳ ಕಣ್ಣಿನ ತಪಾಸಣೆ ಮಾಡುವುದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಈಗಾಗಲೇ ಪತ್ರಬರೆಯಲಾಗಿದೆ ಡಾ.ರಾಜಶೇಖರ ಮಾಲಿ ಅವರು ಸಭೆಯ ಗಮನಕ್ಕೆ ತಂದರು.
ಜಿಲ್ಲೆಯಾದ್ಯಂತ ನೇತ್ರತಜ್ಞರು ಹಾಗೂ ನೇತ್ರ ಅಧಿಕಾರಿ ಜಿಲ್ಲೆಯಲ್ಲಿ ತಾಲೂಕುಗಳಲ್ಲಿ ಲಭ್ಯವಿದ್ದು ಕಣ್ಣಿನ ತೊಂದರೆ ಇದ್ದರೆ ಸಂಪರ್ಕಿಸಲು ಈಗಾಗಲೇ ಅಭಿಯಾನ ಹಮ್ಮಿಕೊಳ್ಳಲು ಇನ್ನೂ ಅನುದಾನ ಬಿಡುಗಡೆಯಾಗಿರುವುದಿಲ್ಲ ಇನ್ನೂ 2-3 ದಿನಗಳ ಬರುತ್ತದೆ ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳು ಡಾ. ರಾಜಕುಮಾರ ಅವರು ಸಭೆಗೆ ತಿಳಿಸಿದರು.
ಜಿಲ್ಲಾ ಎಲ್ಲಾ ನಾಗರಿಕರಿಗೆ ಉಚಿತ ಕಣ್ಣಿತ ತಪಾಸಣೆ ಮಾಡುವುದು, ಉಚಿತ ಕನ್ನಡ ವಿತರಣೆ ಮಾಡಲಾಗುವುದು ಕಣ್ಣಿನ ಪೂರೆ ಶಸ್ತ್ರ ಚಿಕಿತ್ಸೆ ಮತ್ತು ಇತರೆ ಕಾಯಿಲೆಗಳ ಬಗ್ಗೆ ಚಿಕ್ಸಿತೆ ನೀಡಲಾಗುವುದು ಆಶಾಕಿರಣ ಅಭಿಯಾನದ ಉದ್ದೇಶಗಳಾಗಿವೆ ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳು ಡಾ. ರಾಜಕುಮಾರ ತಿಳಿಸಿದರು.
ಆಶಾ ಕಾರ್ಯಕರ್ತರಿಗೆ ಮನೆ ಮನೆ ಭೇಟಿ ನೀಡಲು ಮಕ್ಕಳಿಗೆ ಸಾರ್ವಜನಿಕರಿಗೆ ಕರೆ ತಂದು ಕಣ್ಣಿನ ತಪಾಸಣೆ ಮಾಡಲು ಈಗಾಗಲೇ ತಿಳಿಸಲಾಗಿದೆ ಹೆಚ್ಚಿನ ಜಾಗೃತಿ ಮೂಡಿಸಲು ಡಂಗೂರ ಸಾರಲು ತಿಳಿಸಲಾಗಿದೆ ಎಂದರು.
ಈ ಕಾರ್ಯಕ್ರಮವು ಜಿಲ್ಲೆಯಾದಂತ ಹಮ್ಮಿಕೊಳ್ಳುವ ಜಿಮ್ಸ್ ಮೆಡಿಕಲ್ ಕಾಲೇಜ್ ಹಾಗೂ ಇಎಸಐಸಿ ಮೆಡಿಕಲ್ ಕಾಲೇಜ್, ಕೆ.ಬಿ.ಎನ್. ಕಾಲೇಜ್, ಎಮ್.ಆರ್.ಎಮ್.ಸಿ. ಮೆಡಿಕಲ್ ಕಾಲೇಜ್ ಹಾಗೂ ಎನ್.ಜಿ.ಓ. ದೃಷ್ಟಿ ಕಣ್ಣಿನ ಆಸ್ಪತ್ರೆ ಬುರುಕ್ ನೇತ್ರಾಲಯ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರಗಳಿವೆ ಅವುಗಳ ಸಹಯೋಗದಲ್ಲಿ ನಿಮ್ಮ ಅಭಿಯಾನ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರಾಥಮಿಕ ಕಣ್ಣಿನ ಪರೀಕ್ಷೆ ಆಶಾ ರವರಿಂದ ಮನೆ ಮನೆಗೆ ಭೇಟಿ ಆಗಸ್ಟ್ 25 ರಿಂದ ಆಗಸ್ಟ್ 31 ರವರೆಗೆ ಹಮ್ಮಿಕೊಳ್ಳಲಾಗುವುದು ಎಂದು ಸಭೆಯ ಗಮನಕ್ಕೆ ಡಾ.ರಾಜಕುಮಾರ ಅವರು ತಿಳಿಸಿದರು.
ದ್ವಿತೀಯ ಕಣ್ಣಿನ ತಪಾಸಣೆ ನೇತ್ರಾಧಿಕಾರಿಗಳಿಂ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಆಸ್ಪತ್ರೆ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 31 ರವರೆ ಕಣ್ಣಿನ ತಪಾಸಣೆ ಮಾಡಲಾಗುವುದು ಎಂದರು.
ಕಣ್ಣಿನ ಪೂರೆ ಶಸ್ತ್ರ ಚಿಕಿತ್ಸೆ ನೇತ್ರ ತಜ್ಞರಿಂದ ಸೆಪ್ಟೆಂಬರ್ 1 ರಿಂದ ಡಿಸೆಂಬರ್ 31 ರವರೆಗೆ ಕನ್ನಡಕ ವಿತರಣೆ ಡಿಸೆಂಬರ್ 15 ರವರೆಗೆ ವಿತರಿಸಲಾಗುವುದೆಂದರು ಕನ್ನಡಕ ಒಳ್ಳೆಯ ಗುಣಮಟ್ಟದಾಗಿರಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲಾ ಪಂಚಾಯತ್ ಸಿ.ಇ.ಓ. ಭಂವರ್ ಸಿಂಣ್ ಮೀನಾ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿಗೆ ಗಜಾನನ ಉಪಸ್ಥಿತರಿದ್ದರು.
ಸಭೆಯಲ್ಲಿ ಡಬ್ಲೂಹೆಚ್‍ಓ ಅನಿಲ ತಾಳಿಕೋಟೆ, ಜಿಲ್ಲಾ ಸರ್ಜನ್ ಅಂಬರಾಯ ರುದ್ರವಾಡಿ, ಆರ್‍ಸಿಹೆಚ್. ಅಧಿಕಾರಿ ಶರಣಬಸಪ್ಪ ಖ್ಯಾತನಾಳ, ಜಿಲ್ಲಾ ಮಲೇರಿಯಾ ಅಧಿಕಾರಿ ಬಸವರಾಜ ಗುಳಿಗ್ಗಿ ಕಾಲರ ಅಧಿಕಾರಿ ವಿವೇಕಾನಂದ ರೆಡ್ಡಿ, ಟಿ.ಬಿ. ಅಧಿಕಾರಿ ಚಂದ್ರಕಾಂತ ನರಿಬೊಳಿ, ಜಿಲ್ಲಾ ಸರ್ವೇಲೈಸನ್ ಅಧಿಕಾರಿ ಡಾ. ಸುರೇಶ ಮೇಕಿನ ಸೇರಿದಂತೆ ತಾಲೂಕು ವೈದ್ಯಾಧಿಕಾರಿಗಳು ಮೆಡಿಕಲ್ ಕಾಲೇಜಿನ್ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.