ಸನ್ನಿ ಬಿನ್ನಿ ವಿರುದ್ಧ ಹೇಳಿಕೆ ನೀಡಲು ಯೋಗ್ಯರಲ್ಲ – ಚಂದ್ರಶೇಖರ್

ರಾಯಚೂರು, ಮೇ.೨೮- ಪ್ರಭಾಕರ್ ರೆಡ್ಡಿ ಹಾಗೂ ಫೋಗಲ್ ಪ್ರವೀಣ ರೆಡ್ಡಿ ಅವರೇ ಹೇಳಿಕೆಯನ್ನು ನೀಡುವಾಗ ಎಚ್ಚರಿಕೆಯಿಂದ ಯೋಚಿಸಿ ಹೇಳಿಕೆಯನ್ನು ನೀಡಬೇಕೆಂದು ಬಿಜೆಪಿ ಕಾರ್ಯದರ್ಶಿ ಚಂದ್ರಶೇಖರ್ ಹೇಳಿದರು.
ಸನ್ನಿ ಬಿನ್ನಿ ಯಾರೆಂದು ರಾಯಚೂರಿನ ಎಲ್ಲಾ ನಿವಾಸಿಗಳಿಗೆ ಗೊತ್ತಿದೆ. ಅವರ ಬಗ್ಗೆ ಮಾತನಾಡಲು ನೀವು ಯೋಗ್ಯರಲ್ಲ. ಸನ್ನಿ ಬಿನ್ನಿ ಕಾಂಪೌಂಡ್ ನಲ್ಲಿ ಇದ್ದರೇನೆ ಎಲ್ಲರಿಗೂ ಒಳ್ಳೆಯದು.ಆದರೆ ಅವರು ಕಾಂಪೌಂಡ್ ಹೊರಗಡೆ ಬಂದರೆ ಯಾರಿಗೂ ಒಳ್ಳೆಯದಲ್ಲ ಆದ್ದರಿಂದ ಇಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ಕೊಡುವುದು ಇಲ್ಲಿಗೆ ನಿಲ್ಲಿಸಬೇಕು ಎಂದು ಎಚ್ಚರಿಸಿದರು.