‘ಸಪ್ತಪರ್ಣಿ”ಅಲ್‍ಸ್ಟೋನಿಯಾಸ್ಕೊಲ್ಯಾರಿಸ್’ ಧಾರವಾಡದಲ್ಲಿ ಪ್ರಥಮ ಬಾರಿಗೆ ಹೂ ಬಿಟ್ಟ 6 ಮರಗಳು!


ಧಾರವಾಡ, ಅ.4:’ಸಪ್ತಪರ್ಣಿ’ ‘ಅಲ್‍ಸ್ಟೋನಿಯಾ ಸ್ಕೊಲ್ಯಾರಿಸ್’ಎಂದುಕರೆಯಲಾಗುವ ಮೂಲ ಚೈನಾ, ಆಸ್ಟ್ರೇಲಿಯಾಮತ್ತುಭಾಗಶಃಟ್ರಾಪಿಕಲ್‍ಏಷ್ಯಾ ಭಾಗದಆರು ಮರಗಳು ಪ್ರಥಮ ಬಾರಿಗೆಐದು ವರ್ಷಗಳ ಬಳಿಕ, ನಗರದಕೆಲಗೇರಿ ಬಳಿಯ ಗಾಯತ್ರಿಪುರಂ ಬಡಾವಣೆಯಲ್ಲಿ ಸುವಾಸನೆ ಬೀರುವ ಹೂ ಮೈ ದುಂಬ ಹೊದ್ದು ನಿಂತಿವೆ.
‘ಬ್ಲ್ಯಾಕ್‍ಬೋರ್ಡ್‍ಟ್ರೀ’ಅಥವಾ’ಡೆವಿಲ್ಸ್‍ಟ್ರೀ’ಎಂದೂಕೂಡಕರೆಯಲಾಗುವ ಈ ಮರಗಳು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಾಣಸಿಗುವ, ‘ಎಪೋಸಿನೇಸಿಯೆ’ಕುಟುಂಬ ಪ್ರಬೇಧಕ್ಕೆ ಸೇರಿದ ಮರಗಳು.
ಗುರುದೇವರವೀಂದ್ರನಾಥಠಾಕೂರರು, ಪಶ್ಚಿಮ ಬಂಗಾಳದ ಶಾಂತಿ ನಿಕೇತನದ ವಿಶ್ವ-ಭಾರತಿ ವಿಶ್ವವಿದ್ಯಾನಿಲಯದಘಟಿಕೋತ್ಸವದಲ್ಲಿ, ಸ್ನಾತಕೋತ್ತರ ಮತ್ತು ಸ್ನಾತಕ ಪದವಿ ಪ್ರಮಾಣಪತ್ರದೊಂದಿಗೆ, ವಿಧಿವತ್ತಾಗಿ, ಸಪ್ತಪರ್ಣಿ ಹೂವನ್ನುಯುವ ಪದವಿಧರರಿಗೆ ನೀಡುವ ಸಂಪ್ರದಾಯ ಹಾಕಿಕೊಟ್ಟರು.
ಪ್ರಧಾನಮಂತ್ರಿಯವರು ಈ ವಿಶ್ವವಿದ್ಯಾಲಯದಕುಲಾಧಿಪತಿಯಾಗಿದ್ದು, ಅವರ ಸ್ವಾಗತ ಸೇರಿದಂತೆ, ಘಟಿಕೋತ್ಸವ ಸಮಾರಂಭದಲ್ಲಿ ಪ್ರತಿಯೊಬ್ಬರಿಗೂ ಸಪ್ತಪರ್ಣಿ ಹೂವನ್ನು ನೀಡಿ, ಗೌರವಿಸುವ ಪದ್ಧತಿ ಶಾಂತಿ ನಿಕೇತನದಲ್ಲಿತ್ತು.ಆದರೆ, ಹೂಗಳ ಅನಗತ್ಯ ಮತ್ತುಅಪರಿಮಿತ ಬಳಕೆ ತಪ್ಪಿಸಲು, ಈಗ ಸಾಂಕೇತಕವಾಗಿ ಮಾತ್ರ ಈ ಹೂವನ್ನು ಪ್ರದರ್ಶಿಸಲಾಗುತ್ತದೆ.
