ಸನ್ಮಾನ ಕಾರ್ಯಕ್ರಮ

ಹುಬ್ಬಳ್ಳಿ, ಜ 11- ದಿ. ಹುಬ್ಬಳ್ಳಿ ಬುದ್ದಿಸ್ಟ್ ಅಸೋಸಿಯೇಶನ್‍ನಿಂದ ಬುದ್ಧ ವಿಹಾರ ಆವರಣದಲ್ಲಿ ಹಮ್ಮಿಕೊಂಡಿದ್ದ ಪೊಂಗಲ್ ಉತ್ಸವದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು.
ಸುಮಾರು 97 ವರ್ಷಗಳ ಇತಿಹಾಸವುಳ್ಳ ಅತ್ಯಂತ ಪುರಾತನವಾದ ಬುದ್ಧ ವಿಹಾರವನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರು ವಿಶೇಷ ಆಸಕ್ತಿಯಿಂದ 1.5 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಶ್ರದ್ಧಾ ಕೇಂದ್ರವಾಗಿ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಅಸೋಸಿಯೇಶನ್‍ನಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಇತ್ತೀಚಿಗೆ ನಿವೃತ್ತರಾದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಅವರನ್ನೂ ಸಹ ಅಸೋಸಿಯೇಶನ್‍ನಿಂದ ಸನ್ಮಾನಿಸಿ ಗೌರವಿಸಲಾಯಿತು.
ಅಸೋಸಿಯೇಶನ್ ಅಧ್ಯಕ್ಷ ಪಿ.ಜಿ. ಕಮಲನಾಥನ್, ಕಾರ್ಯದರ್ಶಿ ಟಿಜಿಕೆ ಚಕ್ರವರ್ತಿ, ಜಂಟಿ ಕಾರ್ಯದರ್ಶಿ ಸಿ ಮುರುಗನ್, ಜಿ. ಪುರುಷೋತ್ತಮ, ಎಂ. ತಮಿಳಕುಮಾರ್, ಪಿ. ತ್ಯಾಗರಾಜನ್, ಸುಜಾತ ಮಹಿಳಾ ಮಂಡಳದ ಮೇಘಲೈ ತಮಿಳಕುಮಾರ್, ಭುವನೇಶ್ವರಿ ಪನ್ನೀರಸೆಲ್ವಂ, ಗೀತಾ ಪುರುಷೋತ್ತಮ, ಇತರರು ಇದ್ದರು.