
ಬೀದರ:ಅ.3:ರಾಷ್ಟ್ರಪೀತ ಮಹಾತ್ಮಾ ಗಾಂಧಿಜಿಯವರ ಜಯಂತಿಯ ನಿಮಿತ್ಯ, ಕೇಂದ್ರ ಸಚಿವರು, ಸಂಸದರಾದ ಶ್ರೀ ಭಗವಂತ ಖೂಬಾರವರು, ನಗರದ ಸಿ.ಎಮ್.ಸಿ.ಕಾಲೋನಿಗೆ ಭೇಟಿ ನೀಡಿ, ಸಫಾಯಿ ಕರ್ಮಚಾರಿಗಳೊಂದಿಗೆ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ದೇಶದ ಸ್ವಚ್ಛತೆಯಲ್ಲಿ ಸಫಾಯಿ ಕರ್ಮಚಾರಿಗಳ ಪಾತ್ರ ಹಾಗೂ ಅವರು ಮಾಡುತ್ತಿರುವ ಅತ್ಯಂತ ಶ್ರೇಷ್ಠ ಕರ್ತವ್ಯಕ್ಕೆ ಶ್ಲಾಘಿಸಿ, ಎಲ್ಲಾ ಸಫಾಯಿ ಕರ್ಮಚಾರಿಗಳಿಗೆ ಧನ್ಯವಾದಗಳು ತಿಳಿಸಿದರು.