ಸನ್ಯಾಸತ್ವದ ದೀಕ್ಷೆ ಸ್ವೀಕರಿಸಿದ ಸವಿತಾ ಪೀಠದ ಶ್ರೀ

??????

ವಾಡಿ:ಜು.17: ಕೊಂಚೂರಿನ ಮಹರ್ಷಿ ಸವಿತಾ ಪೀಠದ ಪೀಠಾಧಿಕಾರಿ ಪೂಜ್ಯ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಅವರು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಉತ್ತರಾಧಿಕಾರಿ ಜಗದ್ಗುರು ಪುಜ್ಯಶ್ರೀ ಡಾ. ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರಿಂದ ಬುಧುವಾರ ಸನ್ಯಾಸತ್ವ ದೀಕ್ಷೆಪಡೆದರು.

ಪಟ್ಟಣದ ನಿವಾಸಿಗಳಾದ ದಿ. ಆಂಜನಯ್ಯ ಮತ್ತು ಪದ್ಮಾವತಿ ದಂಪತಿಗಳ ಉದರದಲ್ಲಿ ಜನಿಸಿದ ಶ್ರೀಧರ ರವರು ಕಳೆದ ಆರು ವರ್ಷಗಳ ಹಿಂದೆಯೇ ಖ್ಯಾತ ಉಡಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿಗಳಿಂದ ಸವಿತಾ ಪೀಠದ ಧರ್ಮಾಧಿಕಾರಿಯಾಗಿ ದೀಕ್ಷೆ ಪಡೆದಿದ್ದರು. ಅಂದಿನಿಂದ ನಿರಂತರವಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಸಾಮಾಜ ಸಂಘಟನೆಯ, ಹಾಗೂ ಧಾರ್ಮಿಕ ಸೇವೆಯಲ್ಲಿ ತೋಡಗಿದ್ದರು.

ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಸ್ವಾಮೀಜಿ ಹಾಗೂ ಸವಿತಾ ಸಮಾಜದ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಹೋಮ ಹವನವ ಮತ್ತು ಮಂತ್ರೋಪದೇಶಗಳ ಪಠಣ ಮತು ಮಂಗಳ ವಾದ್ಯಗಳ ಮಧ್ಯೆ ವಿವಿಧ ಧಾರ್ಮಿಕ ಕ್ರೀಯಾವಿಧಿಗಳೊಂದಿಗೆ ಪೂಜ್ಯರಿಂದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಅವರು ಸನ್ಯಾಸತ್ವ ದೀಕ್ಷೆ ಪಡೆದು ಕೊಂಚುರಿನ ಸವಿತಾ ಮಹಾ ಸಂಸ್ಥಾನಮಠದ ಪೀಠಾಧಿಕಾರಿಯಾಗಿ ನೇಮಕಗೊಂಡರು.ಇದೇ ಸಂದರ್ಭದಲ್ಲಿ ಶ್ರೀಧರಾನಂದ ಸರಸ್ವತಿ ಸ್ವಾಮೀಜಿಗೆ ಶ್ರೀ ಸವಿತಾಂದನಾಥ ಮಹಾ ಸ್ವಾಮೀಜಿ ಎಂದು ಮರುನಾಮಕರಣ ಮಾಡಲಾಯಿತು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಸಂಸ್ಥಾನಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು, ಸವಿತಾ ಸಮಾಜದ ಮುಖಂಡರು ಭಾಗವಹಿಸಿದರು.