
ವಿಜಯಪುರ:ಮಾ.14:ದೇವಾಂಗ ಸಮಾಜದಲ್ಲಿ ಉತ್ಕøಷ್ಟ ಸಾಧನೆ ಮಾಡಿದ ಪ್ರತಿಭಾವಂತರಿಗೆ ಸನ್ಮಾನಿಸುವ ಬದಲು ಪ್ರತಿ ಸದಸ್ಯರಿಂದ ದಿನಕ್ಕೆ 1 ರೂಪಾಯಿಯಂತೆ ಸಂಗ್ರಹಿಸಿ ಅವರ ಉನ್ನತ ಶಿಕ್ಷಣಕ್ಕೆ ಧನಸಹಾಯ ಮಾಡಬೇಕು.ಮುಂದೆ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ವಿಜಯಪುರ ಖೇಡ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಡಾ.ಸಂಗಮೇಶ ಮೇತ್ರಿ ಹೇಳಿದರು.
ಅವರು ನಗರದ ಮಂಜುನಾಥ ಇಂಡಸ್ಟ್ರೀಸ್ ಆವರಣದಲ್ಲಿ ವಿಜಯಪುರ ನಗರ ದೇವಾಂಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಮಾಜದ ಉದ್ಧಾರಕ್ಕಾಗಿ ಕೇವಲ ಕುಲದ ಅಲ್ಪ ಹಣದಲ್ಲಿ ನಮ್ಮ ಗುರಿಗಳು ಅಸಾಧ್ಯ .ಜೊತೆಗೆ ಜನಪ್ರತಿನಿಧಿಗಳ ಹಾಗೂ ಘನ ಸರ್ಕಾರದ ಯೋಜನೆಗಳ ಸದ್ವಿನಿಯೋಗ ಮಾಡಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು ಎಂದು ವಿಜಯಪುರ ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಬಸವರಾಜ ಚಿತ್ತರಗಿ ಹೇಳಿದರು.
ಇದೇ ಮಾರ್ಚ್ 26 ರಂದು ಶ್ರೀ ದೇವರ ದಾಸಿಮಯ್ಯನವರ ಜಯಂತಿಯ ಆಚರಣೆಯನ್ನು ವಿಜಯಪುರ ನಗರದಲ್ಲಿ ಜಿಲ್ಲಾಡಳಿತದೊಂದಿಗೆ ಹಾಗೂ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ವಿಜೃಂಭನೆಯ ಪಾಲ್ಗೋಳ್ಳುವಿಕೆ ಹಾಗೂ ಕ್ರಿಯಾಶೀಲತೆಯ ಆಚರಣೆಯಲ್ಲಿ ಭಾಗವಹಿಸುವಿಕೆ ಪ್ರತಿಯೊಬ್ಬರಲ್ಲಿರಬೇಕೆಂದು ನಿರ್ಧರಿಸಲಾಯಿತು.
ಇದೇ ಸಂದರ್ಭದಲ್ಲಿ ವಿಜಯಪುರ ನಗರ ಘಟಕದ ದೇವಾಂಗ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು. ಗೌರವಾಧ್ಯಕ್ಷರಾಗಿ ಎನ್ ಎಂ ಪ್ಯಾಟಿ, ಅಧ್ಯಕ್ಷರಾಗಿ ಪ್ರಸಾದ ಬಸರಕೋಡ,ಉಪಾಧ್ಯಕ್ಷರಾಗಿ
ನಾಗಪ್ಪ ಮೇತ್ರಿ,ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ತಳಗಡೆ,ಕಾರ್ಯದರ್ಶಿಯಾಗಿ ರಾಘವೇಂದ್ರ ಜೀಗೇರಿ,ಸಂಘಟನಾ ಕಾರ್ಯದರ್ಶಿಯಾಗಿ ಕಲ್ಲಪ್ಪ ಮೇತ್ರಿ,ಖಜಾಂಚಿಯಾಗಿ ಬಿ ಕೆ ಅಪ್ಪಣ್ಣ ಅವರನ್ನು ಆಯ್ಕೆ ಮಾಡಲಾಯಿತು.
ನಿರ್ದೇಶಕ ಮಂಡಳಿಯಲ್ಲಿ ಸಿದ್ದು ಭಾವಿಕಟ್ಟಿ,ರವೀಂದ್ರ ರೂಗಿ,ಈರಣ್ಣ ಕೊಪ್ಪಳ,ರವಿ ಕಂಠಿ,ವಿನೀತ ದಿನ್ನಿಮನಿ ಇದ್ದಾರೆ.
ನಮ್ಮ ನೇಕಾರ ಸಮಾಜದಲ್ಲಿ ದೇವಾಂಗ,ಹಟಗಾರ,ಕುರುವಿನಶೆಟ್ಟಿ ಹೀಗೆ ವಿಭಿನ್ನ ಆಚರಣೆಯ ಭಿನ್ನ ಸಂಪ್ರದಾಯ ಪಾಲಿಸುವ ಪಂಗಡಗಳಿದ್ದರೂ ಒಂದೇ ಕುಲಕಸುಬಿನಿಂದ ಬೆಳೆದ ನಾವೆಲ್ಲ ಒಂದೇ.ಎಲ್ಲರೂ ಒಮ್ಮನಸ್ಸಿನಿಂದ ಸಕಾರಾತ್ಮಕವಾಗಿ ನಿಸ್ವಾರ್ಥವಾಗಿ ಸಮಾಜಕ್ಕಾಗಿ ದುಡಿಯಬೇಕು ಎಂದು ಜಗದ್ಗುರು ಹಂಪಿ ಹೇಮಕೂಟದ ಶ್ರೀ ದಯಾನಂದಪುರಿ ಸ್ವಾಮೀಗಳ ಟ್ರಸ್ಟಿಗಳಾದ ನಾಗೇಶ ಭಾವಿಕಟ್ಟಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆರ್ ಎಸ್ ಪ್ಯಾಟಿಗೌಡರ ನಗರದ ಘಟಕಕ್ಕೆ 11.000/-ರೂ.ವನ್ನು ದೇಣಿಗೆ ನೀಡಿದರು.ವಿರೇಶ ಮಾಶೆಟ್ಟಿ. ಈರಣ್ಣ ಕೊಪ್ಪಳ,ಅಮರೇಶ ಕೋಚಿ, ರೇವಣಸಿದ್ಧ ಭಾಪ್ರಿ,ಶಿವಶಂಕರ ಗೋದಿ, ಶ್ರೀಕಾಂತ ಕ್ಯಾತಪ್ಪನವರ, ಪ್ರವೀಣ ಬಸರಕೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿಜಯಪುರ ಜಿಲ್ಲಾ ದೇವಾಂಗ ಸಮಾಜದ ಸಂಘಟನಾ ಕಾರ್ಯದರ್ಶಿ ಆನಂದ ಹುಲಮನಿ ನಿರೂಪಿಸಿದರು.ಪ್ರವೀಣ ಬಸರಕೋಡ ಸ್ವಾಗತಿಸಿದರು.ಬಿ ಕೆ ಅಪ್ಪಣ್ಣ ವಂದಿಸಿದರು.