ಸಪ್ತ ದೇವತೆಗಳ ಪ್ರಾಣ ಪ್ರತಿಷ್ಠಾಪನೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಸೆ.12: ನಗರದ ಸೋಲಾಪುರ ರಸ್ತೆಯಲ್ಲಿರುವ ಬ್ಯಾಂಕರ್ಸ್ ಕಾಲನಿಯಲ್ಲಿ ಸಪ್ತದೇವತೆಗಳ ಪ್ರಾಣ ಪ್ರತಿಷ್ಟಾಪನೆ ಜರುಗಿತು. ಕುಂಭ ಮೆರವಣಿಗೆ ಮಾಡಿ ವರಸಿದ್ಧಿ ವಿನಾಯಕ, ಆಂಜನೇಯ, ನಂದಿ ಲಿಂಗೇಶ್ವರ, ನಾಗದೇವತೆ, ನವಗ್ರಹ, ಬನ್ನಿಮಹಾಂಕಾಳಿ, ತುಳಸಿಮಾತಾ ಸಪ್ತದೇವತೆಗಳ ಪ್ರಾಣ ಪ್ರತಿಷ್ಟಾಪನೆ ಜರುಗಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದ ಷಣ್ಮೂಖಾರೂಢ ಮಠದ ಪೂಜ್ಯರಾದ ಅಭಿನವ ಸಿದ್ಧಾರೂಢ ಸ್ವಾಮೀಜಿಗಳು, ಆದಿಪೂಜಿತ ವರಸಿದ್ಧಿ ವಿನಾಯಕ ಮತ್ತು ಸಪ್ತ ದೇವತೆಗಳ ದೇವಸ್ಥಾನ ಸಣ್ಣ ಸ್ಥಳಾವಕಾಶದಲ್ಲಿ ದೊಡ್ಡ ಮನಸ್ಸುಗಳನ್ನು ತುಂಬಿ ಎಲ್ಲರನ್ನು ಒಂದುಗೂಡಿಸಿದ ಶ್ರೇಯಸ್ಸು ಬ್ಯಾಂಕರ್ಸ್ ಕಾಲನಿ ಬಂದುಗಳಿಗೆ ಸಲ್ಲುತ್ತದೆ. ಗುಪ್ತ ನಿಧ ಕೊಡುವದರ ಮೂಲಕ ತಾವು ಕೊಟ್ಟ ದಾನ ಬೇರೆಯವರಿಗೆ ಗೊತ್ತಾಗಬಾರದು ಎನ್ನವುದು ದೊಡ್ಡ ಮನಸ್ಸಿನ ಬ್ಯಾಂಕರ್ಸ್ ಕಾಲನಿಯ ಸಮಸ್ತ ಭಕ್ತರು ಸಪ್ತ ದೇವತೆಗಳ ಪ್ರೀತಿಗೆ ಪಾತ್ರರಾಗಿದ್ದೀರಿ ಎಂದರು. ಕಾರ್ಯಕ್ರಮ ಉದ್ಘಟಿಸಿ ಮಾತನಾಡಿದ ನಾಗಠಾಣ ಮತಕ್ಷೇತ್ರದ ಶಾಸಕರಾದ ವಿಠ್ಠಲ ಕಟಕದೊಂಡ ಯಾವ ರಾಜಕಾರಣಿಗಳ ಹಂಗು ಇಲ್ಲದೆ ನಿರ್ಮಿಸಿದ ಮೊದಲ ದೇವಸ್ಥಾನ. ದೂರದ ಊರಿನಿಂದ ಕಲ್ಲು ತಂದು ಸುಂದರವಾದ ದೇವಾಲಯ ನಿರ್ಮಿಸಿ ಒಳ್ಳೆಯ ಧಾರ್ಮಿಕ ಕಾರ್ಯ ಮಾಡಿದ್ದೀರಿ, ಇದರಿಂದ ಕಾಲನಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರ ನಡೆಯಲಿ, ನಿಮ್ಮ ಸಮಾಜ ಸೇವೆ ಬೇರೆಯವರಿಗೆ ಅನುಕರಣೆ ಆಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹಾಸಿಂಪೀರ ವಾಲೀಕಾರ ಮಾತನಾಡಿ ವರಸಿದ್ಧಿ ವಿನಾಯಕ ದೇವಸ್ಥಾನ ಸಪ್ತದೇವತೆಗಳ ಸಂಗಮ, ವರಸಿದ್ಧಿ ವಿನಾಯಕನಿಗೆ 108 ಹೆಸರುಗಳಿಂದ ಕರೆಯುತ್ತಾರೆ ಅದರಲ್ಲಿ ವರಸಿದ್ಧಿ ವಿನಾಯಕವೂ ಒಂದು ವಿಜಯಪುರ ನಗರದಲ್ಲಿ ದೇವಸ್ಥಾನ ಕಟ್ಟುವದರ ಮೂಲಕ ಒಂದು ಧಾರ್ಮಿಕ, ಸಾಂಸ್ಕøತಿಕ ಕೇಂದ್ರ ನಿರ್ಮಿಸಿದ ಕೀರ್ತಿ ಬ್ಯಾಂಕರ್ಸ್ ಕಾಲನಿಯ ಎಲ್ಲ ಬಂಧುಗಳಿಗೆ ಸಲ್ಲುತ್ತದೆ. ಕಾಲನಿ ಸಣ್ಣದಾಗಿದ್ದರೂ ಮನಸ್ಸುಗಳು ಬಹಳ ದೊಡ್ಡವು. ಕಾಲನಿಯ ಎಲ್ಲ ಬಂಧುಗಳು ಗುಪ್ತ ದಾನಿ ಮಾಡಿ ಸಪ್ತ ದೇವತೆಗಳ ನಿರ್ಮಾಣ ಮಾಡಿದ್ದು ಬದುಕನ್ನು ಹಸನ ಮಾಡಿಕೊಂಡಿದ್ದೀರಿ ಇದು ಭಗವಂತ ಮೆಚ್ಚು ಕೆಲಸ ಎಂದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ನಿವೃತ್ ಉಪಪೆÇೀಲಿಸ್ ಆಯಕ್ತರಾದ ಸುಭಾಷ್ ಗುಡಿಮನಿ ಮಾತನಾಡಿ ಬ್ಯಾಂಕರ್ಸ್ ಕಾಲನಿ ಈಗ ಸುಕ್ಷೇತ್ರ ಬ್ಯಾಂಕರ್ಸ್ ಕಾಲನಿ ಆಗಿದೆ, ನಿಮ್ಮೆಲ್ಲರ ತನು ಮನ ಧನ ಸಹಾಯ ಆರ್ಶೀವಾದ ನಮಗೆ ದೇವಸ್ಥಾನ ನಿರ್ಮಿಸಲು ಸಹಾಯವಾಗಿದೆ. ಇದು ಸುಂದರ ಮತ್ತು ಜಾಗೃತ ದೇವಸ್ಥಾನವಾಗಿ ಹೊರಹೊಮ್ಮಿದೆ, ಸಕಲ ಸದ್ಭಕ್ತರು ದಿನ ನಿತ್ಯ ಸಪ್ತ ದೇವತೆಗಳ ದರ್ಶನ ಪಡೆದು ಸಂಕಲ್ಪ ಮಾಡಿಕೊಂಡು ಪುನಿತರಾಗಿ, ವರ್ಷವಿಡಿ ಯಾವುದೇ ದೇವತಾ ಕಾರ್ಯಗಳು ಮಾಡಲು ಮುಕ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುರೇಶ ಹಕ್ಕಿ ನ್ಯಾಯವಾದಿಗಳು, ರಾಜು ಹಿರೇಮಠ, ಎಂ ಎಸ್ ಪಾಟೀಲ, ಮಾತನಾಡಿದರು. ಮೊದಲಿಗೆ ಡಾ ಸಂಗಮೇಶ ಮೇತ್ರಿ ಪ್ರಾಸ್ತಾವಿಕ ಮಾತನಾಡಿ ಕೇವಲ ಹತ್ತು ತಿಂಗಳಲ್ಲಿ ಗುಪ್ತ ನಿಧಿ ಸಂಗ್ರಹ ಮೂಲಕ ನಿರ್ಮಿಸಿದ ಮೊದಲ ದೇವಸ್ಥಾನ ಎಂದರು. ವೇದಿಕೆಯ ಮೇಲೆ ಬ್ಯಾಂಕರ್ಸ್ ಕಾಲನಿಯ ಅಧ್ಯಕ್ಷರಾದ ಶಶಿಧರ ರೋಡಗಿ ಇದ್ದರು. ಕಾರ್ಯಕ್ರಮದಲ್ಲಿ ಅಪ್ಪಣ್ಣ ಬಡಿಗೇರ, ಅಮೋಘಿ ವಾಲೀಕಾರ, ನಾಗಯ್ಯ ಹಿರೇಮಠ, ಸಜ್ಹನ, ರವಿ ಹುಲ್ಲಣ್ಣವರ, ವ್ಹಾ ಡಿ ದೇಶಪಾಂಡೆ, ಅಶೋಕ ಕಲಶೆಟ್ಟಿ, ಸಂಗಮೇಶ ವಾಲಿ, ಆನಂದ ಪಾಟೀಲ, ಡೆಂಗಿ, ಶೋಭಾ ಜಹಾಂಗೀರ್, ಜಯಶ್ರೀ ಗುಡಿಮನಿ, ಜಲಜಾಕ್ಷಿ ಮೇತ್ರಿ, ಕವಿತಾ ಹಿರೇಮಠ, ಹಕ್ಕಿ, ರಮೇಶ ಪಾಟೀಲ ಹಾಜರಿದ್ದರು, ಜೋರಾಪುರ ಪೇಠದ ಲಲಿತಾ ಮಹಿಳ ಮಂಡಳದ ಅಧ್ಯಕ್ಷರಾದ ಭಾರತಿ ಬ್ಯೂಯಾರ ಅವರು ಕುಂಭ ಮೆರವಣಿಗೆ ನೇತೃತ್ವ ವಹಿಸಿದ್ದರು. ಮೊದಲಿಗೆ ಪ್ರಾರ್ಥನೆ ಕುಮಾರಿ ಕಲಶೆಟ್ಟಿ ಮತ್ತು ಕುಮಾರಿ ವಾಲೀಕಾರ ಹಾಡಿದರು. ಕಾರ್ಯವನ್ನು ಸುಂದರವಾಗಿ ಡಾ ಎಂ ಎಸ್ ಮಾಗಣಗೇರಿ ನಿರ್ವಹಿಸಿ ವಂದಿಸಿದರು.