ಸನ್ಮಾನ ಸಮಾರಂಭ

(ಸಂಜೆವಾಣಿ ವಾರ್ತೆ)
ನವಲಗುಂದ,ಅ18 : ಅನ್ಯ ಭಾಷೆಗಳ ಒಳಹರಿವಿನ ಪರಿಣಾಮ ಅನೇಕ ಸವಾಲುಗಳು ಮುಖಾಮುಖಿಯಾಗಿದ್ದು ಅದನ್ನು ದಿಟ್ಟವಾಗಿ ನಾವೆಲ್ಲ ಎದುರಿಸಬೇಕಾಗಿದೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಪಟ್ಟಣದ ರಾಜಕುಮಾರ ಭವನದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟದವರಿಂದ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಈಗಿನ ಕಾಲಕ್ಕೆ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನಕ್ಕೆ ತಕ್ಕಂತೆ ಕನ್ನಡ ಭಾಷೆಯನ್ನು ಸಜ್ಜುಗೊಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕನ್ನಡವನ್ನು ಉಳಿಸಿ, ಬೆಳೆಸಿ, ರಕ್ಷಿಸಿ ಎಂಬ ಘೋಷಣೆಗಳು ಅನಿವಾರ್ಯವಾಗಿರುವ ಈ ಸಂದರ್ಭದಲ್ಲಿ ಕನ್ನಡ ಸೇನಾನಿಯ ಪ್ರೇರಣೆಯೇ ಭಾಷೆಯ ಉಳಿವಿಗೆ ಹೋರಾಟದ ದೀವಿಗೆಯಾಗಲಿ. ಕನ್ನಡ ನಾನು ಕಂಡ ಅಪ್ರತಿಮ, ಕನ್ನಡ ಸೇನಾನಿಗಳನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳುವ ಅಗತ್ಯತೆ ಇದೆ ಎಂದರು.
ಈ ವೇಳೆಯಲ್ಲಿ ನೇತಾಜಿ ಕಲಾಲ್, ಜೀವನ ಪವಾರ, ದಾವಲಸಾಬ್ ನದಾಫ. ಭರತೇಶ ಕುರಬರ, ಸಿದ್ದನಗೌಡ್ರ ಬಸಾಪುರ, ಶಿರಾಜ ಧಾರವಾಡ, ಸುಧೀರ್ ಶೆಟ್ರ, ನಿಂಗಪ್ಪ ಮಣಕವಾಡ, ವಿಜಯ ನಾಗಾವಿ, ಕುಮಾರ ಕಲಾಲ್, ವಿಜಯ ಯಲಿಗಾರ, ತಾರಪ್ಪ ಲಮಾಣಿ, ಆನಂದ ಕೊಟಗಿ, ಶರೀಫ್ ಕಲಬುರ್ಗಿ ಮಂಜುನಾಥ ಕುಂಕುಮಗಾರ, ಶಿವಾನಂದ ಕುರಹಟ್ಟಿ, ಶೌಕ್ಕತ ಇಂಜಿನಿಯರ್, ಉಮೇಶ್ ಪಡೇಸೂರ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.