ಸಮಗ್ರ ಅಭಿವೃದ್ಧಿಗೆ ಜಿ ಲಲ್ಲೇಶ್ ರೆಡ್ಡಿಯವರನ್ನು ಗೆಲ್ಲಿಸಿ : ಗಾಲಿ ಜನಾರ್ಧನ್ ರೆಡ್ಡಿ

ಸೇಡಂ, ಮಾ,10: ಇಲ್ಲಿ ಸಿಮೆಂಟ್ ಕಂಪನಿಗಳು ಇದರು ನಿರುದ್ಯೋಗದ ಸಮಸ್ಯೆ ಹೆಚ್ಚಳವಿದೆ, ಮುಂಬರುವ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಜಿ ಲಲ್ಲೇಶ್ ರೆಡ್ಡಿಯವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿದರೆ ಸೇಡಂನ ಸಮಗ್ರ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕೆಂದು ಕೆಆರ್ ಪಿಪಿ ಸಂಸ್ಥಾಪಕರಾದ ಸನ್ಮಾನ್ಯ ಶ್ರೀ ಗಾಲಿ ಜನಾರ್ಧನ ರೆಡ್ಡಿ ಮನವಿ ಮಾಡಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕೆ ಆರ್ ಪಿಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಶಿವಲಿಂಗ ರೆಡ್ಡಿ ಪಾಟೀಲ್ ಬೆನಕನಹಳ್ಳಿ ಕಾರ್ಯಕರ್ತ ಬೃಹತ್ ಸಮಾವೇಶದಲ್ಲಿ ಸ್ವಾಗತ ಭಾಷಣ ಮಾಡಿದರೇ ಕೆಆರ್ ಪಿಟಿ ಪಕ್ಷದ ಅಭ್ಯರ್ಥಿ ಜಿ ಲಲ್ಲೇಶ್ ರೆಡ್ಡಿಯವರು ಪ್ರಾಸ್ತಾವಿಕ ಮಾತನಾಡಿದರು.

ಈ ವೇಳೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ
ಪಕ್ಷದ ಪ್ರಮುಖ ಮುಖಂಡರಾದ,ಶರಣರೆಡ್ಡಿ ಜಿಲ್ಲೆಡಪಲ್ಲಿ, ನಾಗಭೂಷಣರೆಡ್ಡಿ
ಹೂಡಾ, ವೀರಾರೆಡ್ಡಿ ಹೂವಿನಬಾವಿ ಬಟಗೇರ,ಮಾಣಿಕರೆಡ್ಡಿ ಪಾಟೀಲ್ ಬಟಗೇರಾ,ವೆಂಕಟರೆಡ್ಡಿ ಪಾಟೀಲ್ ಮಾಧವಾರ್,ಅರುಣಾರೆಡ್ಡಿ, ಶ್ರೀಕಾಂತರೆಡ್ಡಿ ಮುಧೋಳ, ಪ್ರಕಾಶರೆಡ್ಡಿ ಪಾಟೀಲ್ ಯಾನಾಗುಂದಿ, ಭೀಮರೆಡ್ಡಿ ಜಿಲ್ಲೆಡಪಲ್ಲಿ,
ಅಯುಬಖಾನ್, ಯುಸೂಫ್, ರಾಘವೇಂದ್ರ ಅಗನೂರು,ಮಲ್ಲಿಕಾರ್ಜುನ ಸಜ್ಜನ, ಶರಣರೆಡ್ಡಿ, ಮಹೇಂದ್ರರೆಡ್ಡಿ,ತಿರುಪತಿರೆಡ್ಡಿ ಯಲುಗುವಲ್ಲಿ ಆಡಕಿ,ಮೋಹನರೆಡ್ಡಿ

ಬಟಗೇರಾ,ಸೇರಿದಂತೆ ಸುಮಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಸೇಡಂ ಗೆ ಬಂದು 15 ದಿವಸಗಳಲ್ಲಿಯೇ ಸುಮಾರು ಕಾರ್ಯಕರ್ತರನ್ನು ಬರಮಾಡಿಕೊಂಡ ಕೀರ್ತಿ ಜಿ ಲಲ್ಲೇಶ್ ರೆಡ್ಡಿ ಅವರಿಗೆ ಸಲ್ಲುತ್ತದೆ ಮುಂಬರುವ ದಿನಗಳಲ್ಲಿ ಸೇಡಂ ಕ್ಷೇತ್ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ.

ಗಾಲಿ ಜನಾರ್ದನ್ ರೆಡ್ಡಿ ಸಂಸ್ಥಾಪಕರು
ಕಲ್ಯಾಣ ರಾಜ್ಯ ಪ್ರಗತಿಪಕ್ಷ