ಸಪ್ಲೇಯರ್ ಶಂಕರ ಟೀಸರ್ ಅನಾವರಣ

ಬಾರ್ ಸಪ್ಲೇಯರ್ ಒಬ್ಬನ ಕಥೆ ಆಧರಿಸಿದ ” “ಸಪ್ಲೇಯರ್ ಶಂಕರ” ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಕುತೂಹಲ ಮೂಡಿಸಿದೆ.
ನಿರ್ದೇಶಕ ರಂಜಿತ್ ಮಾಹಿತಿ ನೀಡಿ ಮೊದಲ ನಿರ್ದೇಶನದ ಚಿತ್ರ. ಪಾತ್ರಕ್ಕಾಗಿ ನಾಯಕ ನಿಶ್ಚಿತ್ ಕರೋಡಿ ಬಹಳ ಶ್ರಮಪಟ್ಟಿದ್ದಾರೆ. ಕಥೆಗೆ ಜೀವ ತುಂಬಿದ್ದು ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್. ಚಿತ್ರದಲ್ಲಿ ಹೆಚ್ಚಾಗಿ ಹೊಸತಂಡ ಕಾರ್ಯ ನಿರ್ವಹಿಸಿದೆ. ಶೀಘ್ರದಲ್ಲೇ “ಸಪ್ಲೇಯರ್ ಶಂಕರ” ತೆರೆಗೆ ಬರಲಿದೆ ಎಂದರು.
ನಾಯಕ ನಿಶ್ವಿತ್ ಕರೋಡಿ ಮಾತನಾಡಿ, “ಗಂಟು ಮೂಟೆ” ಹಾಗೂ “ಟಾಮ್ ಅಂಡ್ ಜೆರ್ರಿ ಚಿತ್ರದ ಬಳಿಕ ಮೂರನೇ ಚಿತ್ರ. ಬಾರ್ ಸಪ್ಲೇಯರ್ ಪಾತ್ರ ನನ್ನದು. ಹಾಗಾಂತ ಈ ಚಿತ್ರದಲ್ಲಿ ಬರೀ ಸಪ್ಲೇಯರ್ ಕಥೆ ಮಾತ್ರ ಇಲ್ಲ. ಕಾಮಿಡಿ, ಸೆಂಟಿಮೆಂಟ್, ಲವ್, ಥ್ರಿಲ್ಲರ್ ಎಲ್ಲವೂ ಇದೆ ಎಂದರು.
ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಮಾತನಾಡಿ ನಿರ್ದೇಶಕ ರಂಜಿತ್ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರುತ್ತೇವೆ ಎಂದರು
ನಾಯಕಿ ದೀಪಿಕಾ ಆರಾದ್ಯ,ಶಿಕ್ಷಕಿ ಪಾತ್ರ ಎಂದರೆ ಸಂಗೀತ ನಿರ್ದೇಶಕ ಆರ್ ಬಿ ಭರತ್ . ಛಾಯಾಗ್ರಾಹಕ ಸತೀಶ್ ಕುಮಾರ್ , ಮತ್ತಿತರರು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.