ಸನ್ನಿದಿ ಸಹಕಾರ ಸಂಘ ಜೆ.ಶರಣಬಸವ ಅಧ್ಯಕ್ಷ- ಹಾಲಿಮಲಂಗ್ ಉಪಾಧ್ಯಕ್ಷ.

ಸಿರವಾರ.ಜ.೪-ಸನ್ನಿಧಿ ಸಹಕಾರ ಸಂಘದ ಅಧ್ಯಕ್ಷರಾಗಿದ ಪ್ರಕಾಶ ಜೇಗರಕಲ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಜರುಗಿದ್ದೂ ಅಧ್ಯಕ್ಷರಾಗಿ ಜೆ.ಶರಣಬಸವ ಹಾಗೂ ಉಪಾಧ್ಯಕ್ಷರಾಗಿ ಹಾಜಿಮಲಂಗ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಂದು ಚುನಾವಣೆ ಅಧಿಕಾರಿ ರವೀಂದ್ರ ಹಂಟೆನೂರು ಘೋಷಣೆ ಮಾಡಿದರು. ಪಟ್ಟಣದ ಸಹಕಾರಿ ಸಂಘದ ಕಛೇರಿಯಲ್ಲಿ ಇತ್ತಿಚೇಗೆ ಚುನಾವಣೆ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಜೇಗರಕಲ್ ಅಳಿಯ ಜೆ.ಶರಣಬಸವ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಾಲಿಮಲಂಗ್ ಅವರು ತಲಾ ಒಂದು ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಸಂಘದಿಂದ ಹಾಗೂ ನಿರ್ಧೇಶಕರಿಂದ ಸನ್ಮಾನ ಸ್ವಿಕರಿಸಿ ಮಾತನಾಡಿದ ಜೆ.ಶರಣಬಸವ ದಿ.ಪ್ರಕಾಶಜೇಗರಕಲ್ ಅವರು ಪ್ರಾರಂಭಿಸಿ ಮುನ್ನಡೆಸಿಕೊಂಡು ಬಂದಿದ್ದರು, ಅವರ ನಿಧನದಿಂದ ತೆರವಾಗಿದ ಈ ಸ್ಥಾನಕ್ಕೆ ನನ್ನಾನೂ ಆಯ್ಕೆ ಮಾಡಿರಿವುದಕ್ಕೆ ಸಂತೋಷ.
ಎಲ್ಲಾ ನಿರ್ಧೇಶಕ ಮಾರ್ಗದರ್ಶನದಲ್ಲಿ ಗ್ರಾಹಕರ, ಠೇವಣಿದಾರರಿಗೆ ಉತ್ತಮ ಸೇವೆ ನೀಡುವಲ್ಲಿ ಶ್ರಮಿಸುವೆ ಎಂದರು. ಸಂಘದಿಂದ ಹೊರತಂದಿರುವ ೨೦೨೧ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಿರ್ಧೇಶಕರಾದ ಚನ್ನಪ್ಪ ಚನ್ನೂರು, ಜೆ.ಶಿವಶಂಕರ,ಮಹಾಂತೇಶ ಮಸ್ಕಿ, ಉಮಾಶಂಕರ ಜೇಗರಕಲ್,ಜೆ.ಮಹಾಂತೇಶ, ಜೆ.ತಾಯಣ್ಣ,ಎಂ.ವಿರುಪಾಕ್ಷಿ, ಸುಮಂಗಲಾ,ಕೆ.ಎಂ.ಯಶೋಧ, ಭಾಗ್ಯಮ್ಮ ದೇವಪುತ್ರಪ್ಪ, ಶಿವಕುಮಾರ, ಮಹೇಶ, ವ್ಯವಸ್ಥಾಪಕ ಪ್ರದೀಪ್, ಸಿಬ್ಬಂದಿ ಜಯ ಸೇರಿದಂತೆ ಇನ್ನಿತರರು ಇದ್ದರು.