ಸಪ್ತಪರ್ಣಿ ಮರದಕಾಂಡವನ್ನು ಪೆನ್ಸಿಲ್‍ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ.ತುಂಬ ವೇಗವಾಗಿ, ತಾಳಿಕೆ ಮತ್ತು ಬಾಳಿಕೆಯಿಂದ ಈ ಮರ ಹುಲುಸಾಗಿ ಬೆಳೆಯುತ್ತದೆ.ಶ್ರೀಲಂಕಾದಲ್ಲಿ ಮರದ ಶವ ಪೆಟ್ಟಿಗೆಗಳ ತಯಾರಿಕೆಯಲ್ಲಿ ಹೆಚ್ಚು ಬಳಕೆಯಲ್ಲಿರುವ ಮರ’ಅಲ್‍ಸ್ಟೋನಿಯಾಸ್ಕೊಲ್ಯಾರಿಸ್’.ಬೋರ್ನಿಯೋದಲ್ಲಿ ಮೀನುಗಾರಿಕೆಯ ಬಲೆಗಳನ್ನು ತೇಲಿಸಲು ಈ ಮರದಕಾಂಡ ಬಳಸಲಾಗುತ್ತದೆ.ಮಹತ್ವದ ಪೇಯಗಳ ಬಾಟಲಿಯ ಮುಚ್ಚಳ ‘ಕಾರ್ಕ್’ ಆಗಿ ಸಹ ಈ ಮರ ಬಳಕೆಯಲ್ಲಿದೆ.
ಬೌದ್ಧರು ಈ ಮರವನ್ನುಅತ್ಯಂತಆದರದಿಂದಕಾಣುತ್ತಾರೆ.ಗೌತಮ ಬುದ್ಧತನ್ನಜ್ಞಾನೋದಯಕ್ಕಾಗಿ ತಪಸ್ಸಿಗೆ ಕುಳಿತದ್ದು ಮತ್ತುಜ್ಞಾನದೋಯ ಪಡೆದಿದ್ದು, ಬೋಧಿ ವೃಕ್ಷದ ಕೆಳಗಡೆ, ಸಾರಾನಾಥದ ಲುಂಬಿನಿ ವನದಲ್ಲಿ.ಆ ಮರವೇ ಸಪ್ತಪರ್ಣಿ. ಹೂವಿನ ಕೆಳಗಡೆ ಒಟ್ಟು ಏಳು ಎಲೆಗಳಿರುತ್ತವೆ.
ಆಯುರ್ವೇzದಲ್ಲಿಅತಿಸಾರ ಭೇದಿ, ಅತೀ ಹೆಚ್ಚು ಬಾಧಿತಡಯೋರಿಯಾ ಹಾಗೂ ಅಪಚನ ಸಂಬಂಧಿಜಠರ ವ್ಯಾಧಿಗಳಿಗೆ ಸಪ್ತಪರ್ಣಿ ಮರದ ಟೊಂಗೆಗಳನ್ನು ಔಷಧವಾಗಿಯೂ ಬಳಸುವ ಉಲ್ಲೇಖ, 1889 ರಲ್ಲಿ’ದಯೂಸ್‍ಫುಲ್ ನೇಟಿವ್ ಪ್ಲ್ಯಾಂಟ್ಸ್‍ಆಫ್‍ಆಸ್ಟ್ರೇಲಿಯಾ’ ಹಾಗೂ ‘ಮಟೀರಿಯಾ ಮೆಡಿಕಾಆಫ್ ವೆಸ್ಟರ್ನ್‍ಇಂಡಿಯಾ’ದಲ್ಲಿ ಲಭ್ಯ. ಎಲೆಗಳ ಕಷಾಯ ಸಹ ಔಷಧವಾಗಿ ಬಳಸುವ ವಿಧಾನಗಳಿವೆ. ಮರದಎಲ್ಲ ಭಾಗಗಳೂ ತುಂಬ ಕಹಿ.ಪ್ರಮಾಣ ಮೀರಿದರೆ ವಿಷ.

