ಸನ್ಮಾನ, ನಾಟಕ ಕಾರ್ಯಕ್ರಮ


ಧಾರವಾಡ ಎ.19: 75ನೇ ವರ್ಷ ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಕಲಾ ಸಂಗ ಸಂಸ್ಥೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು. ಇವರ ಆಶ್ರಯದಲ್ಲಿ ರಂಗ ಸಂಗೀತ. ವಿಚಾರ ಸಂಕೀರ್ಣ, ಗಣ್ಯರಿಗೆ ಸನ್ಮಾನ ಹಾಗೂ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಗರದ ನಾಡೋಜ ಡಾ. ಪಾಟೀಲ ಪುಟ್ಟದ ಸಭಾ ಭವನ ಕ.ವಿ.ವ ಸಂಘದಲ್ಲಿ ನಾದ ಝೇಂಕಾರ ಸಾಂಸ್ಕøತಿಕ ತಂಡದವರಿಂದ “ದೇವಿ ಭುವನ ಮನಮೋಹಿನಿ” ಜೊಜೊ ಕೃಷ್ಣ ಪರಮಾನಂದ, ಹೇಳೆ ಸಕಿ ಹೇಳೆ ಆ ಹೆಸರನ್ನು, ಸಲಾಂ ವಾಲೇಕುಂ ಡಿಗುಂಡಾಂಗು ಸಾಹೇಬರ, ಇಲ್ಲಿರಲಾರೇ ಅಗಲೀ ಹೋಗಲಾರೆ, ಸೋಮಲಿಂಗನ ಗುಡಿ, ಹೀಗೆ ವಿವಿಧ ನಾಟಕಗಳಿಂದ ಆಯ್ದುಕೊಂಡ ಹಾಡುಗಳನ್ನು ನಾದ ಝೇಂಕಾರ ಸಾಂಸ್ಕøತಿಕ ಸಂಘದ ಸದಸ್ಯರಾದ ಅನಿತಾ ಆರ್, ಸೃಜನಾ ಕೆ, ಫಕ್ಕಿರಪ್ಪ ಮಾದನಭಾವಿ, ರಂಗ ಗೀತೆ ಹಾಗೂ ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿ ಪ್ರೇಕ್ಷರನ್ನು ರಂಜಿಸಿದರು. ಇವರಿಗೆ ತಬಲಾದಲ್ಲಿ ಯಮನಪ್ಪ ಜಾಲಗಾರ, ಸುರೇಶ ನಿಡಗುಂದಿ, ಹಾಗೂ ಹಾರಮೋನಿಯಂನಲ್ಲಿ ಆರ್ ಬಿ ಕುಲಕರ್ಣಿ, ಸಾಥ್ ನೀಡಿದರು.