ಸಮಗ್ರವಾಗಿ ಗ್ರಾಮ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಿ: ನಿತೀನ್ ಗುತ್ತೇದಾರ

ಅಫಜಲಪುರ:ಜ. 8; ಗ್ರಾಮ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದು ಎಂದು ಮಾಜಿ‌ ಜಿ.ಪಂ.ಅಧ್ಯಕ್ಷರಾದ ನಿತೀನ್ ಗುತ್ತೇದಾರ ಹೇಳಿದರು.

ತಾಲ್ಲೂಕಿನ ಹಸರಗುಂಡಗಿ ಗ್ರಾಮ ಪಂಚಾಯತಿ ನೂತನ ಸದಸ್ಯರಾಗಿ ಆಯ್ಕೆಯಾದ ಸದಸ್ಯರಿಂದ ‌ಸನ್ಮಾನ‌ ಸ್ವೀಕರಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಸ್ವಹಿತಕ್ಕಾಗಿ ರಾಜಕೀಯಕ್ಕೆ ಬರುವವರೆ ಹೆಚ್ಚಾಗಿರುವ ಸಂದರ್ಭದಲ್ಲಿ ತಾವುಗಳು ಗ್ರಾಮದ ಜನರ ಕಷ್ಟ ಹಾಗೂ ಮೂಲಸೌಕರ್ಯ ನಿವಾರಿಸಲು ಪ್ರಯತ್ನ ಮಾಡಿದಾಗ್ ಮಾತ್ರ ಜನರ ಪ್ರೀತಿ ವಿಶ್ವಾಸ ಗಳಿಸಿ ಮುಂದಿನ ದಿನಗಳಲ್ಲಿ ಮತ್ತೋಮ್ಮೆ ಚುನಾವಣೆ ನಿಲ್ಲಲು ಅವಕಾಶ ದೊರೆಯುತ್ತದೆ ಎಂದು ನೂತನ ಸದಸ್ಯರಿಗೆ ಗುತ್ತೇದಾರ ‌ಸಲಹೆ ನೀಡಿದರು.

ಖ್ಯಾತ ಉದ್ಯಮಿದಾರರು ಹಾಗೂ ಬಿಜೆಪಿ ಮುಖಂಡರಾದ ಕಲ್ಯಾಣರಾವ್ ಬಿರಾದಾರ ಮಾತನಾಡಿ, ಸರ್ಕಾರದಿಂದ ಬರುವ ಪ್ರತಿಯೊಂದು ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪುವುದರ ಜೊತೆಗೆ ಮನೆ ಇಲ್ಲದವರಿಗೆ ಮನೆ ಕಟ್ಟಿಸುವ ಮೂಲಕ ಗ್ರಾಮದ ಜನರ ಕಷ್ಟದಲ್ಲಿ ಭಾಗಿಯಾದಾಗ್ ಮಾತ್ರ ಅವರ ಮನಸ್ಸಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದು ನೂತನ ಸದಸ್ಯರಿಗೆ ಕಿವಿ ಮಾತು ಹೇಳಿದರು.

ನಮ್ಮ ಗ್ರಾಮ ‌ ಪಂಚಾಯತಿಗೆ ಹೆಚ್ಚಿನ ಗ್ರಾಮ ಒಳಗೊಂಡಿರುವುದರಿಂದ ಸರ್ಕಾರದಿಂದ ಬರುವ ಹಣ‌ ಸರಿದೂಗಿಸಲು ಸಾದ್ಯವಾಗುತ್ತಿಲ್ಲ. ಅದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಗ್ರಾಮ ಪಂಚಾಯತಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ನಮ್ಮ ನಾಯಕರಾದ ಮಾಲಿಕಯ್ಯ ಗುತ್ತೇದಾರ ಜೊತೆಗೂಡಿ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಬಿರಾದಾರ ಹೇಳಿದರು.

ಈ‌ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ‌‌ ಅಧ್ಯಕ್ಷ ರಹೆಮಾನ್‌ ಪಟೇಲ್‌, ಶಾಬುದ್ದೀನ್ ಪಟೇಲ್‌, ಸಂತೋಷ ಬಳಗುಂಪಿ, ಸುಭಾಷ್ ದುಕಾಂದಾರ್, ಬಸಯ್ಯ ಮಠ, ಮಂಜೂರು ಪಟೇಲ್ ಇದ್ದರು.