ಸಭ್ ರಿಜಿಸ್ಟರ್ ಕಚೇರಿ ಮುಂದಿನ ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ಸಾವಿರ ರೂ ದಂಡ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಸೆ 24 : ನಗರದ ಸಬ್ ರಿಜಿಸ್ಟರ್ ಕಚೇರಿ ಮುಂದಿನ‌ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿದರೆ ಪೊಲೀಸರು ಒಂದು ಸಾವಿರ ರೂ ದಂಡ ಹಾಕುತ್ತಾರೆ.
ಸಬ್ ರಿಜಿಸ್ಟರ್ ಕಚೇರಿಗೆ ಬರುವ ಜನ ತಮ್ಮ ವಾಹನಗಳನ್ನು ಕಚೇರಿ ಆವರಣ ಅಷ್ಟೇ ಅಲ್ಲದೆ. ಕಚೇರಿ ಮುಂದಿನ ರಸ್ತೆಯಲ್ಲೂ ಬೈಕ್ ಮತ್ತು ಕಾರ್ ಗಳನ್ನು ಪಾರ್ಕಿಂಗ್ ಮಾಡಲಾಗುತ್ತಿತ್ತು.
ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅದರಲ್ಲೂ ಬೆಳಿಗ್ಗೆ ವಾಹನಗಳ ದಟ್ಟಣೆ ಹೆಚ್ಚಿ ತುಂಬಾ ಸಮಸ್ಯೆ ಆಗುತ್ತಿತ್ತು.
ಈ ಬಗ್ಗೆ ಎಸ್ಪಿ ಅಡಾವತ್ ಅವರಿಗೆ ಮಾಧ್ಯಮ ಪ್ರತಿನಿಧಿಗಳು ಗಮನಕ್ಕೆ ತಂದ ಮೇಲೆ. ಅವರ ಆದೇಶದಂತೆ ಈಗ ಸಬ್ ರಿಜಿಸ್ಟರ್ ಕಚೇರಿ ಮುಂಭಾಗದ ರಸ್ತೆಯಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧ ಮಾಡಿದ್ದು. ಅಲ್ಲಿ ನಿಲ್ಲಿಸುವ ವಾಹನಗಳಿಗೆ ಸಂಚಾರಿ ಪೊಲೀಸರು ಒಂದೊಂದು ವಾಹನಕ್ಕೆ ಒಂದು ಸಾವಿರ ರೂ ದಂಡ ವಿಧಿಸುತ್ತಿದ್ದಾರೆ.
ಹಳ್ಳಿಗಳಿಂದ ಬರುವ ಕೆಲವರು ಈ ಬಗ್ಗೆ ಅರಿಯದೇ ಪೊಲೀಸರು ಬರುವ ಮುನ್ನವೇ ನಿಲ್ಲಿಸಿ ಕಚೇರಿ‌ ಒಳಗೆ ಹೋಗಿರುತ್ತಾರೆ. ಅಂತವರು ದಂಡ ಕಟ್ಟಬೇಕಾಗುತ್ತಿದೆ. ಅದಕ್ಕಾಗಿ  ಡಿಸಿ ಕಚೇರಿಯಿಂದ ನೀರಾವರಿ ಇಲಾಖೆ ಕಚೇರಿ ವರೆಗೆ ನೋ ಪಾರ್ಕಿಂಗ್  ಎಂಬ ಫಲಕ ಅಳವಡಿಸಬೇಕೆಂಬುದು ಜನರ ಆಗ್ರಹವಾಗಿದೆ.