ಸಮಕಾಲಿನ ಕನ್ನಡ ಸ್ಥಿತಿಗತಿ ದತ್ತಿ ಉಪನ್ಯಾಸ


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.20: ವೀರಶೈವ ಮಹಾವಿದ್ಯಾಲಯದ, ಕನ್ನಡ ವಿಭಾಗ ಹಾಗೂ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಘಟಕ  ಇವರ ಸಹಯೋಗದಲ್ಲಿ ಲಿಂಗೈಕ್ಯ ರಾವ್,ಬಹದ್ದೂರು .ವೈ. ಮಹಾಲೇಶ್ವರಪ್ಪ ದತ್ತಿ, ಲಿಂಗೈಕ್ಯ  ಚೋರನೂರ್ ಡಾ.ಟಿ.ಕೆ ಬಸವರಾಜ ದತ್ತಿ ಲಿಂಗೈಕ್ಯ ಕೋಳೋರು ಪಂಪನಗೌಡ ಮತ್ತು ನೀಲಮ್ಮ ದತ್ತಿ ಸ್ಮರಣಾರ್ಥ “ ಸಮಕಾಲೀನ ಕನ್ನಡ ಸ್ಥಿತಿಗತಿಗಳು” ಎಂಬ ವಿಷಯ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ತಮ್ಮ ವೈಯಕ್ತಿಕ ಜೀನವನ್ನು ತ್ಯಾಗಮಾಡಿ ಸಮಾಜದ ಹೇಳಿಗೆ ದುಡಿದವರು. ಸಮಾಜಕೋಸ್ಕರ ತಮ್ಮ ಬದುಕನ್ನು ತ್ಯಾಗ ಮಾಡಿದವರು ಲಿಂಗೈಕ್ಯ  ಚೋರನೂರ್ ಡಾ.ಟಿ.ಕೆ ಬಸವರಾಜ ಅವರು. ಸುಮಾರು 50, 60 ವರ್ಷಗಳ ಹಿಂದೆ ಚೋರನೂರಿನ ಭಾಗದಲ್ಲಿ ಅನಕ್ಷರತೆ, ಬಡತನ, ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದವರು. ಮನೆ ಮನೆಗೆ ತಿರುಗಿ  ದವಸ ಧಾನ್ಯ ಹಣವನ್ನು ಎತ್ತಿ ಚೋರನೂರ್‍ನಲ್ಲಿ  ಶಾಲೆ, ಹಾಸ್ಟಲ್, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕಟ್ಟಿಸಿ ಸಮಾಜ ಸೇವೆಗೆ ತೊಡಗಿಸಿಕೊಂಡವರು. ಹಿಂದುಳಿದ ಮಕ್ಕಳಿಗೆ ಹಾಸ್ಟಲ್‍ಗಳನ್ನು ಕಟ್ಟಿ  ಊಟ , ವಸತಿ ಕಲ್ಪಿಸಿ ಹಳೀ ಹಳ್ಳಿಗಳಿಂದ ಎತ್ತಿನ ಗಾಡಿಯ ಮೂಲಕ ಮಕ್ಕಳನ್ನು ಕರೆತಂದು ವಿದ್ಯಾಭ್ಯಾಸ ಕೊಡಿಸಿದರು. ಸ್ವತಹ ವೈದ್ಯರಾಗಿ ಬಡವರ ದೀನ ದಲಿತರ ಸೇವೆಯನ್ನು ಮಾಡಿ ಸಮಾಜಕ್ಕೆ ನಿಸ್ವಾರ್ಥ ಸೆವೆಯನ್ನು ಬಹಿಸಿದವರು.
