ಸಮಂತಾ ಎಲ್ಲಿದ್ದಾರೆ ನಾಗಾರ್ಜುನ ಪ್ರಶ್ನೆ

ಹೈದರಾಬಾದ್,ಸೆ.೪-ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋ ಸೀಸನ್-೭ ಅಬ್ಬರದಿಂದ ಆರಂಭವಾಗಿದೆ. ಆತಿಥೇಯ ನಾಗಾರ್ಜುನ ಎಲ್ಲಾ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಿ ಬೀಗ ಹಾಕಿದರು. ಒಟ್ಟು ೧೪ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ.
ಈ ನಡುವೆ ಬಿಗ್ ಬಾಸ್-೭ ರ ಆರಂಭಿಕ ಸಂಚಿಕೆಯಲ್ಲಿ ಟಾಲಿವುಡ್ ನ ಯಂಗ್ ಹೀರೋ ವಿಜಯ್ ದೇವರಕೊಂಡ ಸದ್ದು ಮಾಡಿದರು. ಖುಷಿ ಚಿತ್ರದ ಪ್ರಚಾರಕ್ಕೆ ಬಂದಿದ್ದ ವಿಜಯ್ ದೇವರಕೊಂಡ ತಮ್ಮದೇ ಶೈಲಿಯಲ್ಲಿ ಪ್ರೇಕ್ಷಕರನ್ನು ರಂಜಿಸಿದರು.
ಈ ವೇಳೆ ಮಾತನಾಡಿದ ನಾಗಾರ್ಜುನ, ವಿಜಯ್ ದೇವರಕೊಂಡ ಸಮಂತಾ ಎಲ್ಲಿದ್ದಾರೆ ಎಂದು ತಮ್ಮ ಮಾಜಿ ಸೊಸೆಯ ಬಗ್ಗೆ ಕೇಳಿದರು. ನಾಗಾರ್ಜುನ ಅವರ ಮಗ ನಾಗಚೈತನ್ಯ ಮತ್ತು ಸಮಂತಾ ಅವರ ವಿವಾಹ ವಿಚ್ಛೇದನಲ್ಲಿ ಕೊನೆಗೊಂಡದ್ದನ್ನು ಇಲ್ಲಿ ನೆನೆಯಬಹುದು.
ಸಮಂತಾ ಅಮೆರಿಕಾದಲ್ಲಿದ್ದಾರೆ, ಅಲ್ಲಿ ಖುಷಿ ಪ್ರೀಮಿಯರ್‌ಗಳಿಗಾಗಿ ಪ್ರಚಾರ ಮಾಡುತ್ತಿದ್ದಾರೆ ಮತ್ತು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಜಯ್ ದೇವರಕೊಂಡ ಬಹಿರಂಗಪಡಿಸಿದ್ದಾರೆ.
ಖುಷಿ ಚಿತ್ರದಲ್ಲಿ ಯಾರು ಯಾರನ್ನು ಡಾಮಿನೇಟ್ ಮಾಡಿದ್ದಾರೆ ಎಂದು ನಾಗ್ ಕೇಳಿದಾಗ, ಹೆಂಡತಿಯನ್ನು ಗಂಡನಿಂದ ಎಂದಿಗೂ ಡಾಮಿನೇಟ್ ಮಾಡಲು ಸಾಧ್ಯವಿಲ್ಲ ಎಂದು ವಿಜಯ್ ದೇವರಕೊಂಡ ಉತ್ತರಿಸಿದರು.