ಸನ್ಮಾನಗಳು ಸೇವೆಗೆ ಸ್ಫೂರ್ತಿ ನೀಡುತ್ತವೆ:ದಾಕ್ಷಾಯಣಿ ಎಸ್ ಅಪ್ಪ

ಕಲಬುರಗಿ:ಸೆ.6:ಸನ್ಮಾನ, ಪ್ರಶಸ್ತಿಗಳು ಸೇವೆಗೆ ಸ್ಫೂರ್ತಿ ನೀಡಿ ಸಾಧನೆಯ ಮಾರ್ಗಕ್ಕೆ ಕೊಂಡೊಯ್ಯುತ್ತವೆ ಎಂದು ಶ್ರೀ ಶರಣಬಸವೇಶ್ವರ ಸಂಸ್ಥಾನದ ಚೇರಪರ್ಸನರಾದ ಡಾ.ದಾಕ್ಷಾಯಣಿ ಅಪ್ಪ ಹೇಳಿದರು. ನಿನ್ನೆ ಶರಣಬಸವೇಶ್ವರ ಸಂಸ್ಥಾನದಲ್ಲಿ ಮಹಾದಾಸೋಹಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ 39ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಕನ್ನಡ ಜಾನಪದ ಪರಿಷತ್ ಕಲಬುರ್ಗಿ ಉತ್ತರ ಹಾಗೂ ದಕ್ಷಿಣ ವಲಯದ ವತಿಯಿಂದ ಹಮ್ಮಿಕೊಂಡ “ಕಲ್ಯಾಣ ರತ್ನ” ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ ಹೂವಿನಿಂದ ಕಿತ್ತು ತಂದ ಮಕರಂದದಿಂದ ಮಾಡಿದ ಜೇನು.. ಹೂಳಗಳಿಗೆ ದಕ್ಕುವದಿಲ್ಲಾ, ಎಂದಾದ ಮೇಲೆ ವಾಮಮಾರ್ಗದಿಂದ ಬಂದ ಸಂಪತ್ತು ಉಳಿಯಲು ಸಾಧ್ಯವೇ? ಅನ್ಯಾಯದಿಂದ ಬಂದ ಹಣ ಹೊತ್ತು ಮುಳುಗುವವರೆಗೆ, ಕಾಯಕದಿಂದ ಬಂದ ಸಂಪತ್ತು ಜೀವ ಇರುವವರೆಗೆ ಅದಕ್ಕಾಗಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೆವೆ ಎಂಬ ಭಾವ ತೊರೆದು ಕಾಯಕ ಮಾಡುತ್ತಿದ್ದೇವೆ ಎಂಬ ಭಾವದಿಂದ ಕಾರ್ಯ ಮಾಡಿದರೆ ಮನಸ್ಸಿಗೆ ಆನಂದ ಸಿಗುವುದರೊಂದಿಗೆ ಸಂತೃಪ್ತಿ ಜೀವನ ನಮ್ಮದಾಗುತ್ತದೆ. ಕನ್ನಡ ಜಾನಪದ ಪರಿಷತ್ತ ನನ್ನನ್ನು ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ. ನಾವು ನೀವು ಕೂಡಿಕೊಂಡೆ ಕಲ್ಯಾಣ ಭಾಗದಲ್ಲಿರುವ ರತ್ನಗಳನ್ನು ಗುರ್ತಿಸಿ ರಾಷ್ಟ್ರಕ್ಕೆ ಪರಿಚಯಿಸುವ ಕಾರ್ಯ ಮಾಡೋಣ ಎಂದು ಮಾರ್ಮಿಕವಾಗಿ ನುಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ ಬಸವಣ್ಣನವರು ಹೇಳಿದಂತೆ ಪುಣ್ಯವೆಂದರಿಯೇ, ಪಾಪವೆಂದರಿಯೇ, ಸ್ವರ್ಗವೆಂದರಿಯೇ, ನರಕವೆಂದರಿಯೇ ಹರಹರ ಮಹಾದೇವ ಶಿವಶರಣಯೆರ ಧನ್ಯ ನೋಡಯ್ಯ ಹರಹರ ಕೂಡಲಸಂಗಮದೇವಯ್ಯ ನಿಮ್ಮನರ್ಚಿಸಿ ಪೂಜಿಸಿ ನಿಶ್ಚಿಂತನಾದೆ, ಎನ್ನುವ ಹಾಗೆ ಮಾತೋಶ್ರೀ ದಾಕ್ಷಾಯಣಿ ತಾಯಿಯು ಜ್ಞಾನ ದಾಸೋಹದೊಂದಿಗೆ ಮಕ್ಕಳಲ್ಲಿಯೇ ದೈವತ್ವವನ್ನು ಕಂಡು ಭೂವಿಯಲ್ಲಿಯೇ ಸ್ವರ್ಗ ಸೃಷ್ಟಿ ಮಾಡಿದ್ದಾರೆ ಎಂದು ನುಡಿದರು.ಕನ್ನಡ ಜಾನಪದ ಪರಿಷತ್ ಉತ್ತರ ವಲಯದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಪ್ರಶಸ್ತಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ದಿವ್ಯ ಸಾನಿಧ್ಯ ಮಹಾದಾಸೋಹ ಪೀಠಾಧಿಪತಿಗಳಾದ ಡಾ. ಶರಣಬಸಪ್ಪ ಅಪ್ಪ ವಹಿಸಿದರು. ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಚವದಾಪುರ ಹಿರೇಮಠದ ಪೂಜ್ಯ ಶ್ರೀ ಡಾ. ರಾಜಶೇಖರ ಶಿವಾಚಾರ್ಯರು, ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ, ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಿರಂಜನ ನಿಷ್ಠಿ ಆಗಮಿಸಿದರು. ಕಾರ್ಯಕ್ರಮದಲ್ಲಿ ಕುಮಾರಿ ಮಹೇಶ್ವರಿ ಅಪ್ಪ, ಕೋಮಲ ಅಪ್ಪ,ಶಿವಾನಿ ಅಪ್ಪ ಕುಲಸಚಿವ ಅನಿಲಕುಮಾರ ಬಿಡವೆ,ಹಾಗೂ ಕನ್ನಡ ಜಾನಪದ ಪರಿಷತ್ ಪದಾಧಿಕಾರಿಗಳಾದ ದಕ್ಷಿಣ ವಲಯದ ಅಧ್ಯಕ್ಷರಾದ ಸಿದ್ದಲಿಂಗಪ್ಪ ಬಾಗಲಕೋಟಿ, ಕಾರ್ಯದರ್ಶಿಯಾದ ಸಿದ್ದರಾಮ ತಳವಾರ, ಶರಣು ಜೆ. ಪಾಟೀಲ,ಶ್ರವಣಕುಮಾರ ಮಠ, ಮಲಕಾರಿ ಪೂಜಾರಿ, ಸೋಮೇಶ ಶರಣಬಸವೇಶ್ವರ ಸಂಸ್ಥಾನದ ಪದಾಧಿಕಾರಿಗಳು ಉಪನ್ಯಾಸಕರು ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕ ಜನ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ ಸ್ಮರಣಾರ್ಥ ಆಯೊಜಿಸಿದ ಮಹಾರಾಜ ಟಿ20 ಟ್ರೋಫಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಗುಲಬರ್ಗಾ ಮೈಸ್ಟಿಕ್ಸ್ ತಂಡದ ನಾಯಕರಾದ ಮನೀಷ್ ಪಾಂಡೆ ಸೇರಿದಂತೆ ಎಲ್ಲಾ ಆಟಗಾರರಿಗೂ ಸಂಸ್ಥೆಯವತಿಯಿಂದ ಆಶೀರ್ವದಿಸಿ, ಅಭಿನಂದಿಸಲಾಯಿತು.