
ಪದಾರ್ಥಗಳು :- ಸಬ್ಬಕ್ಕಿ – ೧ ಲೋಟ (೧೦ ನಿಮಿಷ ನೀರಲ್ಲಿ ನೆನೆಸಿ, ಬಸಿದು ೧ ಗಂಟೆ ಕಾಲ ಬಿಡಬೇಕು)
ಬೇಯಿಸಿ ಪುಡಿ ಮಾಡಿದ ಆಲೂಗೆಡ್ಡೆ – ೩
ಹುರಿದು ಪುಡಿ ಮಾಡಿದ ಶೇಂಗಾ – ೧/೨ ಲೋಟ
ಉಪ್ಪು – ರುಚಿಗೆ
ಚಿಕ್ಕದಾಗಿ ಹೆಚ್ಚಿದ ಹಸಿಮೆಣಸಿನಕಾಯಿ – ರುಚಿಗೆ
ಕರಿಬೇವು – ರುಚಿಗೆ
ಕೊತ್ತಂಬರಿಸೊಪ್ಪು – ರುಚಿಗೆ
ಜೀರಿಗೆ – ೧ ಚಮಚ
ಕಾಯಿತುರಿ – ರುಚಿಗೆ
ಅಚ್ಚಖಾರದಪುಡಿ – ರುಚಿಗೆ
ನಿಂಬೆರಸ -ರುಚಿಗೆ
ಶುಂಠಿ ಪೇಸ್ಟ್ – ರುಚಿಗೆ
ವಿಧಾನ :- ಎಲ್ಲವನ್ನೂ ಸೇರಿಸಿ ಕಲೆಸಿ, ಉಂಡೆ ಮಾಡಿ ತಟ್ಟಿ ಎಣ್ಣೆಯಲ್ಲಿ ಕರಿಯಬೇಕು.