ಸಬ್ಬಕ್ಕಿ ಖಿಚಡಿ ಮಾಡುವ ವಿಧಾನ


ಸಾಮಗ್ರಿಗಳು
ನೆನೆಸಿದ ಸಬ್ಬಕ್ಕಿ – ಕಾಲು ಕಪ್
ತುಪ್ಪ – ಒಂದು ಸ್ಪೂನ್
ಸಾಸಿವೆ – ಒಂದು ಚಿಟಕೆ
ಬೆಳ್ಳುಳ್ಳಿ – ೨ ಎಸಳು
ಕ್ಯಾರೆಟ್ – ಒಂದು ದೊಡ್ಡ ಸ್ಪೂನ್ (ಕತ್ತರಿಸಿದ್ದು)
ಆಲೂಗಡ್ಡೆ – ಒಂದು ದೊಡ್ಡ ಸ್ಪೂನ್ (ಕತ್ತರಿಸಿದ್ದು)
ಬಟಾಣಿ – ಒಂದು ದೊಡ್ಡ ಸ್ಪೂನ್
ಕಾಳು ಮೆಣಸಿನ ಪುಡಿ – ಕಾಲು ಟೀ ಸ್ಪೂನ್
ಬಿಸಿನೀರು – ಒಂದೂವರೆ ಕಪ್
ವಿಧಾನ
ಒಂದು ಬಾಣಲೆ / ಪ್ಯಾನ್ ಗೆ ಒಂದು ಚಮಚ ತುಪ್ಪ ಹಾಕಿ , ಅದು ಕರಗಿದ ನಂತರ ಸಾಸಿವೆ ಹಾಕಿ, ಸಿಡಿದ ನಂತರ ಎಲ್ಲಾ ಹೆಚ್ಕಿರುವ ತರಕಾರಿ ಕ್ಯಾರೆಟ್, ಬಟಾಣಿ, ಆಲೂಗಡ್ಡೆಯನ್ನು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಸೇರಿಸಿ. ನಂತರ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಚಮಚ ಕಾಳು ಮೆಣಸಿನ ಪುಡಿ ಹಾಕಿ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ನೆನೆಸಿದ ಸಬ್ಬಕ್ಕಿ ಮತ್ತು ಒಂದೂವರೆ ಕಪ್ ಬಿಸಿನೀರು ಹಾಕಿ, ಕುಕ್ಕರ್ ಮುಚ್ಚಳವನ್ನು ಮುಚ್ಚಿ ೨-೩ ಸೀಟಿಗಳು ಬರುವ ತನಕ ಚೆನ್ನಾಗಿ ಬೇಯಿಸಿ. ತಣ್ಣಗಾದ ಮೇಲೆ ಚೆನ್ನಾಗಿ ಮಿಶ್ರಣ ಮಾಡಿ.