ಸಫಾರಿಯಲ್ಲಿಕಂಡ ಮೂರು ಹುಲಿಗಳು: ಮನಸೂರೆಗೊಂಡ ಪ್ರವಾಸಿಗರು

ಚಾಮರಾಜನಗರ, ಮಾ.14:- ಕರ್ನಾಟಕದ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಚಾಮರಾಜನಗರ ತಾಲೂಕಿನ ಕ್ಯಾತದೇವರಗುಡಿಯಲ್ಲಿ (ಕೆ.ಗುಡಿ) ಒಂದಲ್ಲಎರಡಲ್ಲ ಮೂರು ಹುಲಿಗಳು ಒಟ್ಟೋಟ್ಟಿಗೆ ದರ್ಶನ ನೀಡಿವೆ.
ಸೋಮವಾರ ಬೆಳಗ್ಗೆ ಸಫಾರಿಗೆ ತೆರಳಿದ್ದವರು ಈ ದೃಶ್ಯಕಂಡು ಪುಳಕಗೊಂಡರು. ಸಫಾರಿಗೆ ತೆರಳಿದವರು ಆನೆ, ಕಾಡೆಮ್ಮೆ ಹಾಗೂ ಪಕ್ಷಿಗಳನ್ನು ನೋಡುತ್ತಿರುತ್ತಾರೆ. ಆದರೆ, ಹುಲಿಗಳನ್ನು ಕಾಣಲು ಹಾತೊರೆಯುತ್ತಾರೆ. ಅಂತಹದರಲ್ಲಿಒಂದಲ್ಲ 3 ಹುಲಿಗಳು ಪ್ರವಾಸಿಗರ ಕಣ್ಣಿಗೆ ಬಿದ್ದಿವೆ.
ಕೆ.ಗುಡಿ ಸಮೃದ್ಧ ವನ್ಯಸಂಪತ್ತು ಹೊಂದಿದ್ದು, ಪಕ್ಷಿ ವೀಕ್ಷಣೆ ಮತ್ತು ಪ್ರಕೃತಿ ಸವಿಯಲು ಹೇಳಿ ಮಾಡಿಸಿದ ತಾಣವಾಗಿದೆ. ಹುಲಿಗಳ ದರ್ಶನಇಲ್ಲಿತೀರಾಅಪರೂಪ. ತಾಯಿ ಹುಲಿ ಹಾಗೂ ಎರಡು ಮರಿ ಸೇರಿ 3 ಹುಲಿಗಳನ್ನು ಕಂಡ ಸಫಾರಿಗರು ಸಂತಸಗೊಂಡಿದ್ದಾರೆ.
ಇತ್ತೀಚೆಗೆಕೆ.ಗುಡಿಯಲ್ಲಿ ಪ್ರವಾಸಿಗರು ಸಫಾರಿ ಮಾಡುತ್ತಿದ್ದಾಗ ಹುಲಿರಾಯ ಕಾಣಿಸಿಕೊಂಡಿದ್ದ. ಹುಲಿ ಮರವೊಂದರ ಬಳಿ ತನ್ನ ಸರಹದ್ದನ್ನುಗುರುತಿಸುವ ಕೆಲಸ ಮಾಡುತ್ತಿತ್ತು.
ಉಗುರಿನಿಂದ ಮರಗೀರುವುದು, ಮೂತ್ರ ವಿಸರ್ಜನೆ ಮಾಡುವ ಮೂಲಕ ಅವುಗಳು ತಮ್ಮ ಸರಹದ್ದು ಗುರುತಿಸಿಕೊಳ್ಳುತ್ತವಂತೆ.
ಪ್ರವಾಸಿಗರ ಸಫಾರಿ ವೇಳೆಯಲ್ಲಿ ಮೂರು ಹುಲಿಗಳು ಒಂದೇ ಸ್ಥಳದಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದ್ದು, ಪ್ರವಾಸಿಗರು ಮನಸೂರೆಗೊಂಡಿದ್ದಾರೆ. ಸೋಮವಾರ ಬೆಳಗಿನ ಕೆ. ಗುಡಿಯಲ್ಲಿ ಸಫಾರಿ ಹೋಗಿದ್ದ ಪ್ರವಾಸಿಗರಿಗೆ ಒಂದೇಕಡೆ ಮೂರು ಹುಲಿಗಳ ದರ್ಶನವಾಗಿರೋದುತುಂಬಾ ವಿಶೇಷವಾಗಿದೆ.
ಅನೇಕ ಬಾರಿಒಂದು ಹುಲಿ ಕಾಣಿಸಿಕೊಳ್ಳುವುದು ಕೂಡಾಕಷ್ಟ. ಆದರೆ, ಸೋಮವಾರ ಬೆಳಗಿನ ಸಫಾರಿಯಲ್ಲಿ ಮೂರು ವ್ಯಾಘ್ರಗಳು ಕಂಡಿರುವುದುಅಪರೂಪವಾಗಿದೆ. ಈ ದೃಶ್ಯವನ್ನು ಪ್ರವಾಸಿಗರೊಬ್ಬರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಚಿತ್ರಿಕರಿಸಿದ್ದು, ಅದುಎಲ್ಲೆಡೆ ವೈರಲ್‍ಆಗಿದೆ.