
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಅ.22: ಇಲ್ಲಿನ ಮಹಾ ನಗರ ಪಾಲಿಕೆಗೆ ತನ್ನ ಸಾಮಾನ್ಯ ಸಭೆಯನ್ನು ನಡೆಸಲು ಒಂದು ಸಭಾಂಗಣ ಗತಿ ಇಲ್ಲದೆ. ಜಿಲ್ಲಾ ಪಂಚಾಯ್ತಿಯ ಸಭಾಂಗಣವನ್ನು ಬಳಕೆ ಮಾಡಿಕೊಳ್ಳುತ್ತಿದೆ.ಪಾಲಿಕೆಯ 39 ಜನ ಸದಸ್ಯರು, ಅಧಿಕಾರಿಗಳು, ಶಾಸಕರು, ಸಂಸದರು, ಮಾಧ್ಯಮದವರು ಕುಳಿತುಕೊಳ್ಳಲು ಈ ಮೊದಲು ಪಾಲಿಕೆಯಲ್ಲಿದ್ದ ಸಭಾಂಗಣ ಇಕ್ಕಾಟ್ಟಾಗುತ್ತದೆಂದು. ಪಾಲಿಕೆಯ ಎರಡನೇ ಪ್ಲೋರ್ ನಲ್ಲಿ ಸಭಾಂಗಣ ನಿರ್ಮಾಣ ನಡೆಸಿತ್ತು. ಆದರೆ ಅದ್ಯಾಕೋ ಅದು ಅರ್ಧಕ್ಕೆ ನಿಂತಿದೆ.8266.25 ಕೋಟಿ ರೂ ವಾರ್ಷಿಕ ಬಜೆಟ್ ಹೊಂದಿರುವ ಈ ಪಾಲಿಕೆ. ನಗರದ ಸಂಘ ಸಂಸ್ಥೆಗಳಿಗೆ, ಬಡ ಜನರಿಗೆ ನಿವೇಶನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತದೆ. ಆದರೆ ತನ್ನದೇ ಸಭೆ ನಡೆಸಲು ಒಂದು ಸುಸಜ್ಜಿತ ಸಭಾಭವನ ಅಷ್ಟೇ ಏಕೆ, ಕಚೇರಿಯನ್ನು ಹೊಂದಿಲ್ಲ.ಈಗ ಇರುವ ಕಚೇರಿಯೂ ಸಹ ಪಾಲಿಕೆಯ ವಾಣಿಜ್ಯ ಮಳಿಗೆ ಸಂಕೀರ್ಣಕ್ಕೆ ಸೇರಿದ್ದು.ಬೃಹದಾಗಿ ಬೆಳೆಯುತ್ತಿರುವ ನಗರದಲ್ಲಿ ಹೊಸ ಡಿಸಿ ಕಚೇರಿ ಸಂಕೀರ್ಣದಂತೆ ಪಾಲಿಕೆಯೂ ಒಂದು ಸುಂದರ, ಸುಸಜ್ಜಿತ ಕಟ್ಡಡ ಹೊಂದ ಬೇಕಲ್ಲವೇ.