ಸಬಕಾ ಸಾತ್, ಸಬಕಾ ವಿಕಾಸ ಸಬಕಾ ವಿಶ್ವಾಸ ಸಂಸದ: ಡಾ.ಜಾಧವ

ಕಾಳಗಿ. ಏ.17 : ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಟೊಂಕಕಟ್ಟಿ ನಿಂತ ದೇಶದ ಪ್ರಧಾನಿ ನರೇಂದ್ರ ಮೋದಿಜೀ…ಅವರು, ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಸಬಕಾ ಸಾಥ್ ಸಬಕಾ ವಿಕಾಸ…ಸಬಕಾ ವಿಶ್ವಾಸ…ಎಂಬ ಮೂಲ ಮಂತ್ರದೊಂದಿಗೆ ಸದೃಢ ಆಡಳಿತ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಚಿಂಚೋಳಿಯ ಕಾಂಗ್ರೆಸ್ ಮುಖಂಡರು ದೇಶದ ಏಳಿಗೆ, ನಾಡಿನ ಅಭಿವೃದ್ಧಿ ಕನಸು ಕಂಡು ನನ್ನ ಮತ್ತು ನನ್ನ ಮಗನಮೇಲೆ ವಿಶ್ವಾಸವನ್ನಿಟ್ಟುಕೊಂಡು ದಕ್ಷಿಣ ಕಾಶಿ ಕಾಳಗಿಯಲ್ಲಿ ತಮ್ಮ ಸ್ವಯಿಚ್ಚೆಯಿಂದ ಬಿಜೆಪಿ ಪಕ್ಷವನ್ನು ಸೇರಿದ್ದಾರೆ.
ಈ ಸೇರ್ಪಡೆ ಸಮಾರಂಭದಲ್ಲಿ ಅತಿ ಹೆಚ್ಚು ಜನ ಅಲ್ಪಸಂಖ್ಯಾತರು, ಹಿಂದೂಳಿದ ವರ್ಗದವರು, ದಲಿತರು ಹೆಚ್ಚಿನ ಮಟ್ಟದಲ್ಲಿ ಆಗಮಿಸಿರುವುದರಿಂದ ಕಾಂಗ್ರೆಸ್ ನವರೂ… ಕೂಡಾ ಬದಲಾವಣೆ ಬಯಸಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ ತಿಳಿಸಿದರು.
ಪಟ್ಟಣದ ಶ್ರೀ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಚಿಂಚೋಳಿ ಮಂಡಲ ಬಿಜೆಪಿ ಏರ್ಪಡಿಸಿದ್ದ ವಿವಿಧ ಪಕ್ಷಗಳ ಮುಖಂಡರ ಬಿಜೆಪಿ ಸೇರ್ಪಡೆ ಸಮಾರಂಭ ವನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿ ರಾಜಾಹುಲಿ ಬಿ.ಎಸ್.ಯಡಿಯೂರಪ್ಪನವರು, ರೈತರ ಕಷ್ಟಗಳನ್ನುರಿತು ಹೋರಾಟದ ಬದುಕಿನಲ್ಲಿ ಉನ್ನತ ಅಧಿಕಾರವನ್ನು ಹಿಡಿದಿದ್ದಾರೆ. ಅಂತೆಯೇ ರಾಜ್ಯ ದಲ್ಲಿ ನೂರಾರು ಕಷ್ಟಗಳಿದ್ದರೂ ಸಮಸ್ಯೆಗಳಿಗೆ ತಕ್ಕ ಪರಿಹಾರ ನಿಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದ ಅವರು, ಹಳೆ ಬಿಜೆಪಿ-ಹೋಸ ಬಿಜೆಪಿ ಎಂಬ ಭೇದ-ಭಾವಗಳಿಲ್ಲದೆ ಚಿಂಚೋಳಿ-ಕಾಳಗಿ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಸೇರಿಕೊಂಡು ಉತ್ತಮ ಕೆಲಸ ಮಾಡಲು ಮುಂದಾಗೋಣ ಎಂದರು.
ಕಾಂಗ್ರೆಸ್ ಪಕ್ಷ ತೊರೆದು ತಮ್ಮ ನೂರಾರು ಕಾರ್ಯಕರ್ತರ ಜೊತೆಗೆ ಬಿಜೆಪಿ ಪಕ್ಷಕ್ಕೆ ಆಗಮಿಸಿದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಶಾಸಕ ಡಾ.ಅವಿನಾಶ ಜಾಧವ ಹಾಗೂ ಸಂಸದ ಡಾ.ಉಮೇಶ ಜಾಧವ ಅವರು ತುಂಬು ವಿಶ್ವಾಸದಿಂದ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಶಾಸಕ ಅವಿನಾಶ ಜಾಧವ ಮಾತನಾಡಿ, ನಾನು ಚಿಂಚೋಳಿ ಕ್ಷೇತ್ರದ ಸರ್ವಜನಾಂಗದ ನಾಗರಿಕರ ಮನೆಯ ಸೇವಕನಾಗಿ ಕೆಲಸ ಮಾಡುತ್ತೇನೆ ತಾವುಗಳು ಮಾಲಿಕರಾಗಿ ಕೆಲಸ ಮಾಡಿಸಿಕೊಳ್ಳಿ ಎಂದರು.
