ಕಲಬುರಗಿ,ಜೂ.26:ನಗರದಲ್ಲಿ ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘ ರವಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಪ್ತ ನೇಕಾರ ಸಮುದಾಯಗಳ ಸಂಲಗ್ನ' ವಧು-ವರರ ಪರಿಚಯ ಪುಸ್ತಕ-2023 ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ ಬಿಡುಗಡೆಗೊಳಿಸಿದರು. ಕಳೆದ ಏಪ್ರಿಲ್ ತಿಂಗಳಲ್ಲಿ ಸಪ್ತ ನೇಕಾರ ಸಮುದಾಯಗಳ ಸಮಾವೇಶ ಹಾಗೂ ವಧು-ವರರ ಪರಿಚಯ ಸಮಾವೇಶ ಹಮ್ಮಿಕೊಂಡಿದ್ದ ಪರಿಣಾಮ ಹೊರಬಂದ
ಸಂಲಗ್ನ’ ವಧು-ವರರ ಪರಿಚಯ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ ಅವರು, ಹಿಂದುಳಿದ ಹಟಗಾರರು ಆರ್ಥಿಕವಾಗಿ ಸಬಲರಾಗುವ ದೃಷ್ಟಿಯಿಂದ ಮತ್ತು ಸಂಘಟನೆ ಹಿತದಿಂದ ಅವರಿಗೊಂದು ಸಮುದಾಯ ಭವನ ಅಗತ್ಯವಾಗಿದ್ದು, ಅದಕ್ಕೆ ಬೇಕಾದ ಸಹಾಯ-ಸಹಕಾರ ಒದಗಿಸುವುದಾಗಿ ಅವರು ತಿಳಿಸಿದರು.
ಮತ್ತೊಬ್ಬರ ಮಾನವನ್ನು ಕಾಪಾಡುವ ನೇಕಾರರು ಇಂದು ಸಮಾಜದಲ್ಲಿ ಬೆತ್ತಲೆಯಾಗಿ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೇಕಾರರು ಅಭೂತಪೂರ್ವ ಬೆಂಬಲವನ್ನು ಸೂಚಿಸಿದ್ದರಿಂದ ಅವರಿಗೆ ಕೃತಜ್ಞತೆ ಅರ್ಪಿಸುವೆ. ನೇಕಾರ ಭವನಕ್ಕಾಗಿ ಜಾಗವನ್ನು ಹೊಂದಿದ್ದರಿಂದ ಅವರಿಗೆ ಬೇಕಾದ ಅನುದಾನವನ್ನು ಒದಗಿಸುವಲ್ಲಿ ನೆರವಾಗುವೆ ಎಂದರು. ಸಂಘದ ಅಧ್ಯಕ್ಷ ಚನ್ನಮಲ್ಲಪ್ಪ ನಿಂಬೇಣಿ, ಕಾರ್ಯದರ್ಶಿ ಸೂರ್ಯಕಾಂತ ಸೊನ್ನದ, ವಧು-ವರ ಸಮಿತಿ ಅಧ್ಯಕ್ಷ ಸೋಮಶೇಖರ ಧುತ್ತರಗಿ, ಪದಾಧಿಕಾರಿಗಳಾದ ಚನ್ನಮಲ್ಲಪ್ಪ ಯಳಸಂಗಿ, ರಾಚಪ್ಪ ಚಂದಾ, ಸೂರ್ಯಕಾಂತ ಕಾಬಣೆ, ಮಲ್ಲಿಕಾರ್ಜುನ ಹೊಸಮನಿ. ಡಾ.ಬಸವರಾಜ ಚನ್ನಾ ಮುಂತಾದವರು ಹಾಜರಿದ್ದರು.