ಸಬ್ಬಕ್ಕಿ ಪಲಾವ್

ಬೇಕಾಗುವ ಪದಾರ್ಥಗಳು:

  • ಸಬ್ಬಕ್ಕಿ – ೨ ಲೋಟ
  • ತೆಂಗಿನಕಾಯಿಹಾಲು – ೨ ಲೋಟ
  • ತುಪ್ಪ – ೪ ಚಮಚ
  • ಚಕ್ಕೆ – ೨
  • ಮೊಗ್ಗು – ೨
  • ಲವಂಗ – ೨
  • ಹಸಿಮೆಣಸಿನಕಾಯಿ – ೩
  • ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಎಲೆಕೋಸು (ಎಲ್ಲಾ ಸೇರಿ) – ಮುಕ್ಕಾಲು ಲೋಟ
  • ಕಾಯಿತುರಿ – ಅರ್ಧ ಲೋಟ
  • ಕೊತ್ತಂಬರಿಸೊಪ್ಪು, ನಿಂಬೆರಸ, ಉಪ್ಪು – ರುಚಿಗೆ ತಕ್ಕಷ್ಟು
    ವಿಧಾನ: ಸಬ್ಬಕ್ಕಿಯನ್ನು ತೆಂಗಿನಹಾಲಿನಲ್ಲಿ ಅರ್ಧ ಗಂಟೆ ಕಾಲ ನೆನೆಸಬೇಕು. ತುಪ್ಪಕ್ಕೆ ಚಕ್ಕೆ, ಮೊಗ್ಗು, ಲವಂಗ ಹಾಕಿ ಬಾಡಿಸಿ, ಚಿಕ್ಕದಾಗಿ ಹೆಚ್ಚಿದ ಹಸಿಮೆಣಸಿನಕಾಯಿ, ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಎಲೆಕೋಸು ಹಾಕಿ ಬಾಡಿಸಿ, ಎಣ್ಣೆಯಲ್ಲಿ ಬೇಯಿಸಿ, ಸಬ್ಬಕ್ಕಿ ಹಾಕಿ ಬಾಡಿಸಿ, ಬೇಯಿಸಿ, ಕಾಯಿತುರಿ, ಕೊತ್ತಂಬರಿಸೊಪ್ಪು, ನಿಂಬೆರಸ, ಉಪ್ಪು ಹಾಕಿ ಚೆನ್ನಾಗಿ ಕಲೆಸಬೇಕು.