ಸಮಗ್ರ ಅಭಿವೃದ್ಧಿಗೆ ಬಹುಜನ ಸಮಾಜವಾದಿ ಪಕ್ಷವನ್ನು ಬೆಂಬಲಿಸಿ


ಸಂಜೆವಾಣಿ ವಾರ್ತೆ            
 ಹಗರಿಬೊಮ್ಮನಹಳ್ಳಿ. ಮೇ.07  ಸಂವಿಧಾನ ಬದ್ಧ ಆಡಳಿತಕ್ಕೆ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಬಹುಜನ ಸಮಾಜವಾದಿ ಪಕ್ಷವನ್ನು ಬೆಂಬಲಿಸಿ ಎಂದು ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಹೆಚ್ ತಿಪ್ಪೇಸ್ವಾಮಿ ಸಾಮ್ರಾಟ್ ಅವರು ತಿಳಿಸಿದರು.
 ಪಟ್ಟಣದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭೂಮಿ ಇಲ್ಲದವರಿಗೆ ಮಹಿಳೆಯರ ಹೆಸರಿನಲ್ಲಿ ಮೂರು ಎಕರೆ ಭೂಮಿ ಮಂಜೂರು ಮಾಡಲಾಗುವುದು,ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು,ಎಲ್ಲಾ ಸಣ್ಣ ರೈತರ ಸಾಲ ಮನ್ನಾ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಲಾಗುವುದು ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಭುತ್ವ ಸಮಾಜವಾದ ಪರಿಕಲ್ಪನೆಗೆ ಅನುಗುಣವಾಗಿ ರಾಜ್ಯದ 10 ಕಡೆ ಪ್ರಯೋಗಾತ್ಮಕವಾಗಿ ಸಾಮೂಹಿಕ ಒಡೆತನದಲ್ಲಿ ಕೃಷಿ ಮತ್ತು ಕಿರು ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲಾಗುವುದು ಎಲ್ಲಾ ಜಾತಿಯ ಬಡ ವಿದ್ಯಾರ್ಥಿಗಳಿಗೆ ಹೈಟೆಕ್ ಹಾಸ್ಟೆಲ್ ನಿರ್ಮಾಣ, ವಿಧವಾ ,ವಿಕಲಚೇತನರ 5 ಸಾವಿರ ಗಳಿಗೆ ಮಾಸಾಶನ ಹೆಚ್ಚಿಸುವುದು ನಮ್ಮ ಪಕ್ಷದ ಪ್ರಣಾಳಿಕೆ ಆಗಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳಿಂದ ಅಭಿವೃದ್ದಿ ಅಸಾದ್ಯ ಮಾಯಾವತಿ ಅವರ ನಾಯಕತ್ವದ ಬಹುಜನ ಸಮಾಜವಾದಿ ಪಕ್ಷವನ್ನು ಬೆಂಬಲಿಸಿ ಅಭಿವೃದ್ದಿಗೆ ಸಹಕರಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿ.ಎಸ್. ಪಿ ಯ ರಾಜ್ಯ ಕಾರ್ಯದರ್ಶಿ ಮಹಮದ್ ಅಲಿ,ಬಳ್ಳಾರಿ ಹಾಗೂ ವಿಜಯನಗರ ಉಸ್ತುವಾರಿ ಕೆ. ಚಿದಾಂಬರ,ತಾಲೂಕ ಅದ್ಯಕ್ಷ ಇಟಗಿ ಪ್ರಕಾಶ್ ಇದ್ದರು.