ಸಪಲಮ್ಮ ದೇವಿಯ ಶಿಲಾ ವಿಗ್ರಹ ಪ್ರತಿಷ್ಠಾಪನೆ

ಆನೇಕಲ್. ಮಾ. ೦೪- ಚಂದಾಪುರ ಪುರಸಭೆ ವ್ಯಾಪ್ತಿಯ ಹೀಲಲಿಗೆ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ಮದ್ದೂರಮ್ಮ ದೇವಿ ದೇವಾಲಯದ ಕುಂಬಾಭಿಷೇಕ ಮತ್ತು ಸಪಲಮ್ಮ ದೇವಿಯ ನೂತನ ಶಾಶ್ವತ ಶಿಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಅಪಾರ ಭಕ್ತರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ಇನ್ನು ವಿಶೇಷವಾಗಿ ಸಪಲಮ್ಮ ದೇವಿಯ ನೂತನ ಶಾಶ್ವತ ಶಿಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಪ್ರಾಣ ಪ್ರತಿಷ್ಠಾಪನೆ ಹೋಮ, ಮಹಾ ಪೂರ್ಣಾವತಿ. ಕುಂಬಾಬಿಷೇಕ, ಗೋ ದರ್ಶನ, ಪಂಚಕನ್ಯೆಯರ ದರ್ಶನ ಮಂತ್ರ ಪುಷ್ಟ ನೈವೇದ್ಯ, ಅನ್ನದಾಸೋಹ, ಸುಗಮ ಸಂಗೀತ ಸೇರಿದಂತೆ ಹಲವು ವಿಶೇಷ ಪೂಜಾ ಕಾರ್ಯಕ್ರಮಗಳು ಗ್ರಾಮಸ್ಥರ ಸಮ್ಮುಖದಲ್ಲಿ ಶಾಸ್ತೋಸ್ತವಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು.,ಗಣ್ಯರು ಹಾಗೂ ಹೀಲಲಿಗೆ ಗ್ರಾಮಸ್ಥರು ಮತ್ತು ಭಕ್ತರು ಬಾಗವಹಿಸಿದ್ದರು.