ಸಬ್ಬಕ್ಕಿ ಖೀರು ಮಾಡುವ ವಿಧಾನ

ಕಾಲು ಕಪ್ ಸಬ್ಬಕ್ಕಿ
ಅರ್ಧಕಪ್ ನೀರು
3 ಕಪ್ ಹಾಲು
ಕಾಲು ಕಪ್ ಸಕ್ಕರೆ
10 ಗೋಡಂಬಿ
2೫ ಒಣದ್ರಾಕ್ಷಿ
ಕಾಲು ಟೀ ಸ್ಪೂನ್ ಏಲಕ್ಕಿ ಪುಡಿ
ಮಾಡುವ ವಿಧಾನ
ಮೊದಲನೆಯದಾಗಿ, ಒಂದು ಸಣ್ಣ ಬಟ್ಟಲಿನಲ್ಲಿ ಸಬ್ಬಕ್ಕಿಯನ್ನು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ. ದಪ್ಪ ತಳದ ಬಾಣಲೆಯಲ್ಲಿ ಹಾಲು ಸೇರಿಸಿ. ನೆನೆಸಿದ ಸಬ್ಬಕ್ಕಿಯನ್ನು ನೀರಿನೊಂದಿಗೆ ಸೇರಿಸಿ. ಮಧ್ಯಮ ಉರಿಯಲ್ಲಿ ಹಾಲನ್ನು ಕುದಿಸಿ. 5 ನಿಮಿಷಗಳ ಕಾಲ ಕುದಿಸಿ. ಈಗ ಕಾಲು ಕಪ್ ಸಕ್ಕರೆ ಸೇರಿಸಿ. ಖೀರ್ ಹೆಚ್ಚು ಸಿಹಿಯಾಗಿರಲು ಹೆಚ್ಚು ಸಕ್ಕರೆ ಸೇರಿಸಿ. ಗೋಡಂಬಿ, ಒಣದ್ರಾಕ್ಷಿ ಮತ್ತು ಏಲಕ್ಕಿ ಪುಡಿಯನ್ನು ಕೂಡ ಸೇರಿಸಿ. ನಡುವೆ ಕೈ ಆಡಿಸುತ್ತಾ ಮತ್ತೊಂದು 20 ನಿಮಿಷಗಳ ಕಾಲ ಸಿಮ್ಮರ್ ನಲ್ಲಿಡಿ. ಹಾಲು ದಪ್ಪವಾಗುತ್ತದೆ. ಸಬ್ಬಕ್ಕಿ ಪಾಯಸವನ್ನು ಸವಿದು ಆನಂದಿಸಿ