ಹಾಗೆಯೇ ಲಿಂಗೈಕ್ಯ ರಾವ್,ಬಹದ್ದೂರು .ವೈ. ಮಹಾಲೇಶ್ವರಪ್ಪ ನವರು ಕೂಡ ಬ್ರಿಟೀಷರ ಆಳ್ವಿಕೆಯ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಶಾಲಾ ಕಾಲೇಜು ಮತ್ತು ವಸತಿ ನಿಲಯಗಳಿಗೆ ಭೂಮಿ ಮತ್ತು ಹಣವನ್ನು ನೀಡಿ ಈ ಭಾಗದ ಜನರಿಗೆ ಶೈಕ್ಷಣಿಕ, ಸಾಮಾಜಿಕ ಅರಿವನ್ನು ಮೂಡಿಸಿ ನಿಸ್ವಾರ್ಥ ಸೇವೆಯನ್ನು  ಮಾಡಿದರು. ರಾಜಕೀಯವನ್ನು ಪ್ರವೇಶಿಸಿ ಆ ಮೂಲಕ ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡವರು. ಇಂಥವರ ಜೀವನ ಸಮಾಜಕ್ಕೆ ಮಾರ್ಗದರ್ಶನ ವಾಗುತ್ತದೆ ಎಂದು ಉಪನ್ಯಾಸಕರಾದ ಡಾ|| ಮನ್ಸೂರ್ ಅಲಿ ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ದರೂರು ಶಾಂತನಗೌಡ ಮಾತನಾಡುತ್ತ, ಕನ್ನಡ ಸಾಹಿತ್ಯ ಪರಿಷತ್ ಡಾ.ನಿಷ್ಠಿ ರುದ್ರಪ್ಪ ಅವರ ನೇತೃತ್ವದಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತಿದೆ. ಸುಮಾರು 220ಕ್ಕು ಹೆಚ್ಚು ದತ್ತಿಗಳನ್ನು ಸಂಗ್ರಹಿಸಿ ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು ನಿರಂತರ ಚಟುವಟಿಕೆಗಳಲ್ಲಿ ಪರಿಷತ್ ತೊಡಗಿಸಿಕೊಂಡಿದೆ. ನಾವುಕೂಡ ನಿಸ್ವಾರ್ಥ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಆ ಮೂಲಕ ಸಾಹಿತ್ಯ ಮತ್ತು ಸಾಹಿತ್ಯ ಪರಿಷತ್‍ಗೆ ಕೈ ಜೋಡಿಸಿ ಉತ್ತಮ ಕೆಲಸಗಳನ್ನು ಮಾಡಬೇಕೆಂದು ಕರೆ ನೀಡಿದರು.
ಸಮಕಾಲಿನ ಕನ್ನಡದ ಸ್ಥಿತಿಗತಿಗಳು ವಿಷಯ ಕುರಿತು ಉಪನ್ಯಾಸ ನೀಡಿದ ಡಾ.ಯು.ಶ್ರೀನಿವಾಸ ಮೂರ್ತಿ, ಕನ್ನಡ ಸಾಹಿತ್ಯ ಇಂದು ಅನೇಕ ಬಿಕ್ಕಟ್ಟುಗಳನ್ನು ಎದುರುಸುತ್ತಿದೆ. ಅದಕ್ಕೆ ಕಾರಣ ಆಧುನಿಕ ತಂತ್ರಜ್ಞಾನ ಮತ್ತು ಇಂಗ್ಲಿಷ್‍ನ ವ್ಯಾಮೋಹ ಕಾರಣಗಳಾಗಿವೆ ಎಂಬ ಅಭಿಪ್ರಾಯವಿದೆ. ಇದು ಸಮಂಜಸವಾದದ್ದಲ್ಲ. ಕನ್ನಡ ಸಾಹಿತ್ಯಕ್ಕೆ ಸುಧೀರ್ಘವಾದ ಪರಂಪರೆ ಇದೆ. ತನ್ನ ಸ್ಥಿತಿಗತಿಗಳನ್ನು ನಿರಂತರವಾಗಿ ಉಳಿಸಿಕೊಂಡು ಬೆಳಸಿಕೊಂಡು ಬಂದಿದೆ. ಅದು ತನ್ನ ತನವನ್ನು  ರಕ್ಷಿಸಿಕೊಂಡು ಹೋಗುತ್ತದೆಂದು ತಮ್ಮ ವಿಚಾರ ಧಾರೆಗಳನ್ನು  ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚೋರನೂರ್ ಟಿ ಕೊಟ್ರಪ್ಪ, ಅಬ್ದುಲ್ ಹೈ ತೋರಣಗಲ್ಲು , ಶ್ರೀ ನಾಗರಾಜ ಬೋಧಕ , ಬೋಧಕೇತರ ಸಿಬ್ಬಂಧಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ.ಶಿವಲಿಂಗಪ್ಪ ಹಂದಿಹಾಳ್ ಪ್ರ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಶ್ಯಾಮೂರ್ತಿ.ಜಿ ಕನ್ನಡ ವಿಭಾಗ ಸ್ವಾಗತಿಸಿದರು. ಶ್ರೀಮತಿ ಭ್ರಮರಾಂಭ ವಂದಿಸಿದರು. ಡಾ.ಕೆ.ನೀಲಮ್ಮ ಕಾರ್ಯಕ್ರಮ ನಿರೂಪಿಸಿದರು.