ಸನ್ಮಾನ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ14 : ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಗೃಹ ಇಲಾಖೆಯ 2023ರ ತನಿಖಾ ಕೌಶಲ್ಯ ಪ್ರಶಸ್ತಿಗೆ ಭಾಜನರಾದ ಶಿಗ್ಲಿ ಗ್ರಾಮದ ಸದ್ಯ ಗದಗ್ ಜಿಲ್ಲಾ ಲೋಕಾಯುಕ್ತ ಡಿ ವೈ ಎಸ್ ಪಿ ಯಾಗಿ ಸೇವೆ ಸಲ್ಲಿಸುತ್ತಿರುವ ಶಂಕರ್ ಎಂ ರಾಗಿಯವರನ್ನು ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಹಿರಿಯರಾದ ಸೋಮಣ್ಣ ಡಾನ್ಗಲ್ ಅವರು ಶಿಗ್ಲಿ ಗ್ರಾಮವು ಶಿಕ್ಷಣ ಕಾಶಿಯಾಗಿದ್ದು ಈ ಪುಣ್ಯಭೂಮಿಯಿಂದ ರಾಜ್ಯಕ್ಕೆ ಅನೇಕ ಮೇಧಾವಿಗಳನ್ನು ನೀಡಿದ ಶ್ರೇಯಸ್ಸನ್ನು ಹೊಂದಿದೆ. ಈಗ ಲೋಕಾಯುಕ್ತ ಡಿವೈಎಸ್ಪಿ ಯಾಗಿ ಸೇವೆ ಸಲ್ಲಿಸುತ್ತಿರುವ ಶಂಕರ್ ರಾಗಿಯವರಿಗೆ ಅವರ ತನಿಖಾ ಕೌಶಲ್ಯ ಪರಿಗಣಿಸಿ ಕೇಂದ್ರದ ಗ್ರಹ ಸಚಿವಾಲಯವು ಪ್ರಶಸ್ತಿ ನೀಡಿರುವುದು ಗ್ರಾಮಕ್ಕೆ ಮತ್ತು ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದರು.
ಈ ಸಂದರ್ಭದಲ್ಲಿ ಶಿವಣ್ಣ ಕೆಸರಹಳ್ಳಿ, ರಾಜು ಮುಳುಗುಂದ, ಅಶೋಕ ಶಿರಹಟ್ಟಿ, ಬಸಣ್ಣ ಹಂಚಿ, ನಿಂಗಪ್ಪ ಹುನಗುಂದ, ಎನ್. ಎನ್. ನೆಗಳ, ಮಹದೇವ್ ಹುಲಗೂರ, ಕುಬೇರಪ್ಪ ಅಣ್ಣಿಗೇರಿ, ಜ್ಯೋತಿಬಾ ಗೋಂದಕರ, ಪಕೀರಪ್ಪ ತೋಟದ, ಮುತ್ತಣ್ಣ ಕೆಸರಹಳ್ಳಿ, ಶಿವಪುತ್ರಪ್ಪ ಬೊಮ್ಮನಕಟ್ಟಿ ಸೇರಿದಂತೆ ಅನೇಕರಿದ್ದರು.