ಸನ್ಮಾನ ಸಮಾರಂಭ


ಲಕ್ಷ್ಮೇಶ್ವರ, ಡಿ 3: ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ಎಫ್‍ಸಿಎಂ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರೇಣುಕಾ ಮುತಾಲಿಕ್ ದೇಸಾಯಿ ಅವರನ್ನು ಬೆಳಗಾವಿಯ ಮಹಾಂತೇಶ್ ನಗರದಲ್ಲಿರುವ ಅವರ ನಿವಾಸದಲ್ಲಿ 1984ರ ಎಸೆಸೆಲ್ಸಿ ಬ್ಯಾಚಿನ ವಿದ್ಯಾರ್ಥಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವಿಶ್ರಾಂತ ಶಿಕ್ಷಕಿ ರೇಣುಕಾ ಮುತಾಲಿಕ ದೇಸಾಯಿ ಅವರು ಮಾತನಾಡಿ ಜೀವನದಲ್ಲಿ ಆದರ್ಶಗಳನ್ನು ರೂಡಿಸಿಕೊಂಡು ಗುರುಹಿರಿಯರಲ್ಲಿ ಭಕ್ತಿಭಾವ, ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ಯಾವ ಸಮಾಜ ನಮಗೆ ಸ್ಥಾನಮಾನ ನೀಡುತ್ತದೆಯೋ ಅದನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ನಮ್ಮ ಆದರ್ಶವನ್ನು ಮೆರೆಯಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ನಿಂಬಕ್ಕನವರ, ಅನ್ನಪೂರ್ಣ ನಿಂಗೋಡ್ತಿ, ಬಸವರಾಜ ಹಾಲಿ, ಸಿ.ಟಿ.ತಿಮ್ಮನಗೌಡ, ಮಂಜುನಾಥ್ ತಿರ್ಲಾಪುರ, ರಾಜು ಮಳಲಿ, ಮಂಜುಳಾ ನಿಂಬಕ್ಕನವರ, ರಾಮು ಮುಳುಗುಂದ, ರಾಜು ಕರ್ಕಣ್ಣವರ, ಕುಮಾರ್ ಶಿವಶಿಂಪಿ, ಚಂದ್ರಶೇಖರ್ ಪಾಟೀಲ್, ಅಣ್ಣಪ್ಪ ಉಪ್ಪಿನ ಮುತ್ತು ಗಾಣಿಗೇರ್ ಇದ್ದರು.