ಬಾಕ್ಸ್ -1
ಗಾಯತ್ರಿಪುರಂ ಬಡಾವಣೆರೂಪುಗೊಂಡು 6 ವರ್ಷಗಳಾಗುತ್ತಿವೆ. ನಾವು ಇಲ್ಲಿಯ ನಿವಾಸಿಗಳಾಗಿ 4 ವರ್ಷ ಪೂರ್ಣಗೊಂಡಿವೆ. ಈ ಲೇಔಟ್‍ನಲ್ಲಿ ಮೊದಲು ಬಂದ ಗಿಡಗಳೇ ಸಪ್ತಪರ್ಣಿ.ಪ್ರಥಮ ಬಾರಿಗೆ 6 ಗಿಡಗಳು ಹೂ ಬಿಟ್ಟಿವೆ. ಸುವಾಸನೆ ರಾತ್ರಿಯ ವೇಳೆ ಅತೀ ಹೆಚ್ಚು. ಹಗಲಿನಲ್ಲಿ ಹೂಗಳು ತುಸು ಕಂಪು ಕಡಿಮೆ ಬೀರಿದರೂ, ಸಹಸ್ರಾರು ಸಂಖ್ಯೆಯಲ್ಲಿಜೇನು ದುಂಬಿಗಳನ್ನು ಆಕರ್ಷಿಸುತ್ತಿವೆ. ಅವು ಪರಾಗಸ್ಪರ್ಷಕ್ಕೆ ಅನುವಾಗಿ. ಮಕರಂದ ಹೀರುವುದನ್ನು ನೋಡುವುದೇಕಣ್ಣಿಗೆ ಹಬ್ಬ. ಇಡೀ ಮರ ಹೂಕೋಸು ಹೊದ್ದು ನಿಂತಂತೆಕಾಣುತ್ತಿವೆ.

  • ಶ್ರೀ ಮಂಜುನಾಥ ಹಿರೇಮಠ, ಶ್ರೀ ಆರೂಢಕಲಾಧಾಮ, ಗಾಯತ್ರಿಪುರಂ, ಧಾರವಾಡ.
    ಬಾಕ್ಸ್ -2
    ಸಪ್ತಪರ್ಣಿ (ಅಲ್‍ಸ್ಟೋನಿಯಾ ಸ್ಕೊಲ್ಯಾರಿಸ್)ತುಂಬ ಸುಂದರವಾದ ಬಿಳಿ ಹೂವು ಮತ್ತು ಸುವಾಸನೆ ಬೀರುವಗಿಡ.ಧಾರವಾಡದಲ್ಲಿ ಪ್ರಥಮ ಬಾರಿಗೆ ಈ ಗಿಡಗಳು ಹೂವು ಬಿಟ್ಟಿರುವುದುಸಂತಸದ ಸಂಗತಿ.ನಮ್ಮತೋಟದಲ್ಲಿಯೂ ಈ ಪ್ರಜಾತಿಯಎರಡು ಮರÀಗಿಳಿವೆ. 10 ರಿಂದ 12 ವರ್ಷಗಳಷ್ಟು ಹಳೆಯವು.ಆದರೆ ಈ ವರೆಗೆಒಮ್ಮೆಯೂ ಹೂ ಬಿಟ್ಟಿಲ್ಲ.
  • ಶ್ರೀ ಪಂಚಾಕ್ಷರಿ ವಿ. ಹಿರೇಮಠ, ಅಧ್ಯಕ್ಷರು, ನೇಚರ್‍ರಿಸರ್ಚ್ ಸೆಂಟರ್, ಧಾರವಾಡ.