ಸಪ್ತ ಗೋಮಾತಾ ಗೋಶಾಲೆಯ 7ನೆಯ ವರ್ಧಂತಿ

ಕಲಬುರಗಿ,ಮಾ.29:ತಾಜ್ ಸುಲ್ತಾನಪುರ ಹತ್ತಿರ ಇರುವಸಪ್ತ ಗೋಮಾತಾ ಮಂದಿರ ಗೋಶಾಲೆ 7 ನೆಯ ವಧರ್ಂತಿ ಮಹೋತ್ಸವ ಗುರುವಾರ ಜರುಗಿತು.ಬೆಳಿಗ್ಗೆ 8 ಗಂಟೆಗೆ ಶ್ರೀ ಗೋಪಾಲಕೃಷ್ಣನ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ,ಗೋವುಗಳ ಪೂಜೆ, 10 ಗಂಟೆಗೆ ಹಂಸ ನಾಮಕ,ಲಕ್ಷ್ಮೀ ನಾರಾಯಣ ಮತ್ತು ಶ್ರೀ ಹರೆ ಶ್ರೀರಾಮ ಪಾರಾಯಣ ಸಂಘಗಳಿಂದ ಶ್ರೀವಾದಿರಾಜ ತೀರ್ಥರು ಮತ್ತು ಶ್ರೀ ವ್ಯಾಸರಾಜ ತೀರ್ಥರ ಆರಾಧನೆಯ ನಿಮಿತ್ತ 108 ಬಾರಿ ಅವರ ಚರಮ ಶ್ಲೋಕ,ವಿಷ್ಣು ಸಹಸ್ರ ನಾಮ, ರಮಾ ಸ್ತುತಿ,ಸುಂದರ ಕಾಂಡ,ಜಯತೀರ್ಥರ ಸ್ತುತಿ,ರಾಯರ ಅಷ್ಟೋತ್ತರ,ವಿಜಯರಾಯರ ಕವಚಗಳ ಪಾರಾಯಣ ಗೋವಿನ ಮುಂದೆ ಸಮರ್ಪಣೆ ಮಾಡಿದರು.
ಪಂ ವಿಷ್ಣುದಾಸಾಚಾರ್ಯ ಖಜುರಿ ಅವರಿಂದ ಪವಮಾನ ಹೋಮ ಜರುಗಿತು.ಪಂ ಹನುಮಂತಾಚಾರ್ಯ ಅವರಿಂದ ಶ್ರೀ ವಾದಿರಾಜರ ತೀರ್ಥರು ಮತ್ತು ಶ್ರೀ ವ್ಯಾಸರಾಜರ ತೀರ್ಥರ ಆರಾಧನೆಯ ನಿಮಿತ್ತ ಅವರ ಮಹಿಮೆ ಕುರಿತು ಪ್ರವಚನ ನೀಡಿದರು.
ಕಲಬುರಗಿಯ ಗೋಸೇವಕ ಶ್ರೀ ಕೃಷ್ಣಾ ಕೆಂಭಾವಿ ಮಾತನಾಡಿ ಕಲಬುರಗಿಯ ಎಲ್ಲಾ ಗೋ ಸೇವಕರ ಗೋಶಾಲೆ ಇದು. ನನ್ನ ಕೊಡುಗೆ ಎನೂ ಇಲ್ಲ ನಿಮ್ಮ ಸಹಕಾರದಿಂದಲೇ ಈ ಪರಿ ಬೆಳೆದಿದೆ ಮುಂದೆಯ ತಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದರು.ಪಾರಾಯಣ ಸಂಚಾಲಕ ರವಿ ಲಾತೂರಕರ, ಪದ್ಮನಾಭ ಆಚಾರ್ಯ ಜೋಶಿ,ರಾಮಾಚಾರ್ಯ ನಗನೂರ,ಜಗನ್ನಾಥಾಚಾರ್ಯ ಸಗರ,ಅನಿಲ ಕುಲಕರ್ಣಿ, ಸುರೇಶ ಕುಲಕರ್ಣಿ,ಉದಯ ದೇಶಮುಖ,ಪಿ ಎನ್ ಜೋಶಿ ಉಪಸ್ಥಿತರಿದ್ದರು.