ಸನ್ನಿ ಡಿಯೋಲ್ ಸದ್ಯ ಯಾವುದೇ ಫಿಲ್ಮ್ ಮಾಡುವುದಿಲ್ಲವಂತೆ! ಗದರ್ ೨ ಯಶಸ್ಸಿನ ನಂತರವೂ ’ತಾರಾ ಸಿಂಗ್’ ದಿವಾಳಿಯಾದರೇ?

ಗದರ್ ೨ ಫಿಲ್ಮ್ ನ ಯಶಸ್ಸಿನ ನಂತರವೂ ಸನ್ನಿ ಡಿಯೋಲ್ ತಾನು ದಿವಾಳಿಯಾಗಿದ್ದೇನೆ ಮತ್ತು ಇನ್ನು ಮುಂದೆ ಸಿನಿಮಾ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆಂಬ ವರದಿ ಬಂದಿದೆ. ಮೊನ್ನೆಯಷ್ಟೇ ಗದರ್೨ ಯಶಸ್ಸಿನ ನಂತರ ಸನ್ನಿ ಡಿಯೋಲ್ ತಮ್ಮ ಸಂಭಾವನೆ ೫೦ ಕೋಟಿಗೆ ಏರಿಸಿದ್ದಾರೆ…. ಎಂದೆಲ್ಲ ಹೇಳಲಾಗಿತ್ತು. ಗದರ್ ೨ ಚಿತ್ರದಲ್ಲಿ ತಾರಾ ಸಿಂಗ್ ಪಾತ್ರದಲ್ಲಿ ನಟಿಸಿರುವ ಸನ್ನಿ ಡಿಯೋಲ್ ತಮ್ಮ ಚಿತ್ರದ ಬಗ್ಗೆ ಚರ್ಚೆಯಲ್ಲಿದ್ದಾರೆ. ಅವರ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಗಳಿಕೆ ಮಾಡುತ್ತಿದೆ. ಈ ಚಿತ್ರ ಹಲವು ದಾಖಲೆಗಳನ್ನು ಮುರಿದು ೫೦೦ ಕೋಟಿ ಕ್ಲಬ್‌ನ ಸಾಲಿಗೆ ಕೊಂಡೊಯ್ದಿದೆ.
ಇದೀಗ ಸನ್ನಿ ಡಿಯೋಲ್ ಬಗ್ಗೆ ಒಂದು ದೊಡ್ಡ ಸುದ್ದಿ ಬರುತ್ತಿದ್ದು, ಇದು ಅವರ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ.
ಸನ್ನಿ ಡಿಯೋಲ್ ಸ್ವತಃ ನಿರ್ಮಾಪಕನಾಗಿ ದಿವಾಳಿಯಾಗಿರುವುದಾಗಿ ಘೋಷಿಸಿದ್ದಾರೆ ಮತ್ತು ಈಗ ಯಾವುದೇ ಚಲನಚಿತ್ರವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಸನ್ನಿ ಅವರು ತಾನು ಚಲನಚಿತ್ರವನ್ನು ಮಾಡಿದಾಗಲೆಲ್ಲಾ ಅವರು ದಿವಾಳಿಯಾಗುತ್ತಾರೆ ಎಂದು ಹೇಳಿದರು. ಮನರಂಜನಾ ಪ್ರಪಂಚದ ಬಗ್ಗೆ ಮಾತನಾಡಿದ ನಟ, ’ಮನರಂಜನಾ ಪ್ರಪಂಚವು ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದೆ’ ಎಂಬತ್ತಲೂ ಗಮನ ಹರಿಸಿದರು.
ಬಂದ ಹಣವೆಲ್ಲ ಮಗನ ಚಿತ್ರಕ್ಕೆ ಖರ್ಚಾಯಿತು:
ಸನ್ನಿ ಡಿಯೋಲ್ ಅವರಿಗೆ ದೊರೆತ ಗದರ್ ೨ ರ ಹಣ ಎಲ್ಲಿ ಹೋಯ್ತು?
