ಸಫಾಯಿ ಕರ್ಮಚಾರಿಗಳಿ ಪ್ರೋತ್ಸಾಹ ಧನ ಘೋಷಿಸಿ: ಹನುಮಂತಪ್ಪ

ಬಳ್ಳಾರಿ ಜೂ 03 : ಕರೋನಾ ಎರಡನೇ ಅಲೆಯ ನಿಯಂತ್ರಣಕ್ಕೆ ಸ್ವಚ್ಛತೆ ಕಾಪಾಡುತ್ತಿರುವ ಪೌರಕಾರ್ಮಿಕರು ಹಾಗೂ ಸಫಾಯಿ ಕರ್ಮ‍ಚಾರಿಗಳಿಗೆ
ಪ್ರೋತ್ಸಾಹ ಧನ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಪಲಕರ್ನಾಟಕ ರಾಜ್ಯ ಸಫಾಯಿ ಕರ್ಮ‍ಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ ಅವರು ಮನವಿ ಮಾಡಿದ್ದಾರೆ.
ಕರೋನಾ ಎರಡನೇ ಅಲೆಯಲ್ಲಿ ಸಫಾಯಿ ಕರ್ಮಚಾರಿಗಳಾಗಿ ನೇರನೇಮಕಾತಿ, ಗುತ್ತಿಗೆ, ಖಾಯಂ ಹಾಗೂ ಮ್ಯಾನ್ ಹೋಲ್ ಸ್ಕಾವೆಂಜರ್ಸ್, ಯುಜಿಡಿ, ಟಿಪ್ಪರ್,
ಲೋಡರ್ಸ್, ವಾಹನ ಚಾಲಕರಾಗಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಮೊದಲ ಸಾಲಿನ ಸೇನಾನಿಗಳಾಗಿ ಸ್ವಚ್ಛತೆ ಕಾಪಾಡಿ ವೈರಸ್ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಆದರೆ, ಈ ವರ್ಗದ ಜನರು ಕಡು ಬಡವರಾಗಿದ್ದು ಕರೋನಾ ಒಡೆತದಿಂದ ಜೀವನ ನಿರ್ವಹಣೆಗೆ ತೀರ ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ ಸಮಾಜದ ಕಟ್ಟ ಕಡೆಯ ಸಮುದಾಯವೂ ಆಗಿದೆ. ಇವರ ಅವಲಂಬಿತ ಕುಟುಂಬ ಕೂಡ ಇವರ ಮೇಲೆ ಆಧಾರವಾಗಿದೆ. ಆದ್ದರಿಂದ ನೇರ ನೇಮಕಾತಿ, ಮ್ಯಾನ್ಹೋಲ್ ಸ್ಕವೆಂಜರ್ಸ್, ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುತ್ತಿರುವ ನೌಕರರಿಗೆ ತಲಾ 15,000 ರೂ.ಗಳು ಹಾಗೂ ಖಾಯಂ ನೌಕರರಿಗೆ ತಲಾ 10,000 ರೂ.ಗಳನ್ನು ನೀಡಬೇಕೆಂದು ಅವರು ಕೋರಿದ್ದಾರೆ.