ಸನ್ಮಾನ ಕಾರ್ಯಕ್ರಮ

ಧಾರವಾಡ,ನ12 : ಫೆÇೀಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ವತಿಯಿಂದ ಹೆಮ್ಮೆಯ ಧಾರವಾಡಿಗ 2022 ಬಿರುದು ಹಾಗೂ ಸನ್ಮಾನ ಕಾರ್ಯಕ್ರಮವನ್ನು ಧಾರವಾಡದ ನಿವೃತ್ತ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸುಕನ್ಯ ಬಡಿಗೇರ ನೇರವೇರಿಸಿದರು. ಕಾರ್ಯಕ್ರಮದಲ್ಲಿ ಬಿ.ಎಮ್.ಕೇದಾರನಾಥ, ಮಹಾದೇವ ಪಾಟೀಲ, ರವಿಕುಮಾರ್ ಕಗ್ಗನವರ, ಪುಂಡಲಿಕ ಹಡಪದ, ಲಕ್ಷ್ಮೀಕಾಂತ ಬಿಳಗಿ ಸೇರಿದಂತೆ ಹಲವು ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಎಸ್ ಪಾಟೀಲ, ಪ್ರಭು ಹಂಚಿನಾಳ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಗಿರೀಶ್ ಹೆಗಡೆ, ವರದಿಗಾರ ಮುಸ್ತಫಾ ಕುನ್ನಿಭಾವಿ, ನಂದಿಕೇಶ್ವರ ಹೆಗಡೆ, ಪೃಥ್ವಿರಾಜ್, ಮುರಳಿ, ಶ್ರೀನಿವಾಸ, ಅನಿಲ ಕಲಾಲ, ಸಮೀರ್ , ಬಸವರಾಜ, ಗುರುಸಿದ್ದೇಶ, ರಾಹುಲ್, ಬೋಸ್ಕೋ, ರವಿ ಯಾಲಕ್ಕಿ ಶೆಟ್ಟರ, ಲಕ್ಷ್ಮಣ ದಾನಪ್ಪಗೌಡರ ಸೇರಿದಂತೆ ಧಾರವಾಡ ಫೆÇೀಟೋ ಮತ್ತು ವಿಡಿಯೋಗ್ರಾಫರ್ಸ ಸಂಘದ ಎಲ್ಲಾ ಪದಾಧಿಕಾರಿಗಳು ಇದ್ದರು.