ಸನ್ಮಾನ ಸಮಾರಂಭ

ಹುಬ್ಬಳ್ಳಿ, ಮಾ 14: ಬಡವರು, ದಲಿತರು, ಅಲ್ಪಸಂಖ್ಯಾತರು, ಬೀಡಿ ಕಾರ್ಮಿಕರು, ರಿಕ್ಷಾ ಚಾಲಕರ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಹೋರಾಟ ಮಾಡಿದ ದಿ. ಎ.ಜೆ. ಮುಧೋಳ ಅವರು ಎಲ್ಲರ ಮನದಲ್ಲಿ ಉಳಿದಿದ್ದಾರೆ ಎಂದು ಸ್ಲಂ ಅಭಿವೃದ್ದಿ ಬೋರ್ಡ್ ಚೇರಮನÀ ಹಾಗೂ ಶಾಸಕರಾದ ಪ್ರಸಾದ ಅಬ್ಬಯ್ಯ ಹೇಳಿದರು.

ಅವರು ದಿ. ಎ.ಜೆ. ಮುಧೋಳ ಉತ್ತರ ಕರ್ನಾಟಕದ ಅಭಿಮಾನಿಗಳ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಹು-ಧಾ ಮಹಾನಗರ ಪ್ರಾಧಿಕಾರದ ಚೇರಮನ್ ಶಾಕಿರ ಸನದಿ ಮಾತನಾಡಿ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಬಹಳಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ. ಇದರ ಸದಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡಸಬೇಕು. ಪ್ಲಾಟುಗಳನ್ನು ಖರೀದಿಸುವಾಗ ಅಭಿವೃದ್ದಿ ಹೊಂದಿದ ಪ್ಲಾಟುಗಳನ್ನು ಮಾತ್ರ ಖರೀದಿಸಿ. ಅಕ್ರಮ ಪ್ಲಾಟುಗಳನ್ನು ಖರೀದಿಸಿ ಮೊಸಕ್ಕೆ ಒಳಗಾಗಬಾರದು ಎಂದು ಸಲಹೆ ನಿಡಿದರು.

ಲಿಂಗಾಯತ ಸಮಾಜ ಮುಖಂಡ ರಾಜಶೇಖರ ಮೆಣಸಿನಕಾಯಿ ಮಾತನಾಡಿ ಸರಕಾರದ ಯೋಜನೆಗಳಿಂದ ಬಡವರ ಬಾಳು ಬೆಳಕಾಗಿದೆ. ಯುವಕರು ಉತ್ತಮ ಸಮಾಜ ಕಟ್ಟುವಲ್ಲಿ ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಶಾಖೀರ ಸನದಿ, ಬಾಬಾಜಾನ ಮುಧೋಳ, ಮುತ್ತಣ್ಣಾ ಶಿವಳ್ಳಿ ಇವರನ್ನು ಸನ್ಮಾನಿಸಲಾಯಿತು.

ನಜೀರಅಹ್ಮದ ಕೋಲಕಾರ, ಯುಸೂಫ ಬಳ್ಳಾರಿ, ಬಸೀರ ಮುಧೋಳ, ಇಜಾಜ ಮುಧೋಳ, ಆಸೀಫ್ ಜುಂಗುರ, ಗುಲಾಮಗೌಸ್ ಗೌಳಿ, ರಮೇಶ ಬ್ಲೋಸೆ, ಹನಮಸಾಗರ, ಅಲ್ಲಾಭಕ್ಷ ನದಾಫ್, ಮುಸ್ತಾಕ ಮುತ್ತೂರ, ಸಾಜೀದ ಹಾಲಬಾವಿ, ಜಾವಿದ ಲಕ್ಷ್ಮೇಶ್ವರ, ಪೀರಸಾಬ ನದಾಫ್ ಮತ್ತಿತರರು ಉಪಸ್ಥಿತರಿದ್ದರು.