ಕಾಳಗಿ ಭಾಗದ ಕಾಂಗ್ರೆಸ್ ಹಿರಿಯ ನಾಯಕ ನಿಂಬೆಣಪ್ಪ ಸಾಹುಕಾರ ಕೋರವಾರ, ಕೆಪಿಸಿಸಿ ಕೊಆಡಿನೆಟರ್ ಕೆ.ಎಂ.ಬಾರಿ, ಚಿಂಚೋಳಿ ಪುರ ಸಭೆ ಮಾಜಿ ಅಧ್ಯಕ್ಷ ಶಾಮರಾವ್ ಕೊರವಿ, ಶಿವರಾಜ್ ಪಾಟೀಲ್ ಗೊಣಗಿ, ವಿರಣ್ಣ ಗಂಗಾಣಿ ರಟಕಲ್, ಶಿವಲಿಂಗಪ್ಪ ಮಡಿವಾಳ ಗೋಟೂರ, ಶಿವಶರಣಪ್ಪ ಚನ್ನೂರ ಕಂದಗೋಳ, ಚಂದ್ರಪ್ಪ ಮಾಸ್ಟರ್ ಅರಣಕಲ್, ಸಂಜುಕುಮಾರ ತಳಮನಿ ಬೆಡಸೂರ, ಸಿದ್ದಣ್ಣಗೌಡ ಪಾಟೀಲ ಪಂಗರಗಾ, ಚಂದ್ರಕಾಂತ ರೇಮಣಿ ಸೂಗೂರ(ಕೆ), ನಾಗರಾಜ ಪಾಟೀಲ ಹುಳಗೇರಾ, ಭೀಮಶೇನರಾವ ಮೋಘ, ಪ್ರಭುದಾಸ ರಾಠೋಡ ಸೇರಿ, ಶರಣರೆಡ್ಡಿ ಮಳಗಿ ರಾಜಾಪೂರ, ಫಾರೂಕಮಿಯ್ಯ, ಮಹೇಬೂಬ, ಪೀರಸಾಬ, ಶಬ್ಬಿರಮಿಯ್ಯ, ಮೌಲಾನಸಾಬ, ಸದ್ಧಾಂ, ಗಪೂರಮಿಯ್ಯ, ಬಾಬರ್, ರಿಜ್ವಾನ್, ಸೈಮದ್ ಖಾನ್, ಸೈಯದ್ ಜಮೀರ್, ರೇಹಮಾನ ಪಟೇಲ್, ಫಹೀಮೋದ್ದೀನ್, ಶಾಹೀನ್ ಶಹಾ, ಇಮಾಮ್ ಪಟೇಲ್, ಖಾದರ್ ಸಾಬ್, ಭವನರಾವ ಪಾಟೀಲ ಮಂಗಲಗಿ ಅವರ ನೇತೃತ್ವದ ನೂರಾರು ಜನ ಕಾಂಗ್ರೆಸ್ ಪಕ್ಷದ ಜನ ಪ್ರತಿನಿಧಿಗಳು, ಗ್ರಾಪಂ.ಗಳ ಅಧ್ಯಕ್ಷರುಗಳು, ಕಾರ್ಯಕರ್ತರು ಸೇರ್ಪಡೆ ಯಾದರು.
ಬಿಜೆಪಿ ಯುವನಾಯಕ ಸಂತೋಷ ಪಾಟೀಲ ಮಂಗಲಗಿ, ರಾಮಶ್ಚಂದ್ರ ಜಾಧವ, ಬಸವರಾಜ ಬೆಣ್ಣೂರ, ಪ್ರಶಾಂತ ಕದಂ, ಚಂದ್ರಕಾಂತ ಜಾಧವ, ಕಾಳಗಿ ಶಕ್ತಿ ಕೇಂದ್ರ ಅಧ್ಯಕ್ಷ ರಮೇಶ ಕಿಟ್ಟದ, ಉಮೇಶ ಚೌವ್ಹಾಣ್, ಶಿವಕುಮಾರ ಚಿಕ್ಕಗಸಿ, ರಾಮು ರಾಠೋಡ, ಮಾರುತಿ ಜಮಾದಾರ, ಮಹಿಂದ್ರ ಪೂಜಾರಿ, ಸುಂದರ ಸಾಗರ, ಶಿವಶಂಕರ ವಾಲಿಕಾರ ಬೆಡಸೂರ, ಸೇರಿದಂತೆ ಅನೇಕರಿದ್ದರು. ಚಿಂಚೋಳಿ ಮಂಡಲ ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಬುರ್ಗಿ ಜಿಲ್ಲಾ ಬಿಜೆಪಿ ಹಿಂದೂಗಳಿಂದ ಮೋರ್ಚಾ ಕೋಶಾಧ್ಯಕ್ಷ ರಾಜಕುಮಾರ ರಾಜಾಪುರ ಕಾಳಗಿ ಅವರು ನಿರೂಪಿಸಿ ವಂದಿಸಿದರು.