ಸನ್ಯಾಸಿ ಸಮಾಜವನ್ನು  ದುರುಪಯೋಗಪಡಿಸಿಕೊಳ್ಳಬಾರದು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಡಿ,13- ಸನ್ಯಾಸಿ ಸಮಾಜವನ್ನು  ದುರುಪಯೋಗಪಡಿಸಿಕೊಳ್ಳಬಾರದು. ರಾಜಕೀಯದಲ್ಲಿದ್ದು ಉತ್ತರ ಪ್ರದೇಶ ದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥನಂತೆ ಬದುಕಬೇಕು ಎಂಬ ಅಭಿಪ್ರಾಯವನ್ನು ಗದಗ, ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಶ್ರೀಗಳು ವ್ಯಕ್ತಪಡಿಸಿದ್ದಾರೆ.
ಅವರು  ನಗರದ ರಾಘವ ಕಲಾ ಮಂದಿರದಲ್ಲಿ ಇಲ್ಲಿನ ವಿವೇಕ ತೋರಣ ಸಂಸ್ಥೆ ಹಮ್ಮಿಕೊಂಡಿರುವ ಸ್ವಾಮಿ ವಿವೇಕಾನಂದ ಲೀಲಾಮೃತ ಕುರಿತಾಗಿ ಹಮ್ಮಿಕೊಂಡಿರುವ   ಉಪನ್ಯಾಸ ಕಾರ್ಯಕ್ರಮದಲ್ಲಿ ಇದನ್ನು ಪ್ರಸ್ತಾಪಿಸಿದರು.
ಸನ್ಯಾಸಿ ಸಮಾಜಕ್ಕೆ ಅಂಟಿಕೊಂಡಿರಬಾರದು. ಜಾತಿ ಅಂಟಿಕೊಂಡವರ ಬಗ್ಗೆ ನಾನೇನು ಹೇಳಲಾರೆ, ಆದರೆ ರಾಮಕೃಷ್ಣ ಆಶ್ರಮದ ಸನ್ಯಾಸಿಗಳು ಯಾವುದೇ ಜಾತಿ, ರಾಜಕೀಯ ವಿಷಯಕ್ಕೆ ಸೇರಲ್ಲ ಎಂದರು.
ಅಸ್ಪೃಶ್ಯತೆ ಮತಾಂತರಕ್ಜೆ  ಕಾರಣವಾಗುತ್ತೆ. ರಾಮಕೃಷ್ಣ ಆಶ್ರಮದಲ್ಲಿ ಅಸ್ಪೃಶ್ಯತೆ ವ್ಯವಸ್ಥೆ ಇಲ್ಲ. ಸಂಸ್ಕೃತಿ, ಶುಚಿ ಇದ್ದರೆ ಎಲ್ಲರೂ ಒಂದೇ ಎಂದರು. ಜ್ಞಾನ ಎಂಬುದು ಕೇವಲ ಶಿಕ್ಷಕರಿಂದ ದೊರೆಯಲ್ಲ, ಅದು ಶಿಕ್ಷಕರಿಂದ ಶೇ 25, ಸ್ನೇಹಿತರಿಂದ ಶೇ 25, ಸ್ವಪ್ರಯತ್ನದಿಂದ ಶೇ 25,
ವಯಸ್ಸಾದಂಗೆ ಅನುಭವದಿಂದ ಶೇ 25 ರಷ್ಟು ದೊರೆಯುತ್ತದೆ.
ಮಕ್ಕಳ ಮೇಲೆ ಉತ್ತಮ ನಡುವಳಿಕೆಯ ಪ್ರಭಾವ ಬೀರುವ ವ್ಯಕ್ತಿಗಳ ಕುರಿತು ಪಠ್ಯ ಇರಬೇಕು, ಯಾರೆಂದ್ರ ಅವರದ್ದಲ್ಲ. ಹಾಗೆ ಮಾಡುವ ಗುಣ, ಪ್ರಬುದ್ದತೆ ನಮ್ಮ ಶಿಕ್ಷಣಕ್ಕೆ ಬಂದಿಲ್ಲ. ಮಕ್ಕಳಲ್ಲಿ ಸ್ಪೂರ್ತಿ ತರದ ಶಿಕ್ಷಕನ ಭೋದನೆ ವ್ಯರ್ಥ ಎಂದರು.
ಒಂದು ನಗರದಲ್ಲಿ 2 ಲಕ್ಷಕ್ಕೂ ಹೆಚ್ಚು ಪುಸ್ತಕ ಇರುವ 24 ತಾಸಿನ ಲೈಬ್ರರಿ ಇರಬೇಕು.
ನಮ್ಮ‌ಶಿಕ್ಷಣದಲ್ಲಿ ಇರುವುದು ಈಗ ಕೇವಲ ಮಾಹಿತಿ ಇದೆ ಅಷ್ಟೇ ಜ್ಞಾನ ಇಲ್ಲ, ಅದು ಜ್ಞಾನ ಸಂಪತ್ತಾಗಬೇಕು. ಅದನ್ನು ಮಾಡಲು ಶಿಕ್ಷಣ ಇಲಾಖೆ ಸೋತಿದೆ. ವಿದ್ಯಾರ್ಥಿಗಳಿಗೆ ಶಿಕ್ಷೆ, ಶಾಲಾ ಕಾಲೇಜುಗಳ ಮ್ಯಾನೇಜ್ಮೆಂಟ್ ಗೆ ಹಣ ಇವೆರಡು ಸೇರಿ ಇಂದು ಶಿಕ್ಷಣವಾಗಿದೆಂದು ಟೀಕಿಸಿದರು.
ಮಾತೃಭಾಷೆಯಿಂದ ಕಲಿತ ಶಿಕ್ಷಣ ಮಹತ್ವದಾಗಿರಲಿದೆ. ಜಪಾನಿನ ಯಾವುದೇ ಉಪನ್ಯಾಸಕನಿಗೆ ಇಂಗ್ಲೀಷ್ ಬರಲ್ಲ. ಕಾರಣ ಅವರಿಗೆ ಇಂಗ್ಲೀಷ್ ಬೇಕಿಲ್ಲದೇ ವಿಕಾಸದ ಮಹತ್ವ ಅರಿತುಕೊಂಡಿದ್ದಾರೆ. ಇಂಗ್ಲೀಷ್ ಎಂಬುದು ಪ್ಯಾಷನ್ ಅಷ್ಟೇ ಎಂದರು.
ಶಿಕ್ಷೆಯ ಭಯ ಇದ್ದರೆ ಶಿಸ್ತು ಇರುತ್ತೆ. ಒಳ್ಳೆಯವರು ಏನು ಆಗಲ್ಲ. ಕೆಟ್ಟವರೇ ಶಾಸಕರು, ಸಚಿವರು, ಡಿಸಿಎಂ ಆಗ್ತಾರೆ ಎಂದು ಸಭೆಯಲ್ಲಿ ನಗೆ ಮೂಡಿಸಿದರು.