
ಬೀದರ್:ಮೇ.2: ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಇಲ್ಲಿಯ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಉತ್ತಮ ರ್ಯಾಂಕ್ ಗಳಿಸಿದ ಅಭಿಜೀತ ರವಿ (306ನೇ ರ್ಯಾಂಕ್), ಚಾಮುಂಡೇಶ್ವರಿ ಮಲ್ಲಿಕಾರ್ಜುನ (525ನೇ ರ್ಯಾಂಕ್), ರಕ್ಷಿತಾ ಗಣಪತಿ (607ನೇ ರ್ಯಾಂಕ್), ರಾಜಶೇಖರ ಬಂಡೆಪ್ಪ (962ನೇ ರ್ಯಾಂಕ್), ಅಕ್ಷತಾ ಭೀಮಗೊಂಡ (981ನೇ ರ್ಯಾಂಕ್), ಪಲ್ಲವಿ ವಿಠ್ಠಲ (1,021ನೇ ರ್ಯಾಂಕ್), ಅಶ್ವಿನಿ ಮಾಣಿಕ (13,571ನೇ ರ್ಯಾಂಕ್), ಕೃಷ್ಣ ಅಂಬಾದಾಸ್ (14,211ನೇ ರ್ಯಾಂಕ್), ಶಿವಾರೆಡ್ಡಿ ಗೋಪಾಲರೆಡ್ಡಿ (15,047ನೇ ರ್ಯಾಂಕ್), ನಿತಿಶ್ ಚಂದ್ರಕಾಂತ (15,461ನೇ ರ್ಯಾಂಕ್), ಅರ್ಹತೆ ಗಳಿಸಿದ ಸಂಗಮೇಶ, ಭಾಗ್ಯಶ್ರೀ, ಐಶ್ವರ್ಯ, ವೈಷ್ಣವಿ, ಬಸವಆದಿತ್ಯ, ವಿಜ್ಞೇಶ, ಸಹನಾ, ಶ್ವೇತಾ, ಸೈಯದ್ ಸೊಹೇಲ್, ದಿಕ್ಷಿತಾ, ಮನೀಶ್, ಸ್ನೇಹಾ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸತ್ಕರಿಸಿ ಪ್ರೋತ್ಸಾಹಿಸಲಾಯಿತು.
ಜೆಇಇ ಮೇನ್ಸ್ ಪರೀಕ್ಷೆಯಲ್ಲಿ 22 ವಿದ್ಯಾರ್ಥಿಗಳು ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ತಿಳಿಸಿದರು.
ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಡಿ. ತಾಂದಳೆ, ಕಾರ್ಯದರ್ಶಿ ಗೋಪಾಲ ಡಿ. ತಾಂದಳೆ, ಉಪನ್ಯಾಸಕರು ಇದ್ದರು.