ಇತ್ತೀಚೆಗೆ ಅವರು ತಮ್ಮ ಕಿರಿಯ ಮಗ ಕರಣ್ ಡಿಯೋಲ್ ರ ’ಪಲ್ ಪಲ್ ದಿಲ್ ಕೆ ಪಾಸ್’ ಚಿತ್ರವನ್ನು ನಿರ್ದೇಶಿಸಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಅವರು ತಮ್ಮ ಎಲ್ಲಾ ಹಣವನ್ನು ಈ ಚಿತ್ರದಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ಬ್ಯಾಂಕ್‌ನಿಂದ ಸಾಲವನ್ನೂ ತೆಗೆದುಕೊಂಡಿದ್ದಾರೆ.
ಚಿತ್ರಗಳ ವ್ಯವಹಾರದ ಬಗ್ಗೆ ಮಾತನಾಡಿದ ಗದರ್ ೨ ನ ತಾರಾ ಸಿಂಗ್, ’ಈಗ ನೀವು ನಿಮ್ಮ ಪಿಆರ್ ಮಾಡಬೇಕು, ಓಡಬೇಕು ಮತ್ತು ಅವರು ಥಿಯೇಟರ್‌ಗಳಲ್ಲಿ ಸುಲಭದಲ್ಲಿ ನಿಮಗೆ ಜಾಗ ಕೂಡಾ ನೀಡುವುದಿಲ್ಲ’ ಎಂದರು.
ಈಗ ಒಬ್ಬರ ಚಿತ್ರಗಳು ಮಾತ್ರ ಇರಬೇಕೆಂದು ಅವರು ಬಯಸುವುದಿಲ್ಲ. ಕಳೆದ ದಶಕದಲ್ಲಿ ನನ್ನ ಸಿನಿಮಾಗಳಿಗೆ ಸಂಬಂಧಿಸಿದಂತೆ ನಾನು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ನೆನಪಿಸಿದರು.
ನಟನಾಗಿ ಸನ್ನಿ ಡಿಯೋಲ್ ಖುಷಿಯಾಗಿದ್ದಾರೆ: ತಮ್ಮ ಬಗ್ಗೆ ಮಾತನಾಡಿರುವ ಸನ್ನಿ ಡಿಯೋಲ್ ನಟನಾಗಿ ತುಂಬಾ ಖುಷಿಯಾಗಿದ್ದೇನೆ ಎಂದಿದ್ದಾರೆ. ನಾನು ನಿರ್ದೇಶಕನಾದೆ, ನಿರ್ಮಾಪಕನಾದೆ .ನಾನು ಕೂಡ ಹಲವು ರೀತಿಯ ಪಾತ್ರಗಳನ್ನು ಮಾಡಿದ್ದೇನೆ ಎಂದರು.

ಬಾಲಿವುಡ್ ತಾರೆಯರನ್ನು ಟೀಕಿಸಿದ ವಿವೇಕ್ ಅಗ್ನಿಹೋತ್ರಿ “ಬಾಲಿವುಡ್ ಸಿನೆಮಾ ಇಷ್ಟೊಂದು ಮೂರ್ಖ ಯಾಕಾಯ್ತು?”

ಬಾಲಿವುಡ್ ತಾರೆಯರನ್ನು ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಟೀಕಿಸಿದ್ದಾರೆ. ಅವರು ತಮ್ಮ ಬಹಿರಂಗ ಶೈಲಿ ಮತ್ತು ವಾಕ್ಚಾತುರ್ಯಕ್ಕಾಗಿ ಉದ್ಯಮದಲ್ಲಿ ಪ್ರಸಿದ್ಧರಾಗಿದ್ದಾರೆ. ವಿವೇಕ್ ಆಗಾಗ ಬಾಲಿವುಡ್ ತಾರೆಯರನ್ನು ಒಂದಲ್ಲ ಒಂದು ವಿಷಯಕ್ಕೆ ಟಾರ್ಗೆಟ್ ಮಾಡುತ್ತಾರೆ. ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಯೊಂದರಿಂದ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಬಾಲಿವುಡ್ ತಾರೆಯರನ್ನು ಗುರಿಯಾಗಿಸಿಕೊಂಡಿದ್ದಾರೆ.


