
ನ್ಯೂಯಾರ್ಕ್,ಅ.೨೧-ಚಿತ್ರರಂಗದ ಬಹು ಬೇಡಿಕೆಯ ನಟಿ ಸಮಂತಾ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆಯಿಲ್ಲ. ಸುಮಾರು ಹದಿಮೂರು ವರ್ಷಗಳಿಂದ ಆಕೆ ಸಿನಿರಂಗದಲ್ಲಿ ಸಕ್ರಿಯವಾಗಿದ್ದಾರೆ. ಸ್ಟಾರ್ ನಟರ ಜೊತೆಗೆ ಅನೇಕ ಸೂಪರ್ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಆರೋಗ್ಯ ದೃಷ್ಟಿಯಿಂದ ಆಕೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದು, ಇದೀಗ ಚಿಕಿತ್ಸೆಗಾಗಿ ಅಮೇರಿಕಾಗೆ ಹಾರಿದ್ದಾರೆ.

ನಟಿ ಸಮಂತಾ ಅಮೇರಿಕಾದಲ್ಲಿ ಸದ್ದು ಮಾಡುತ್ತಿದ್ದಾರೆ. ನ್ಯೂಯಾರ್ಕ್ ನಲ್ಲಿ ಭಾರತೀಯರು ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯ ಪರೇಡ್ ನಲ್ಲಿ ಭಾಗವಹಿಸಿದ್ದು ರ಼್ಯಾಲಿಯಲ್ಲಿ ಸಮಂತಾ ತುಂಬಾ ಚುರುಕಾಗಿ ಓಡಾಡಿದ್ದು. ತಮ್ಮ ಅಮ್ಮನ ಜೊತೆ ನ್ಯೂಯಾರ್ಕ್ ಗೆ ಹೋಗಿರುವ ಸಮಂತಾ ಸ್ನೇಹಿತರ ಜೊತೆ ಸುಂದರ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ರೆಸ್ಟೋರೆಂಟ್‌ಗಳಲ್ಲಿ ರುಚಿಕರವಾದ ಆಹಾರವನ್ನು ಸವಿಯುವುದು. ಇದಲ್ಲದೆ, ಅಮೆರಿಕಾದಲ್ಲಿ ಸಹ, ಅವರು ಜಿಮ್ ಹೋಗುವುದನ್ನು ಬಿಡಲಿಲ್ಲ. ಜಿಮ್‌ನಲ್ಲಿರುವ ಫೋಟೋ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ಮತ್ತೊಂದೆಡೆ, ವಿಜಯ್ ದೇವರಕೊಂಡ ಜೊತೆಗಿನ ಅವರ ಇತ್ತೀಚಿನ ಚಿತ್ರ ’ಖುಷಿ’ ಸೆಪ್ಟೆಂಬರ್ ೧ ರಂದು ಬಿಡುಗಡೆಯಾಗಲಿದೆ.

ಆಕೆ ಸಿನೆಮಾಗಳಿಂದ ಮಾತ್ರವಲ್ಲದೇ ಹೆಚ್ಚಾಗಿ ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾದರು. ಅಕ್ಕಿನೇನಿ ನಾಗಚೈತನ್ಯ ಜೊತೆಗೆ ವಿಚ್ಚೇದನ, ಬಳಿಕ ಸಿನೆಮಾಗಳು, ಬಳಿಕ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾದರು. ಈ ಎಲ್ಲಾ ಕಾರಣಗಳಿಂದ ಆಕೆ ಭಾರಿ ಸುದ್ದಿಯಾದರು. ಆಕೆಗೆ ಸಂಬಂಧಿಸಿದ ವಿಚಾರಗಳೂ ಸಹ ಕಡಿಮೆ ಸಮಯದಲ್ಲೇ ವೈರಲ್ ಆಗಿದ್ದವು. ಇದೀಗ ಸಮಂತಾ ಮತ್ತೆ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಯೋಗಾ, ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಾ ಬ್ಯುಸಿಯಾಗಿದ್ದಾರೆ. ಇದೀಗ ಚಿಕಿತ್ಸೆ ಪಡೆದುಕೊಳ್ಳಲು ಅಮೇರಿಕಾಗೆ ಹೋಗಿದ್ದಾರೆ.