ಸಮಂತಾ ರ ಹಳೆ ಪೋಸ್ಟ್ ವೈರಲ್

ಹೈದರಾಬಾದ್ , ಏ ೭- ಬಹುಭಾಷಾ ನಟಿ ಸಮಂತಾ ಅವರು ಹಳೆಯ ಪೋಸ್ಟ್ ವೊಂದು ವೈರಲ್ ಆಗಿದೆ.

ನಟ ನಾಗ ಚೈತನ್ಯ ಜೊತೆ ’ಮಜಿಲಿ’ ಸಿನಿಮಾ ಮಾಡಿದ್ದ ಸಮಂತಾ ಇತ್ತೀಚೆಗೆ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಹಳೇ ನೆನಪುಗಳನ್ನು ಹಂಚಿಕೊಂಡಿರುವ ಸಮಂತಾ, ಐ ಲವ್ ಯೂ ಎಂದು ಬರೆದುಕೊಂಡಿದ್ದಾರೆ.

ಏ ಮಾಯಾ ಚೇಸಾವೆ ಚಿತ್ರದ ಮೂಲಕ ಆತ್ಮೀಯರಾದ ನಾಗ ಚೈತನ್ಯ-ಸಮಂತಾ, ಕೆಲ ವರ್ಷಗಳ ಡೇಟಿಂಗ್ ಬಳಿಕ ಮದುವೆಯಾದರು. ಕೆಲವು ವರ್ಷಗಳ ಕಾಲ ವೈವಾಹಿಕ ಜೀವನವನ್ನು ಆನಂದಿಸಿದ ಅವರು ಅನಿರೀಕ್ಷಿತವಾಗಿ ವಿಚ್ಛೇದನವನ್ನು ಘೋಷಿಸಿದ್ದಾರೆ.

ಮದುವೆಯ ನಂತರ ಸಮಂತಾ-ಅಕ್ಕಿನೇನಿ ನಾಗ ಚೈತನ್ಯ ಒಟ್ಟಾಗಿ ಮಜಿಲಿ ಸಿನಿಮಾ ಮಾಡಿದ್ದರು. ಶಿವ ನಿರ್ವಾಣ ನಿರ್ದೇಶನದ ಈ ಪ್ರೇಮಕಥೆಯ ಚಿತ್ರ ೨೦೧೯ ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಚೈತು ಹಾಗೂ ಸ್ಯಾಮ್ ದಂಪತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ನಿಜ ಜೀವನದ ಜೋಡಿ ಬೆಳ್ಳಿತೆರೆ ಜೋಡಿಯಾಗಿ ಫುಲ್ ಮಾರ್ಕ್ಸ್ ಪಡೆದರು

ಮಜಿಲಿ ಸಿನಿಮಾ ಬಿಡುಗಡೆಯಾಗಿ ೪ ವರ್ಷಗಳೇ ಕಳೆದಿವೆ. ಈ ಸಂದರ್ಭದಲ್ಲಿ ಸಮಂತಾ ತಮ್ಮ ಅಭಿಮಾನಿಗಳೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡು ಇಂಟ್ರೆಸ್ಟಿಂಗ್ ಪೋಸ್ಟ್ ಮಾಡಿದ್ದಾರೆ. ಮಜಿಲಿ ಐ ಲವ್ ಯೂ ಎಂದು ಬರೆದುಕೊಂಡಿದ್ದಾರೆ. ಶ್ರಾವಣಿಯಂತಹ ಪಾತ್ರ ನೀಡಿದ್ದಕ್ಕೆ ಐ ಲವ್ ಯೂ ಶಿವ ನಿರ್ವಾಣ ಎಂದು ತಿಳಿಸಿದ್ದಾರೆ.

ಮೊನ್ನೆಯಷ್ಟೇ ಈ ಚಿತ್ರ ಇಂಡಸ್ಟ್ರಿಯಲ್ಲಿ ೧೩ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಾಗ ಚೈತನ್ಯ ಮತ್ತು ಸಮಂತಾ ಹಾಕಿದ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು. ವಿಚ್ಛೇದನದ ನಂತರ ನಾಗ ಚೈತನ್ಯ ಮೊದಲ ಬಾರಿಗೆ ಸಮಂತಾ ಫೋಟೋವನ್ನು ಹಂಚಿಕೊಂಡಿದ್ದರು.