“ಕೆಲವು ನಟರ ಕಾರಣದಿಂದಾಗಿ ಬಾಲಿವುಡ್ ಸಿನಿಮಾಗಳು ಸಿಲ್ಲಿಯಾಗಿ ಕಾಣುತ್ತವೆ” ಎಂದಿರುವರು. ಈ ಸ್ಟಾರ್ ಗಳಿಂದಾಗಿ ತನ್ನ ವೃತ್ತಿಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದೂ ನುಡಿದರು. ಇಂತಹ ಚಿಂತನೆ ಮಾಡಿದವರು ಉದ್ಯಮದಿಂದ ನಿವೃತ್ತಿಯಾಗಬೇಕು ಎನ್ನುವ ಅನಿಸಿಕೆ ಅವರದು.
ಬಾಲಿವುಡ್ ಸೂಪರ್‌ಸ್ಟಾರ್‌ಗಳನ್ನು ಟೀಕಿಸಿದ ದಿ ಕಾಶ್ಮೀರ್ ಫೈಲ್ಸ್ ನ ನಿರ್ದೇಶಕರು, ’ನಾನು ಇದನ್ನು ನನ್ನ ಬಗ್ಗೆ ಹೆಮ್ಮೆ ಪಡಲು ಹೇಳುತ್ತಿಲ್ಲ, ಆದರೆ ನಾನು ಸತ್ಯವನ್ನು ಹೇಳುತ್ತಿದ್ದೇನೆ. ನಾನು ಕೆಲಸ ಮಾಡುವ ಫಿಲ್ಮ್ ಗಳಲ್ಲಿನ ಸ್ಟಾರ್ ಗಳು ವಿದ್ಯಾವಂತರಲ್ಲ ಎಂದು ನಾನು ಅರಿತುಕೊಂಡೆ. ಈ ಲೌಕಿಕತೆಯ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ಆದರೆ ನಾನು ಆ ಜನರಿಗಿಂತ ಬಹಳ ಬುದ್ಧಿವಂತ. ಈ ಜನ ಅದೆಷ್ಟು ಮೂರ್ಖರು ಎಂದರೆ ಅವರ ಜೊತೆಯಲ್ಲಿ ನನ್ನನ್ನೂ ಕೆಳಗಿಳಿಸುತ್ತಿದ್ದಾರೆ. ನನ್ನನ್ನೂ ಮೂರ್ಖನನ್ನಾಗಿ ಮಾಡುತ್ತಾರೆ ಅನ್ನಿಸುತ್ತದೆ.
ಈ ತಾರೆಯರು ಪ್ರೇಕ್ಷಕರನ್ನು ಕೂಡಾ ಮೂರ್ಖರು ಎಂದು ಭಾವಿಸುತ್ತಾರೆ ಎಂದರು.
ತಮ್ಮ ಮಾತನ್ನು ಮುಂದಕ್ಕೆ ತೆಗೆದುಕೊಂಡು ಹೋದ ವಿವೇಕ್, ’ಭಾರತೀಯ ಸಿನಿಮಾ ಯಾಕೆ ಇಷ್ಟೊಂದು ಮೂರ್ಖವಾಗಿದೆ? ಸಿನಿಮಾ ನಿರ್ಮಾಪಕರು ಮತ್ತು ಪ್ರೇಕ್ಷಕರು ಮೂರ್ಖರು ಎಂದು ಈ ತಾರೆಯರು ಭಾವಿಸುತ್ತಾರೆಯೇ?. ಒಬ್ಬ ಬರಹಗಾರ ಮತ್ತು ನಿರ್ದೇಶಕನಾಗಿ, ನನ್ನ ಚಿತ್ರವು ಮೌಲ್ಯಯುತವಾಗಿದೆ. ಯಾವುದೇ ಚಿತ್ರಗಳು ಬಂದರೂ ಅವು ನನ್ನಿಂದಾಗಿ ಗೊತ್ತಾಗದೆ ಆ ’ಮೂಕ’ ನಟರಿಂದ ಗೊತ್ತಾಗೋದು ನಾಚಿಗೆ. ಅದಕ್ಕಾಗಿಯೇ ನಾನು ಬಾಲಿವುಡ್‌ನಿಂದ ಮಾನಸಿಕವಾಗಿ ನಿವೃತ್ತಿ ಪಡೆದಿದ್ದೇನೆ…’ಎಂದರು ನೋವಿನಿಂದ.
ಹೀಗೇಕೆ ಹೇಳಿದರು…ಎನ್ನುವುದು ಅವರಿಗೇ ಗೊತ್ತು.