(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು19 : ಪಟ್ಟಣದ ಬಿಇಎಸ್’ಎಮ್ ಡಿಗ್ರಿ ಕಾಲೇಜಿನ ರಜತಮಹೋತ್ಸವ ಸಭಾಭವನದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ತಮ್ಮ ಸೇವಾವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಸೇವಾ ಕಾರ್ಯಗಳನ್ನು ಕೈಗೊಂಡು ಗಣನೀಯ ಸಾಧನೆ ಮಾಡಿದ ಮಂಜುನಾಥ ಉಪ್ಪಾರ ಅವರನ್ನು ಕ್ಲಬ್ ವತಿಯಿಂದ “ರೋಟರಿ ರತ್ನ” ಎಂದು ಬಿರುದು ನೀಡಿ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
ಹಲವು ವರ್ಷಗಳಿಂದಲೂ ಬ್ಯಾಡಗಿ ರೋಟರಿ ಕ್ಲಬ್ಬಿನ ಪರವಾಗಿ ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕೊಲ್ಲಾಪುರದ ಡಿಸ್ಟಿಕ್ ಗವರ್ನರ್ ನಾಸಿರ್, ಎಲ್ಲ ಗಣ್ಯರು, ಕ್ಲಬ್ಬಿನ ಪದಾಧಿಕಾರಿಗಳು ಹಾಗೂ ಸದಸ್ಯರೆಲ್ಲರೂ ಸೇರಿ “ರೋಟರಿ ರತ್ನ”ಎಂಬ ಬಿರುದು ನೀಡಿ ”ಬೆಸ್ಟ್ ಪ್ರೆಸಿಡೆಂಟ್” ಮತ್ತು “ಸರ್ವಿಸ್ ಅಬೌವ್ ಸೆಲ್ಫ್” ಉನ್ನತ ಪ್ರಶಸ್ತಿ ಪ್ರಧಾನ ಮಾಡಿ ಮಂಜುನಾಥ ಉಪ್ಪಾರ ದಂಪತಿಗಳಿಬ್ಬರಿಗೂ ಗೌರವಿಸಿ ನೆನಪಿನ ಕಾಣಿಕೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ರತ್ನ ಬಿರುದು ಮತ್ತು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷರಾಗಿದ್ದ ಮಂಜುನಾಥ ಉಪ್ಪಾರ ಅವರು, ಇದು ನನ್ನ ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆಗೆ ಲಭಿಸಿದ ಗೌರವ ಎಂದು ತಿಳಿಸಿ ಎಲ್ಲ ರೋಟರಿ ಕ್ಲಬ್ಬಿನ ಸದಸ್ಯರಿಗೆ ಹಾಗೂ ಗಣ್ಯರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.