ಸನ್ಮಾನ, ಸಾಂಸ್ಕøತಿಕ ಕಾರ್ಯಕ್ರಮ

ಹುಬ್ಬಳ್ಳಿ,ಡಿ28: ನಗರದ ಕನ್ನಡ ಭವನದಲ್ಲಿ ನಡೆದ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ನೆರವು ಸಂಸ್ಥೆಯ ಅಧ್ಯಕ್ಷರುಗಳಾದ ಶ್ರೀಮತಿ ಗಿರಿಜಾ ಹಿರೇಮಠ, ಮತ್ತು ಶ್ರೀಮತಿ ಸಾರಾ ಗೋಕಾವಿ ಇವರ ಸಂಯುಕ್ತಾಶ್ರಯದಲ್ಲಿ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಾರಂಭವನ್ನು ಜ್ಯೋತಿ ಬೆಳಗಿಸುವದರ ಮೂಲಕ ಡಾ. ರಮೇಶ ಮಹಾದೇವಪ್ಪನವರ, ಡಾ. ಕಲ್ಮೇಶ್ ಹಾವೇರಿಪೇಟ, ಉದ್ಘಾಟಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕಾರ ಸಾಹಿತ್ಯ, ಕಲೆ, ಸಂಗೀತ ನೃತ್ಯ, ರಂಗಭೂಮಿ, ಶೈಕ್ಷಣಿಕ, ಸಾಮಾಜಿಕ, ಕೃಷಿ, ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂತೋಷ ವರ್ಣೇಕರ, ಕಲಂದರ್ ಮುಲ್ಲಾ, ವೆಂಕಟೇಶ ಕಾಟವೆ, ಶಿವಪುತ್ರಪ್ಪ, ಸುಗುರಯ್ಯ ಸ್ವಾಮಿ, ಸದಾಶಿವ ಚೌಶೆಟ್ಟಿ, ಸ್ನೇಹ ಜಾದವ್, ಅನು ಹಲ್ಯಾಳ, ಪೂಜಾ ಬೊಮ್ಮನಹಳ್ಳಿ, ಮೀನಾಕ್ಷಿ, ರೂಪ, ರತ್ನ, ಸುಶೀಲ, ಮಂಜುಳಾ, ಪ್ರೇಮ, ಲಕ್ಷ್ಮೀ, ಅನ್ನಪೂರ್ಣ, ಅಶ್ವಿನಿ, ಅಕ್ಕಮ್ಮ, ಸಂಗೀತ, ಬಶೀರ್, ಜೈಶ್ರೀ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.