ಸಮಂತಾ ನಾಗ ಚೈತನ್ಯ ವಿಚ್ಛೇದನ

ಹೈದರಾಬಾದ್, ಸೆ ೨೪- ಟಾಲಿವುಡ್ ನ ಸೂಪರ್ ಸ್ಟಾರ್ ಗಳಾದ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೆಲದಿನಗಳಿಂದ ಹರಿದಾಡುತ್ತಲೆ ಇದೆ, ಅದಕ್ಕೆ ಪುಷ್ಠಿ ನೀಡುವಂತೆ ಇದೀಗ ಮತ್ತೊಂದು ಸುದ್ದಿ ಭಾರಿ ಸದ್ದು ಮಾಡುತ್ತಿದೆ.
ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ದಾಂಪತ್ಯದಲ್ಲಿ ಕಲಹ ಉಂಟಾಗಿದ್ದು, ಡಿವೋರ್ಸ್ ಪಡೆಯುವ ಹಾದಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸಮಂತಾ ಅಥವಾ ನಾಗಚೈತನ್ಯ ಯಾರೊಬ್ಬರು ಸ್ಪಷ್ಟನೆ ನೀಡಿಲ್ಲ. ಆದರೆ ಸಮಂತಾ ಟ್ವಿಟ್ಟರ್‌ನಲ್ಲಿ ಸರ್‌ನೇಮ್ ತೆಗೆದು ಹಾಕಿದರು. ‘ಅಕ್ಕಿನೇನಿ’ ಹೆಸರು ತೆಗೆದು ‘ಎಸ್’ ಎಂದು ಉಳಿಸಿಕೊಂಡಿದ್ದಾರೆ. ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಸುದ್ದಿಯನ್ನು ಅಕ್ಟೋಬರ್ ೭ ರಂದು ಅಧಿಕೃತಪಡಿಸಲು ತೀರ್ಮಾನಿಸಿದ್ದಾರಂತೆ. ಆ ದಿನ ನಾಗ್-ಸ್ಯಾಮ್ ಮದುವೆಯಾದ ದಿನ. ಬಹುಶಃ ಅದೇ ದಿನವೇ ಡಿವೋರ್ಸ್ ಘೋಷಣೆ ಮಾಡುವ ಸಾಧ್ಯತೆ ಎಂದು ಎನ್ನಲಾಗಿದೆ.
ಒಂದು ವೇಳೆ ವಿಚ್ಛೇದನ ಪಡೆಯುವುದು ಖಚಿತವಾದರೆ ಸಮಂತಾಗೆ ನಾಗ ಚೈತನ್ಯ ಕಡೆಯಿಂದ ಬರುವ ಜೀವನಾಂಶ ಎಷ್ಟು ಎಂಬುದು ಈಗ ಹಾಟ್ ಟಾಪಿಕ್ ಆಗಿದೆ. ಹೌದು ನಾಗ್ ಜೊತೆಗಿನ ದಾಂಪತ್ಯ ಕೊನೆಗೊಳಿಸಿಕೊಳ್ಳಲು ೫೦ ಕೋಟಿ ಪರಿಹಾರ ಪಡೆದುಕೊಂಡಿದ್ದಾರಂತೆ. ಡಿವೋರ್ಸ್‌ಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ.
ಸಮಂತಾ ಮತ್ತು ನಾಗ ಚೈತನ್ಯ ನಡುವೆ ಮತ್ತೆ ಸಾಮರಸ್ಯ ಮೂಡಿಸಲು ಎರಡೂ ಕುಟುಂಬದವರು ಪ್ರಯತ್ನಿಸುತ್ತಿದ್ದಾರೆ. ಸಂಸಾರದ ಕಿರಿಕಿರಿಯಿಂದಾಗಿ ಅವರು ಆಪ್ತ ಸಮಾಲೋಚಕರನ್ನೂ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಹಾಗಿದ್ದರೂ ಕೂಡ ಈ ಜೋಡಿ ನಡುವಿನ ಅಸಮಾಧಾನ ಸರಿ ಆಗಿಲ್ಲ. ಹಾಗಾಗಿ ವಿಚ್ಛೇದನ ಪಡೆಯುವುದು ಬಹುತೇಕ ಖಚಿತ ಎಂಬ ಸುದ್ದಿ ಹರಿದಾಡುತ್ತಿದೆ.
ಸದ್ಯ ಸಮಾಂತ್‌ಗೆ ಸಿನಿಮಾ ಮಾತ್ರವಲ್ಲದೇ ವೆಬ್ ಸಿರೀಸ್‌ಗಳಿಂದಲೂ ಅವರಿಗೆ ಸಿಕ್ಕಾಪಟ್ಟೆ ಆಫರ್ ಬರುತ್ತಿದೆ. ಈ ವರ್ಷ ಬಿಡುಗಡೆಯಾದ ‘ದಿ ಫ್ಯಾಮಿಲಿ ಮ್ಯಾನ್ ೨’ ವೆಬ್ ಸರಣಿ ಯಶಸ್ಸಿನ ನಂತರ ಸಮಂತಾ ಇಮೇಜ್ ಬದಲಾಗಿದೆ. ಈ ವೆಬ್ ಸಿರೀಸ್‌ನಲ್ಲಿ ಅವರು ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದರು. ಕೆಲವು ಇಂಟಿಮೇಟ್ ದೃಶ್ಯಗಳಲ್ಲೂ ಅವರು ಕಾಣಿಸಿಕೊಂಡಿದ್ದರು. ಅಂತಹ ಇನ್ನೂ ಕೆಲವು ದೃಶ್ಯಗಳನ್ನು ರಿಲೀಸ್ಗೂ ಮೊದಲೇ ನಿರ್ದೇಶಕರು ಸೆನ್ಸಾರ್ ಮಾಡಿದರು ಎಂಬ ಮಾತಿದೆ. ಅವರು ಇಂಥ ಪಾತ್ರ ಮಾಡಿದ್ದು ಕೂಡ ಸಂಸಾರದ ಸಾಮರಸ್ಯ ಕೆಡಲು ಕಾರಣ ಆಗಿರಬಹುದು ಎಂಬ ಗುಮಾನಿ ಇದೆ.