ಸಭಾಪತಿ ಆದೇಶ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತ

ಕಲಬುರಗಿ.ಜ.೫- ವಿಧಾನ ಪರಿಷತ್ತಿನ ಗದ್ದಲ ವಿಚಾರಕ್ಕೆ ಸಂಬಂಧಿಸಿದಂತೆ ಸಭಾಪತಿಗಳ ತನಿಖೆಯ ಆದೇಶ ಕೇವಲ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಇಂದಿಲ್ಲಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಷತ್ ಸದಸ್ಯರ ನಡವಳಿಕೆಗಳ ಕುರಿತು ಸಭಾಪತಿ ತನಿಖೆಗೆ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ರೀತಿಯ ಗದ್ದಲ ಗಲಾಟೆ ಯಾರೂ ನಿರೀಕ್ಷಿಸಿರಲಿಲ್ಲ. ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ೧೪ ದಿನ ಕಳೆದಿತ್ತು. ಹೀಗಾಗಿ ಅವರಾಗಿಯೇ ಕುರ್ಚಿ ಬಿಟ್ಟು ಕೊಡುತ್ತಾರೆ ಎನ್ನುವ ವಿಶ್ವಾಸ ಇತ್ತು ಎಂದರು.
ಬೆಲ್ ನಂತರವೂ ಸಭಾಪತಿ ಬಾರದಿರುವ ಕಾರಣ ಉಪಸಭಾಪತಿಯವರನ್ನು ಕೂರಿಸಲಾಯಿತು
ಇದಾದನಂತರ ಅನಿರೀಕ್ಷಿತ ರೀತಿಯಲ್ಲಿ ಗಲಾಟೆ ಗದ್ದಲ ನಡೆಯಿತು ಈ ಕುರಿತು ನಡೆಯುತ್ತಿರುವ ತನಿಖೆ ಕೇವಲ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿದೆ ಎಂದರು.
ಪಕ್ಷಗಳ ವಿಲೀನದ ಹೆಸರಲ್ಲಿ ಜೆಡಿಎಸ್ ಇಬ್ಬಾಗ ಮಾಡಲು ಬಿಜೆಪಿ ತಂತ್ರ ಮಾಡುತ್ತಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರೇ ವಿಧಾನ ಪರಿಷತ್ತಿನಲ್ಲಿ ನಮಗೆ ಬೆಂಬಲಿಸಿದ್ದಾರೆ.
ಕಳೆದ ಒಂದು ವರ್ಷದಿಂದ ರಾಜ್ಯ ವಿವಿಧ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಯಾವುದೇ ಶಾಸಕರಿಗೂ ಮೊದಲಿನಂತೆ ಬಜೆಟ್ ನೀಡಲು ಸಾಧ್ಯವಾಗಿಲ್ಲ ಎಂದರು.
ಎಲ್ಲಾ ಕೆಲಸವು ಸರಿಯಾಗಿ ನಡೆಯುತ್ತಿವೆ ಎಂದು ಆತ್ಮವಿಶ್ವಾಸದಿಂದ ಯಾರು ಹೇಳುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರು.