ಸಬ್ ರಿಜಿಸ್ಟ್ರಾರ್ ಕಚೇರಿಗೆ ಮುತ್ತಿಗೆ

ಲಿಂಗಸುಗೂರು,ಜೂ.೧೨-
ತಾಲೂಕಿನ ಸಬ್ ರಿಜಿಸ್ಟ್ರಾರ್ ಕಚೇರಿಗೆ ಇಂದು ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಕಛೇರಿ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಸುಗೂರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಾರ್ವಜನಿಕರು ರೈತರು ಕೃಷಿ ಚಟುವಟಿಕೆ ಸಂಬಂಧಿಸಿದಂತೆ ಮಾಡಗೆಜ ಕಟ್ಟಡ ಹೊಲಗಳನ್ನು ರಿಜಿಸ್ಟ್ರಾರ್ ಮಾಡಬೇಕು ಎಂದು ಕಛೇರಿಗೆ ಬಂದರೆ ಕಛೇರಿ ಅಧಿಕಾರಿ ನಿವೇದಿತಾ ಅವರು ತಮ್ಮ ಸಿಬಂದಿ ಮೂಲಕ ಲಂಚ ಪಡೆದರೆ ಮಾತ್ರ ಕೆಲಸ ಸುಗಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರೈತರು ಅಧಿಕಾರಿ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕಛೇರಿ ಕಥೆ ಬ್ರೋಕರ್ ಗೆಳಿಗೆ ಹಾವಳಿ ಅಧಿಕಾರಿ ಸಾಥ್:
ರೈತರ ಸಾರ್ವಜನಿಕರ ರಕ್ತ ಹೀರುವ ಅಧಿಕಾರಿಣಿ ನಿವೇದಿತಾ ಅವರ ಕರ್ತವ್ಯ ಲೋಪ ದಿಂದ ಕಛೇರಿಯಲ್ಲಿ ಲಂಚ ಲಂಚ ಕೊಟ್ಟರೆ ಕೆಲಸ ಸುಗಮವಾಗಿ ನಡೆಯುವಂತೆ ಅಧಿಕಾರಿಣಿ ನಿವೇದಿತಾ ಅವರು ತಮ್ಮ ಸಿಬಂದಿ ಮೂಲಕ ತಮಗೆ ಬರುವ ಹಣ ಬರಬೇಕು ಎಂಬುದು ಸಾಬೀತಾಗಿದೆ ಏಕೆಂದರೆ ಈ ಅಧಿಕಾರಿಯ ಕರ್ಮ ಕಾಂಡಕ್ಕೆ ಸಾರ್ವಜನಿಕರು ರೈತರು ಬೇಸತ್ತು ಹೋಗಿದ್ದಾರೆ.
ಕಛೇರಿಯಲ್ಲಿ ಬಾರಿ ಭ್ರಷ್ಟಾಚಾರ ನಡೆಯುತ್ತಿದೆ ಭ್ರಷ್ಟಾಚಾರ ಕುಮ್ಮಕ್ಕು ನೀಡುವ ಮುಖಾಂತರ ಅಧಿಕಾರ ನಡೆಸುತ್ತಿದ್ದಾರೆ ಎಂದು ಸುರ್ಯಚಂದ್ರ ವಕೀಲರು ಅಧಿಕಾರಿಣಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಯಕ್ಕೆ ಸರಿಯಾಗಿ ಬಾರದ ನಿವೇದಿತಾ:
ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿ ನಿವೇದಿತಾ ಅವರು ಕಛೇರಿಗೆ ಸಮಯಕ್ಕೆ ಸರಿಯಾಗಿ ಬಾರದೆ ವಿನಃ ಕಾರಣ ಸಬೂಬು ಹೇಳುತ್ತಾರೆ ಎಂದು ನಾಗರಿಕರು ಹೇಳಿದರು. ಕೂಡಲೇ ಇಂತಹ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಕಛೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.