ಸನ್ಮಾನ ಸಮಾರಂಭ


ಲಕ್ಷ್ಮೇಶ್ವರ,ನ.29: ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಮಕ್ಕಳ ಸಾಹಿತ್ಯ ಪರಿಷತ್ತು ಶಿಗ್ಲಿ ಹೋಬಳಿ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ50ರ ಅಂಗವಾಗಿ ಗದಗ ಜಿಲ್ಲಾ ಮಕ್ಕಳ ಸಾಹಿತ್ಯ ಸಂಭ್ರಮ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾಕ್ಟರ್ ಶಂಭು ಬಳಿಗಾರ ಮತ್ತು ಕೇಂದ್ರ ಗ್ರಹ ಇಲಾಖೆಯ ಪ್ರಶಸ್ತಿ ಪುರಸ್ಕೃತ ಡಿವೈಎಸ್ಪಿ ಶಂಕರ್ ರಾಗಿಯವರ ಸನ್ಮಾನ ಸಮಾರಂಭ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಶಿಗ್ಲಿ ಗ್ರಾಮದ ಕೆಜಿಎಸ್ ಶಾಲೆಯ ಸಂಸತ್ ಪ್ರಧಾನಿ ಕುಮಾರಿ ಸವಿತಾ ಮಾಂತೇಶ್ ಹವಳ ದ ಉದ್ಘಾಟಿಸಿ ಮಾತನಾಡಿ ಮಕ್ಕಳ ಮನಸ್ಸು ಅತ್ಯಂತ ಮೃದುವಾಗಿದ್ದು ಪ್ರತಿಯೊಂದು ವಿಷಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ಕರಗಿಸಿಕೊಳ್ಳುವ ಮನೋಭಾವವನ್ನು ಹೊಂದಿದ್ದಾರೆ ಇಂದಿನ ಮಕ್ಕಳೇ ಮುಂದಿನ ನಾಗರಿಕರಾಗಿ ದೇಶದ ಭವಿಷ್ಯವನ್ನು ನಿರ್ಮಿಸಬಲ್ಲರು ಅವರ ಮನದಾಳದಲ್ಲಿನ ವಿಷಯವನ್ನು ಅರ್ಥ ಮಾಡಿಕೊಂಡು ಅವರು ಬೋಧನೆಗೆ ಹೊಂದಿಕೊಳ್ಳುವಂತೆ ತಿದ್ದಿ ತೀಡಿ ಶಿಲ್ಪಿಗಳನ್ನಾಗಿಸುವ ಶಕ್ತಿ ಶಿಕ್ಷಕರದ್ದಾಗಿದೆ ಮಕ್ಕಳಿಗೆ ಆರಂಭದಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿ ಅವರನ್ನು ಸಾಹಿತಿಗಳನ್ನಾಗಿ ಮಾರ್ಪಡಿಸಬೇಕು.
ಮಕ್ಕಳ ಸಾಹಿತ್ಯ ಮಕ್ಕಳಿಂದಲೇ ರಚಿತವಾದಾಗ ಅದಕ್ಕೊಂದು ಅರ್ಥ ಬರುತ್ತದೆ ಈ ನಿಟ್ಟಿನಲ್ಲಿ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಸಾಹಿತ್ಯದ ಅಭಿವೃಚಿಯನ್ನು ಬೆಳೆಸಿ ಅವರನ್ನು ಸಾಹಿತಿಗಳನ್ನಾಗಿ ಮಾರ್ಪಡಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದ ಗೌಡ ಪಾಟೀಲ್ ಅವರು ಮಾತನಾಡಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಆರಂಭದಲ್ಲಿಯೇ ಪದಗಳ ರಚನೆ, ಕವನ ಎಂದರೇನು, ಸಾಹಿತ್ಯ ಇವುಗಳ ಬಗ್ಗೆ ಶಿಕ್ಷಕರು ಅಭಿರುಚಿ ಹುಟ್ಟಿಸಬೇಕು ಬಾಲ್ಯದಲ್ಲಿಯೇ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಅರಿವು ಮೂಡಿಸಿ ಅವರನ್ನು ಸಾಹಿತ್ಯಗಳನಾಗಿ ಹೊರಹಮ್ಮಿಸಬೇಕು ಆದರೆ ಇಂದು ಕೇವಲ ಪಠ್ಯಪುಸ್ತಕ ಆಧಾರಿತ ಶಿಕ್ಷಣವಾಗಿದೆ. ಮಕ್ಕಳ ಸಾಹಿತ್ಯ ಭಾಷೆ ಸೃಜನಶೀಲವಾಗಿ ಬೆಳೆಯಬೇಕು ಎಂದರು.
ಪ್ರವೀಣ್ ಹುಲಗೂರ ಆಶಯ ನುಡಿ ವ್ಯಕ್ತಪಡಿಸಿದರು ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ರೆಡ್ಡೇರ ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನಿ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಂದ್ರಗಡಾದ ತಾಲೂಕಾಧ್ಯಕ್ಷ ನಾಗರಾಜ ಹಣಗಿ ಸಾಹಿತ್ಯ ಪರಿಷತ್ ತಾಲೂಕ ಘಟಕದ ಅಧ್ಯಕ್ಷ ಈಶ್ವರ್ ಮೆಡ್ಲೇರಿ ಸಿಜಿ ಹಿರೇಮಠ ಪಂಚಾಯಿತಿ ಅಧ್ಯಕ್ಷೆ ದುಂಡವ್ವ ಹಾದಿಮನಿ ಉಪಾಧ್ಯಕ್ಷರಾದ ಶೈಲಾ ಜನಿವಾರದ ಡಿ ವೈ ಹುನಗುಂದ್ ಎಲ್ಲಪ್ಪ ತಳವಾರ್ ಶಿವಣ್ಣ ಕುರಿ ಮಹಾದೇವಿ ತಳವಾರ ಗುಲ್ಜಾರ್ ಬಾನು ಶೇಖ ಸೋಮಣ್ಣ ಡಾಣಗಲ್ಲ ರಾಮಣ್ಣ ಲಮಾಣಿವೀರಣ್ಣಾ ಅಳ್ಳಳ್ಳಿ ಇಡೀ ಸೋಮನ ಕಟ್ಟಿಡಿಎಫ್ ಪಾಟೀಲ್ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಎನ್ ಎಂ ಅರಳಿ ಎಮ್ ಸಿಗೊಣಪ್ಪನವರ ಎಡಿ ಸೋಮನ ಕಟ್ಟಿ ನಿರ್ವಹಿಸಿದರು.