ಸನಾತನ ಸಂಸ್ಥೆಯಿಂದ ನಡೆದ ಗುರು ಪೂರ್ಣಿಮಾ ಮಹೋತ್ಸವ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.14 ಪಟ್ಟಣದ ರಾಷ್ಟ್ರೋತ್ಥಾನ ಶಾಲೆಯ ಸಭಾಂಗಣದಲ್ಲಿ ಬುಧವಾರ  ಸಾಯಂಕಾಲ ಸನಾತನ  ಸಂಸ್ಥೆಯಿಂದ ಗುರುಪೂರ್ಣಿಮೆಯ ಮಹೋತ್ಸವ ಆಚರಿಸಲಾಯಿತು  .
ಕಾರ್ಯಕ್ರಮದ ಆರಂಭದಲ್ಲಿ ಸನಾತನ ಸಂಸ್ಥೆಯ ಪ್ರೇರಣಾ ಸ್ಥಾನ ಪರಮ ಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆಯೊಂದಿಗೆ ಮಾಡಲಾಯಿತು ನಂತರ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಡಾ.ಜಯಂತ ಬಾಳಾಜಿ ಅಠವಲೆ ಇವರು ಗುರುಪೂರ್ಣಿಮೆಯ ನಿಮಿತ್ತ ಸಮಾಜಕ್ಕೆ ನೀಡಿದ ಸಂದೇಶವನ್ನು ಓದಲಾಯಿತು.
ಹಲವು ಸಮಸ್ಯೆಗಳು ಒಂದೇ ಪರಿಹಾರ ಸಾಧನೆಯಿಂದ ಹಿಂದು ರಾಷ್ಟ್ರ ಈ ವಿಷಯದಲ್ಲಿ ನೀಡಿದ ಮಾರ್ಗದರ್ಶನದ ವಿಡಿಯೋ ಸಿಡಿ ತೋರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಶ್ರೀ ಬಸವರಾಜ್ ಗರಗ ಇವರು ಕಾರ್ಯಕ್ರಮದಲ್ಲಿ ಮಾತನಾಡಿ  ಇವತ್ತಿನ ಸಮಾಜದಲ್ಲಿ ನಡೆಯುತ್ತಿರುವ ಧರ್ಮಹಾರಣೆ ಮತ್ತು ಧರ್ಮ ಶಿಕ್ಷಣದ ಅವಶ್ಯಕತೆ ಮತ್ತು ದೇವತೆಗಳ ಚಿತ್ರಗಳನ್ನ ಮನೆಯಲ್ಲಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಮೇಲೆ ಹಾಕಲಾಗುತ್ತದೆ ನಂತರ ಉಪಯೋಗಿಸಿದ ನಂತರ ಅದನ್ನು ಕಸದ ತೊಟ್ಟಿಗೆ ಹಾಕುವುದರಿಂದ ದೇವತೆಗಳಿಗೆ ಅವಮಾನ ಮಾಡಿದಂತಾಗುತ್ತದೆ ಇದನ್ನು ತಡೆಯಲು ನಾವೆಲ್ಲರೂ ಪ್ರಯತ್ನಿಸಬೇಕು ಮತ್ತು ಪ್ರತಿಯೊಬ್ಬರು ಹಣೆ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು ಎಂದು ನಮ್ಮ ಸಂಸ್ಕೃತಿಯ ಬಗ್ಗೆ ಧರ್ಮದ ಆಚರಣೆಯನ್ನು ಮಾಡಲು ಕರೆ ನೀಡಿದರು.
ನಂತರ  ವಕ್ತಾರರಾದ ಸನಾತನ ಸಂಸ್ಥೆಯ ವಿಜಯಲಕ್ಷ್ಮಿ ಕಲ್ಲನಗೌಡರ ಇವರು. ಭಾರತದ ಸರ್ವ ಶ್ರೇಷ್ಠತೆ ಎಂದರೆ ಅದು ಗುರುಶಿಷ್ಯ ಪರಂಪರೆ. ಸಮಾಜದ ಮತ್ತು ವ್ಯಕ್ತಿಯ ಉನ್ನತಿಯ ಹಾಗೂ ರಕ್ಷಣೆಯ ಕಾರ್ಯವನ್ನ ಮಾಡುತ್ತಾ ಬಂದಿದೆ ಇದಕ್ಕೆ ಉದಾಹರಣೆ ಭಗವಾನ್ ಶ್ರೀ ಕೃಷ್ಣ ಹಾಗೂ ಅರ್ಜುನ ಆರ್ಯ ಚಾಣಕ್ಯ ಚಂದ್ರಗುಪ್ತ , ವಿದ್ಯಾರಣ್ಯ ಹರಿಹರರಾಯ ಹೀಗೆ ಅನೇಕ ಗುರು-ಶಿಷ್ಯ ಪರಂಪರೆಗಳು ನಮಗೆ ಧರ್ಮಾದಿಷ್ಟಕರನ್ನಾಗಲು ಪ್ರೇರಣೆಯನ್ನು ನೀಡುತ್ತವೆ. ನಾವು ಯಾವುದೇ ಒಂದು ಕಾರ್ಯವನ್ನ ಯಶಸ್ವಿಯಾಗಿ ಮಾಡಲು ಅದಕ್ಕೆ ಭಗವಂತನ ಅಧಿಷ್ಠಾನ ಬೇಕು ಇದಕ್ಕಾಗಿ ನಾವು ಸಾಧನೆಯನ್ನು ಮಾಡೋದು ಅವಶ್ಯಕವಾಗಿದೆ ಸಾಧನೆಯಿಂದ ಆತ್ಮಬಲ ವೃದ್ಧಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸನಾತನ ಧರ್ಮದ ಸಂಗೀತಾ ಜನ್ನು, ಪೂಜಾ, ಹಾಗೂ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.