ಸಭೆ ಸಮಾರಂಭಗಳಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ : ಡಾ. ಚಂದ್ರಗುಪ್ತ ಎಚ್ಚರಿಕೆ

ಮೈಸೂರು, ನ.4: ಸಭೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮ, ಸರಣಿಗಳಲ್ಲಿ ಕೋವಿಡ್ ಮಾರ್ಗಸೂಚಿ ವ್ಯಾಪಕ ಉಲ್ಲಂಘನೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರ ಪೆÇಲೀಸ್ ಆಯುಕ್ತ ಡಾ. ಚಂದ್ರಗುಪ್ತ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು ಕೋವಿಡ್-19 ಸಾಂಕ್ರಾಮಿಕ ಸೋಂಕು ತಡೆಯುವ ನಿಟ್ಟಿನಲ್ಲಿ ಸತತ ಪ್ರಯತ್ನಗಳು ಕಳೆದ ಒಂಭತ್ತು ತಿಂಗಳಿನಿಂದ ನಡೆಯುತ್ತಲೇ ಇವೆ. ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಈ ಮಾರಕ ಸೋಂಕಿನಿಂದ ಸಾರ್ವಜನಿಕರನ್ನು ರಕ್ಷಿಸುವ ಸಲುವಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪೆÇಲೀಸ್ ಇಲಾಖೆ ಕೂಡ ಹಗಲಿರುಳು ಶ್ರಮಿಸುತ್ತಿದ್ದು ಸೋಂಕು ಹತೋಟಿಗೆ ತರುವ ಪ್ರಯತ್ನವಾಗಿ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ ಸಂದರ್ಭದಲ್ಲಂತೂ ಪೆÇಲೀಸ್ ಇಲಾಖೆ ಸಮಯ ಪರಿಗಣನೆ ಇಲ್ಲದೆ ಜನರ ಅಮೂಲ್ಯ ಪ್ರಾಣರಕ್ಷಣೆಗೋಸ್ಕರ ಅವಿರತ ಸೇವೆ ಒದಗಿಸಿದೆ.
ಕ್ರಮೇಣ ಸರ್ಕಾರ ಹಂತಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಿದಾಗ ಜನಜೀವನ ಸಹಜಸ್ಥಿತಿಗೆ ಮರಳುವ ವಿಶ್ವಾಸದ ನಡುವೆಯೇ ಕೋವಿಡ್-19 ನಿಯಂತ್ರಣ ಪ್ರಯತ್ನದಲ್ಲಿ ಎಲ್ಲೋ ಒಂದು ಕಡೆ ಹಿನ್ನಡೆಯಾಗುತ್ತಿರುವುದು ಗಮನಕ್ಕೆ ಬರುತ್ತಿದೆ ಎಂದಿದ್ದಾರೆ.
ಅದರಲ್ಲೂ ಸಭೆ-ಸಮಾರಂಭ, ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳು, ಪ್ರತಿಭಟನೆ ಧರಣಿ ಇಂತಹ ಸಂದರ್ಭದಲ್ಲಿ ಜನ ರು ತಮಗರಿವಿಲ್ಲದಂತೆ ಕೋವಿಡ್-19 ಮಾರ್ಗಸೂಚಿಗಳನ್ನು ಧಿಕ್ಕರಿಸುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು , ಮಾಸ್ಕ್ ಧರಿಸದಿರುವುದು, ಒಂದು ವೇಳೆ ಧರಿಸಿಯೂ ಆಗಾಗ ಸರಿಸಿ ಮಾತನಾಡುತ್ತಿರುವುದು, ಪರಸ್ಪರ ಸ್ಪರ್ಶಿಸುವುದು, ಹೀಗೆ ಸೋಂಕು ಹರಡಲು ಆಸ್ಪದ ಮಾಡಿಕೊಡುವ ಸ್ವೇಚ್ಛಾಚಾರದ ವರ್ತನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಪೆÇಲೀಸ್ ಇಲಾಖೆ ಗಮನಿಸಿರುವಂತೆ ಇಂತಹ ಕಾರ್ಯಕ್ರಮಗಳಲ್ಲಿ ಜನಮಾತ್ರವಲ್ಲ, ಜನಪ್ರತಿನಿಧಿಗಳು, ರಾಜಕೀಯ ಮುಖಂಡರಲ್ಲದೆ ಅಧಿಕಾರಿಗಳು ಕೂಡ ತಮ್ಮ ಉಪಸ್ಥಿತಿಯನ್ನು ಸ್ಥಿರೀಕರಿಸುವ ಸಲುವಾಗಿ ಫೆÇೀಟೋ/ವಿಡಿಯೋಗಳಿಗೆ ಮುಗಿಬೀಳುತ್ತಿದ್ದಾರೆ. ಸಹಜ ಎಂಬಂತೆ ಫೆÇೀಟೋಗ್ರಾಫರ್/ವಿಡಿಯೋಗ್ರಾಫರ್ ಗಳು ಏಕಕಾಲದಲ್ಲಿ ಎಲ್ಲರನ್ನೂ ಕ್ಯಾಮರಾದಲ್ಲಿ ಒಟ್ಟಿಗೆ ಸೆರೆ ಹಿಡಿಯಬೇಕೆಂಬ ಉದ್ದೇಶದಿಂದ ಹತ್ತಿರಹತ್ತಿರ ಸರಿದು ಗುಂಪೂಗೂಡುವಂತೆ ಸಲಹೆ ನೀಡುವುದಿದೆ. ಹಾಗಾಗಿ ಕೋವಿಡ್ 19ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಪಾಲಿಸವಂತೆ ಮಾಧ್ಯಮಗಳು ಜನರಿಗೆ ಮನವರಿಕೆ ಮಾಡಿಕೊಡಬೇಕು. ಅವರನ್ನು ಪ್ರೇರೇಪಿಸುವುದು ಒಂದು ಪರಿಣಾಮಕಾರಿ ಮನವರಿಕೆಯಾಗಿದೆ. ಮಾಧ್ಯಮ/ಪತ್ರಿಕೆಗಳು ಇದುವರೆಗೂ ಸೋಂಕು ನಿಯಂತ್ರಣಕ್ಕೆ ಭಾರೀ ಪ್ರಮಾಣದಲ್ಲಿ ಸಹಕರಿಸುತ್ತ ಬಂದಿವೆ. ಇನ್ನು ಮುಂದೆಯೂ ಈ ಸೋಂಕು ನಿಯಂತ್ರಣ ಹಾಗೂ ಸಾಮಾಜಿಕ ಕಳಕಳಿ ದೃಷ್ಟಿಯಿಂದ ಪೆÇಲೀಸ್ ಇಲಾಖೆ ನಿಮ್ಮ ಸಹಕಾರ ಕೋರಲಿದೆ ಎಂದಿದ್ದಾರೆ.
ಅಷ್ಟೇ ಅಲ್ಲದೆ ಕೆಲವು ಸಲಹೆಗಳನ್ನು ನೀಡಿದ್ದು ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಜನರು ಪಾಲ್ಗೊಂಡಂತಹ ಯಾವುದೇ ಕಾರ್ಯಕ್ರಮದ ಫೆÇೀಟೋ, ವಿಡಿಯೋಗಳನ್ನು ತೆಗೆಯುವುದಾಗಲಿ, ಸ್ವೀಕರಿಸುವುದಾಗಲಿ ಹಾಗೂ ಪ್ರಚುರಪಡಿಸುವುದನ್ನು ನಿಷೇಧಿಸಲಾಗಿದೆ. ಸಾಮಾಜಿಕ, ರಾಜಕೀಯ, ಧಾರ್ಮಿಕ ಇನ್ನಾವುದೇ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಫೆÇೀಟೋ ಇಲ್ಲವೆ ವಿಡಿಯೋ ತೆಗೆಸಿಕೊಳ್ಳಲು ಮುಂದಾಗುವವರಿಗೆ ಒತ್ತಾಸೆ ನೀಡದೆ ಕೋವಿಡ್-19 ಸೋಂಕು ಬಾಧೆ ಎಚ್ಚರಿಕೆ ನೀಡಿ ಸಾಮಾಜಿಕ ಅಂತರ ವಿಲ್ಲದೆ ಫೆÇೀಟೋ/ವಿಡಿಯೋ ತೆಗೆಯಲ್ಲ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.
ಒಂದು ವೇಳೆ ಇಂತಹ ಸಾಮೂಹಿಕ ಸಮಾರಂಭ/ಕಾರ್ಯಕ್ರಮಗಳಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲಿಸದೇ ಇರುವುದು, ಉಲ್ಲಂಘನೆ ಮಾಡುವುದು ಕಂಡು ಬಂದಲ್ಲಿ ಕೂಡಲೇ ಕೋವಿಡ್ ಕಂಟ್ರೋಲ್ ರೂಂ 1077,0821-2423800,0821-2957711,-0821-2957811 ಅಥವಾ ಪೆÇಲೀಸ್ ಕಂಟ್ರೋಲ್ ರೂಂ 100,2418339 ಗೆ ಮಾಹಿಹಿ ನೀಡುವಂತೆ ಕೋರಿದ್ದಾರೆ.