ಸನ್ಮಾನ ಸಮಾರಂಭ

(ಸಂಜೆವಾಣಿ ವಾರ್ತೆ)
ಬಾದಾಮಿ,ಸೆ 11: ತಾಲೂಕಿನ ಕಾತರಕಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಗಣ್ಯರ ಸನ್ಮಾನ ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯತಿಯ ಅಧ್ಯಕ್ಷೆ ರೇಣುಕಾ ಅಯ್ಯನಗೌಡ. ಗೌಡರ, ನಿಕಟಪೂರ್ವ ಗ್ರಾ.ಪಂ.ಅಧ್ಯಕ್ಷ ಬಸನಗೌಡ ಪಾಟೀಲ, ನಿಕಟ ಪೂರ್ವ ಗ್ರಾ.ಪಂ.ಉಪಾಧ್ಯಕ್ಷಣಿ ಭೀಮವ್ವ ತಳವಾರ, ಗ್ರಾ.ಪಂ.ಸದಸ್ಯರಾದ ಅಂದಾನ ಗೌಡ ಪಾಟೀಲ, ಶಿಕ್ಷಣ ಪ್ರೇಮಿ ಬರಮಗೌಡ ದೊಡ್ಡಗೌಡರ, ರೇಷ್ಮೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ವಿ.ಎಸ್ ಪೂಜಾರ ಮೊದಲಾದವರನ್ನು, ಶಾಲೆಗೆ ಕೊಡುಗೆ ಹಾಗು ಸಹಕಾರವನ್ನು ಕೊಟ್ಟಿದ್ದಕ್ಕಾಗಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಆರ್.ಎಂ.ಸಾರವಾಡ ಪ್ರಾಸ್ಥಾವಿಕವಾಗಿ ಮಾತನಾಡಿದರು. ಮಾಜಿ ಗ್ರಾ.ಪಂ.ಅಧ್ಯಕ್ಷ ಬಿ.ಆರ್.ಪಾಟೀಲ ಶಾಲೆಯ ಬಗ್ಗೆ ಕಾಳಜಿ ಹೊಂದಿ, ಹಲವಾರು ಯೋಜನೆಗಳನ್ನು ಶಾಲೆಗೆ ತಲುಪಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಶಿಕ್ಷಕ ಎಚ್.ಬಿ.ನಾಯ್ಕರ ಮಾತನಾಡಿದರು. ಬರಮಗೌಡ ದೊಡ್ಡಗೌಡರ ಅಧ್ಯಕ್ಷತೆ ವಹಿಸಿದ್ದರು. ನಂತರ ಮಾತನಾಡಿ ಪ್ರಾಥಮಿಕ ಶಾಲೆ ಶಿಕ್ಷಣದ ಬುನಾದಿ ಈ ಶಾಲೆಗೆ ಎಲ್ಲಾ ಸೌಲಭ್ಯಗಳನ್ನ ಒದಗಿಸಬೇಕೆಂದು ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರಿಗೆ ಸಲಹೆಯನ್ನು ಕೊಟ್ಟರು.
ವೇದಿಕೆಯ ಮೇಲೆ ಬರಮಗೌಡ ದೊಡ್ಡಗೌಡ, ಬಿ.ಆರ್.ಪಾಟೀಲ್, ರಾಮನಗೌಡ. ಅಯ್ಯನಗೌಡ, ವಿ.ಎಸ್. ಪೂಜಾರ, ಎಚ್.ಬಿ.ನಾಯ್ಕರ, ವಿ.ಬಿ.ಗೌಡರ, ಅಂದಾನಗೌಡ ಗೌಡರ, ಆರ್. ಬಿ ಹುಂಬಿ, ರೇಣುಕಾ ಅಯ್ಯನಗೌಡರ, ಆರ್.ಎಸ್.ಬುದನವರ, ಎಸ್.ಆರ್.ಕಾತರಿಕಿ, ನಾಗರಾಜು ಹೊಸೂರ. ಐ.ಎ.ಸೋಲಾಪುರ, ಎಚ್.ಎನ್.ನರಸಾಪುರ, ಎಸ್.ಎಸ್.ಲೋಣಿ, ಎಲ್. ಎಸ್. ಗುಮಾಸ್ತೆ, ಶಂಕ್ರಮ್ಮ ಮಂಗಳೂರ, ವಿದ್ಯಾ ಮೇಟಿ, ಗಿರಿಜಾ ದಳವಾಯಿ, ಸುವರ್ಣ ಹೂಗಾರ, ಪದ್ಮಾವತಿ ಕೋಳಿವಾಡ ಮುಂತಾದವರು ಉಪಸ್ಥಿತರಿದ್ದರು.