ಸನ್ನಿ ಮಹಾರಾಜ ಹುಟ್ಟುಹಬ್ಬ: ರಕ್ತದಾನ ಶಿಬಿರ

ರಾಯಚೂರು,ಆ.೩ – ಸನ್ನಿ ಮಹಾರಾಜ ಅಭಿಮಾನಿಗಳ ಬಳಗದಿಂದ ಬಿಜೆಪಿ ಯುವ ನಾಯಕ ಸನ್ನಿ ಮಹಾರಾಜ ಅವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ನಗದಲ್ಲಿ ಆಚರಣೆ ಮಾಡಿದರು.
ಸನ್ನಿ ಮಹಾರಾಜ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ರಿಮ್ಸ್ ಆಸ್ಪೆತ್ರೆಯಲ್ಲಿ ೫೦ ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿ
೫೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಬುಕ್ಸ್ ಮತ್ತು ಕಿಟ್ ಗಳನ್ನು ನೀಡಿದ್ದಾರೆ.. ರಿಮ್ಸ್ ಆಸ್ಪತ್ರೆಯಲ್ಲಿ ಇರುವಂತಹ ೩೦೦ಕ್ಕೂ ಹೆಚ್ಚು ರೋಗಿಗಳಿಗೆ ಊಟದ ಕಿಟ್ಟುಗಳನ್ನು ನೀಡಿ ಸಹಾಯ ಮಾಡಲಾಯಿತು.ಹಾಗೂ ಆಶಾಪುರ ರಸ್ತೆಯಲ್ಲಿ ಬರುವ ಲಲಿತ ವೃದ್ರಾಶ್ರಮದಲ್ಲಿ ನೂರು ಜನ ವೃದ್ಧರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಸನ್ನಿ ಮಹಾರಾಜ ಅಭಿಮಾನಿಬಳಗದ ಸೂರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.