ಸನ್ನಡತೆ ಮೇಲೆ 24 ಕೈದಿಗಳ ಬಿಡುಗಡೆ

ಮೈಸೂರು: ಮೇ.23:- ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಮಂದಿ ಕೈದಿಗಳನ್ನು ಸನ್ನಢತೆ ಆಧಾರದ ಮೇಲೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಬಿಡುಗಡೆಗೊಳಿಸಲಾಯಿತು.
ಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಅವರ ಸಮ್ಮುಖದಲ್ಲಿ ಕಾರಾಗೃಹ ಆವರಣದಲ್ಲಿ ಬಿಡುಗಡೆಗೊಂಡ ಕೈದಿಗಳಿಗೆ ನ್ಯಾಯಾಧೀಶರು ಬಿಡುಗಡೆ ಪತ್ರ ನೀಡಿ ಮುಂದಿನ ಜೀವನ ಚೆನ್ನಾಗಿರಲಿ ಎಂದು ಶುಭ ಹಾರೈಸಿದರು.
ನಂತರ ಮಾತನಾಡಿದ ಅವರು, ಕೈದಿಗಳು ಜೈಲಿನಲ್ಲಿ ಪಡೆದ ವೃತ್ತಿ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಬಂಧು-ಬಳಗದೊಂದಿಗೆ ಉತ್ತಮ ಜೀವನ ನಡೆಸಲಿ ಎಂದು ಶುಭ ಹಾರೈಸಿದರು.
ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ಮಾತನಾಡಿ, ಕಳೆದ ಜೂನ್‍ನಲ್ಲಿ 31 ಮಂದಿಯ ಕಡತ ಸಲ್ಲಿಸಲಾಗಿದ್ದು, ಅದರಲ್ಲಿ ನಾಲ್ಕು ಮಂದಿಯ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಬ್ಬರ ಅರ್ಜಿಯನ್ನು ರಾಜ್ಯಪಾಲರು ತಿರಸ್ಕರಿಸಲಾಗಿದ್ದು, ಒಬ್ಬರ ಅರ್ಜಿಯನ್ನು ಮರು ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರಾಗೃಹ ಜನರನ್ನು ಇಟ್ಟುಕೊಳ್ಳುವ ಸ್ಥಳವಲ್ಲ. ನ್ಯಾಯದಾನ ಪದ್ದತಿಯನ್ನು ಕಾನೂನು ಬಾಹಿರ ಚಟುವಟಿಕೆಯನ್ನು ಮಾಡಿದವರಿಗೆ ಈ ತರಹದ ಶಿಕ್ಷಾ ವಿಧಾನಗಳಿರುತ್ತವೆ. ಅದನ್ನು ಜಾರಿಗೊಳಿಸುವ ಜೊತೆಗೆ ಅವರ ಮನಪರಿವರ್ತನೆ ಮಾಡುವ ಗುರತರವಾದ ಜವಾಬ್ದಾರಿ ಕಾರಾಗೃಹದ ಮೇಲೆ ಇರುತ್ತದೆ. ಶಿಕ್ಷೆಯನ್ನು ಜಾರಿಗೊಳಿಸುವುದ ಜತೆಗೆ ಅವರನ್ನು ಶಿಕ್ಷಣವನ್ನು ನೀಡಲಾಗುತ್ತದೆ ಎಂದರು.
ಇಲ್ಲಿಗೆ ಬಂದಾಗ ಖೈದಿ ಎಂದು ನೋಡದೆ ವ್ಯಕ್ತಿಯಾಗಿ ನೋಡುತ್ತೇವೆ. ಆತನಲ್ಲಿರುವ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತೇವೆ. ಸನ್ನಢತೆ ಆಧಾರದ ಮೇಲೆ ಬಿಡುಗಡೆ ಮಾಡುವುದು ಜೀವನ ನಡೆಸಲು ನೀಡುವ ಎರಡನೇ ಅವಕಾಶದಂತೆ. ಅದಕ್ಕೆ ಸಮಾಜವೂ ಅನುವು ಮಾಡಿಕೊಡಬೇಕು. ಹೊಸ ಮನಷ್ಯರಾಗಿ ಸ್ವೀಕರಿಸಬೇಕು ಎಂದು ಮನವಿ ಮಾಡಿದರು.
ಬಿಡುಗಡೆಯಾದ ಕೈದಿಗಳು
ರಾಜಸ್ಥಾನದ ಸಾವಲ್ ಸಿಂಗ್, ಪುತ್ತೂರಿನ ರಮೇಶ, ಉಡುಪಿಯ ಸುರೇಶ ಹರಿಜನ, ಹಾಸನದ ಪ್ರಶಾಂತ, ಮೈಸೂರಿನ ನಾಗರಾಜು, ಎಚ್.ಕೆ.ಪುಟ್ಟ, ಚಾಮರಾಜ ನಗರದ ರಾಮದಾಸ ನಾಯ್ಕ, ಕುಳ್ಳೇಗೌಡ, ಸುಂದ್ರಪ್ಪ, ತಿಮ್ಮ, ನಂಜನಗೂಡಿನ ಎಸ್.ಎಂ.ಸತೀಶ್ ಗೌಡ, ಶ್ರೀನಿವಾಸ, ಎಸ್.ನಟರಾಜ, ಜನಾರ್ಧನ, ನಿಂಗಪ್ಪ,ಮದ್ದೂರಿನ ಮಂಜುನಾಥ, ಸೋಮವಾರ ಪೇಟೆಯ ತಮ್ಮಯ್ಯ, ಬಾಗಲಕೋಟೆಯ ರಿಯಾಜ್, ಮಳವಳ್ಳಿಯ ಸಿದ್ದೇಗೌಡ, ಹಾಸನದ ಎಂ.ಆರ್. ಸೋಮಶೇಖರ, ರಾಮೇಗೌಡ, ಮಂಡ್ಯದ ಎ.ಬಿ.ವಾಸು, ಸೋಮವಾರ ಪೇಟೆಯ ಗುರುಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗಮ್ಮ. ಬಿಡುಗಡೆಯಾದವರು.
ಕಾರ್ಯಕ್ರಮದಲ್ಲಿ ಕಾರಾಗೃಹ ಇಲಾಖೆಯ ಜೈಲರ್ಗಳಾದ ಧರಣೇಶ್, ಗೀತಾ, ಅಮರ್ ಸೇರಿ ಇನ್ನಿತರರು ಸಿಬ್ಬಂದಿ ಇದ್ದರು.